More

  ಡೀಸೆಲ್ ದರ ಏರಿಕೆಯಿಂದ ಲಾರಿ ಉದ್ಯಮಕ್ಕೆ ಸಂಕಷ್ಟ
  ಮಂಗಳೂರು : ರಾಜ್ಯ ಸರ್ಕಾರ ಡಿಸೇಲ್ ಬೆಲೆ ಏರಿಸಿರುವುದರಿಂದ ಲಾರಿ ಉದ್ಯಮಕ್ಕೆ ಹೆಚ್ಚು ನಷ್ಟವಾಗಲಿದ್ದು ಮಾಲೀಕರು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ದಕ್ಷಿಣ ಕನ್ನಡ ಟ್ರಕ್ ಮಾಲೀಕರ ಅಸೋಸಿಯೇಷನ್‌ನ ಅಧ್ಯಕ್ಷ ಸುಶಾಂತ್ ಶೆಟ್ಟಿ ತಿಳಿಸಿದ್ದಾರೆ.
  ಡೀಸೆಲ್ ಬೆಲೆ ಏರಿಕೆಯಾದರೂ ಸರ್ಕಾರಿ ಸ್ವಾಮ್ಯದ ಬಂದರು, ಕಚ್ಚಾ ತೈಲ, ಆಹಾರ ಸಾಮಾಗ್ರಿ ಸರಕು ನಿರ್ವಹಣೆಗೆ ಬಳಸಲಾಗುವ ಲಾರಿಗಳ ಬಾಡಿಗೆಯನ್ನು ಏರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಲಾರಿಗಳಿಗೆ ಟನ್ / ಕಿ.ಮೀ. ಲೆಕ್ಕದಲ್ಲಿ ಸರ್ಕಾರ ನಿಗದಿತ ದರ
  ಕಡ್ಡಾಯಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
  ಮಂಗಳೂರು ಬಂದರಿನಿಂದ ಕಲ್ಲಿದ್ದಲು ಕಲಬೆರಕೆ ಹಾಗೂ ಅಕ್ರಮ ಸಾಗಾಟದ ಆರೋಪಗಳಿದ್ದು ಲಾರಿ ಮಾಲೀಕರಿಗೆ ಫ್ಯಾಕ್ಟರಿಗಳಲ್ಲಿ ಸಮಯ ನಷ್ಟದ ಜತೆಗೆ ಅನುಮಾನದಿಂದ ನೋಡುವಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ ಮಂಗಳೂರು ಬಂದರು ಪ್ರದೇಶದಲ್ಲಿ ಸುರಕ್ಷಿತ ಲಾರಿ ಪಾರ್ಕಿಂಗ್‌ಗೆ ಬಹಳ ಸಮಯದಿಂದ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದೇವೆ .ಈಗ ಲಾರಿಗಳ ಟಯರ್, ಬ್ಯಾಟರಿ ಕಳ್ಳತನ ಅಧಿಕಗೊಂಡಿದೆ. ಅಧಿಕ ಟೋಲ್ ಶುಲ್ಕದ ಭಾರ, ಹಾಲ್ಟಿಂಗ್ ಬಾಡಿಗೆಗೆ ನಿಯಮವಿಲ್ಲದಿರುವುದು ಲಾರಿ ಮಾಲೀಕರನ್ನು ಚಿಂತೆಗೀಡು ಮಾಡಿದೆ.
  ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಬಾರಿ ಪ್ರತಿಭಟನೆ ಮಾಡಿದ್ದೇವೆ. ಇನ್ನು ಕೂಡಾ ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಕೈಗೊಳ್ಳುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  See also  ಕ್ಷುಲ್ಲಕ ಕಾರಣಕ್ಕೆ 6 ವರ್ಷದ ಬಾಲಕನನ್ನು ಶಾಲೆಯ ಮೇಲ್ಛಾವಣಿಯಿಂದ ಎಸೆದ ಶಿಕ್ಷಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts