More

    ಪಾತಾಳ್ ಲೋಕಕ್ಕಿಳಿದ ಅನುಷ್ಕಾ, ಮೊದಲ ಬಾರಿಗೆ ವೆಬ್ ಸಿರೀಸ್ ನಿರ್ಮಾಣ

    ನವದೆಹಲಿ: ಈ ಹಿಂದೆ ‘ಎನ್​ಎಚ್-10’, ‘ಫಿಲೌರಿ’ ಮತ್ತು ‘ಪರಿ’ ಚಿತ್ರಗಳನ್ನು ನಿರ್ವಿುಸಿದ್ದ ಅನುಷ್ಕಾ ಶರ್ಮ, ಈಗ ಮತ್ತೆ ನಿರ್ವಪಕಿಯಾಗಿದ್ದಾರೆ. ಈ ಬಾರಿ ಅವರು ತಮ್ಮ ಕ್ಲೀನ್ ಸ್ಲೇಟ್ ಫಿಲಂಸ್ ಅಡಿಯಲ್ಲಿ ಒಂದು ವೆಬ್ ಸಿರೀಸ್ ನಿರ್ವಿುಸಿದ್ದು, ಆ ವೆಬ್ ಸಿರೀಸ್ ಇದೇ ಮೇ 15ರಂದು ಅಮೆಜಾನ್ ಪ್ರೖೆಮ್ ವಿಡಿಯೋ ಸ್ಪಷೆಲ್​ನಲ್ಲಿ ಸ್ಟ್ರೀಮ್ ಆಗಲಿದೆ.

    ಇದು ಅನುಷ್ಕಾ ಶರ್ಮ ನಿರ್ವಣದ ಮೊದಲ ವೆಬ್ ಸಿರೀಸ್. ‘ಎನ್​ಎಚ್-10’ ಚಿತ್ರಕ್ಕೆ ಕಥೆ ಬರೆದಿದ್ದ ಸುಧೀರ್, ಈ ವೆಬ್ ಸಿರೀಸ್​ಗೂ ಕಥೆ ಬರೆದಿದ್ದಾರೆ. ನೀರಜ್ ಕಬಿ, ಗುಲ್ ಪನಾಗ್, ಸ್ವಸ್ತಿಕಾ ಮುಖರ್ಜಿ ಮುಂತಾದವರು ಅಭಿನಯಿಸಿದ್ದಾರೆ. ಈ ಹಿಂದೆ ತಮ್ಮ ನಿರ್ವಣದ ಮೂರೂ ಚಿತ್ರಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದ ಅನುಷ್ಕಾ, ಈ ವೆಬ್ ಸಿರೀಸ್​ನಲ್ಲಿ ಯಾವುದೇ ಪಾತ್ರ ಮಾಡಿಲ್ಲ. ದುಡ್ಡು ಹಾಕಿ, ನಿರ್ವಣದಲ್ಲಷ್ಟೇ ಭಾಗಿಯಾಗಿದ್ದಾರೆ.

    ಇದನ್ನೂ ಓದಿ: VIDEO| ತರಕಾರಿ ಕತ್ತರಿಸುವಾಗ ಸನ್ನಿ ಲಿಯೋನ್​ ಬೆರಳು ಕಟ್! ಗಾಬರಿಯಾದ ಪತಿ ಮಾಡಿದ್ದೇನು?

    ಇನ್ನು ‘ಪಾತಾಳ್ ಲೋಕ್’, ಡಾರ್ಕ್ ಥ್ರಿಲ್ಲರ್ ಜಾನರ್​ಗೆ ಸೇರಿದ ಕಥೆಯಂತೆ. ಸದ್ಯಕ್ಕೆ ಈ ವೆಬ್ ಸಿರೀಸ್​ನ ಕಥೆ ಏನು ಎಂದು ನಿರ್ಮಾಣ ಸಂಸ್ಥೆ ಬಹಿರಂಗ ಪಡಿಸದಿದ್ದರೂ, ಅಂಡರ್

    ವರ್ಲ್ಡ್, ರಾಜಕೀಯ, ಪೊಲೀಸ್ ವ್ಯವಸ್ಥೆಯ ಸುತ್ತ ಈ ವೆಬ್ ಸಿರೀಸ್ ಸುತ್ತಲಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಈ ಕಥೆಯನ್ನು ಅದೆಷ್ಟು ಗೌಪ್ಯವಾಗಿ ಇಡಲಾಗಿದೆ ಎಂದರೆ, ಇತ್ತೀಚೆಗೆ ಬಿಡುಗಡೆಯಾದ 40 ಸೆಕೆಂಡ್​ಗಳ ಟೀಸರ್​ನಲ್ಲಿ ಯಾವುದೇ ಪಾತ್ರಧಾರಿಯನ್ನೂ ತೋರಿಸಲಾಗಿಲ್ಲ. ಅದರ ಬದಲು ಗ್ರಾಫಿಕ್ಸ್​ನಲ್ಲಿ ಒಂದಿಷ್ಟು ಬಿಡಿ ಬಿಡಿ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts