ನ.9ಕ್ಕೆ ಅಂತರಂಗ ಬಹಿರಂಗ ತಂಡದ ಎರಡು ಹಾಸ್ಯ ನಾಟಕಗಳ ಪ್ರದರ್ಶನ

drama
Published on

ಬೆಂಗಳೂರು: ಅಂತರಂಗ ಬಹಿರಂಗ ತಂಡದ ಎರಡು ನಗೆ ನಾಟಕಗಳ ಪ್ರದರ್ಶನ ನ.9 ಶನಿವಾರ ನಡೆಯಲಿದೆ.

ಎನ್.ಆರ್.ಕಾಲೋನಿಯಲ್ಲಿರುವ ಡಾ.ಸಿ.ಅಶ್ವಥ್ ಕಲಾ ಭವನದಲ್ಲಿ ಸಂಜೆ 4.30ಕ್ಕೆ ಮೊದಲೀಯಾರ್ ರಚನೆಯ ಎಅಂ.ರಾಮರಾವ್ ಅನುವಾದಿಸಿರುವ ‘ಅನುಮಾನದ ಅವಾಂತರ’ ನಾಟಕ ಹಾಗೂ 7.30ಕ್ಕೆ ಭೀಷ್ಮರಾಮಯ್ಯ ರಚನೆಯ ಮಿ.ರಾವ್ ಆ್ಯಂಡ್ ಅಸೋಸಿಯೇಟ್ಸ್ ಎಂಬ ಹಾಸ್ಯ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿವೆ.

ನಾಟಕಗಳನ್ನು ವಿಕಾಸ್ ಎಸ್. ಮತ್ತು ಬಾಷ್ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net