

ಕುಂದಾಪುರ: ಕಲೆಯಲ್ಲಿ ಕಲಿತಷ್ಟೂ ಬಾಕಿ ಉಳಿದಿರುತ್ತದೆ. ಪರಿಪೂರ್ಣ ಕಲೆ ಅರಿತವರು ಇರಲಾರರು. ಬಗೆದಷ್ಟೂ ಆಳ ಇರುವ ಕಲೆಯ ಕುರಿತು ಆಸಕ್ತಿ ಇದ್ದರೆ ಮನೋಲ್ಲಾಸ ಉಂಟಾಗುತ್ತದೆ ಎಂದು ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ್ ಹೇಳಿದರು.
ತ್ರಿವರ್ಣ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಪರಂಪರಾ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಕಲಾವಿದ ಹರೀಶ್ ಸಾಗಾ, ಉಡುಪಿಯ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ ನಿರ್ದೇಶಕ ಡಾ.ಯು.ಸಿ.ನಿರಂಜನ್, ಕುಂದಾಪುರದ ನಿವೃತ್ತ ಪ್ರಾಂಶುಪಾಲ ಡಾ.ಜಿ.ಎಚ್.ಪ್ರಭಾಕರ್ ಶೆಟ್ಟಿ, ಕುಂದಾಪುರ ವೆಂಕಟರಮಣ ಪಿ.ಯು. ಕಾಲೇಜು ಸಂಸ್ಕೃತ ಉಪನ್ಯಾಸಕಿ ಮಮತಾ ರೈ ಉಪಸ್ಥಿತರಿದ್ದರು.
ಕಲಾಪ್ರದರ್ಶನದಲ್ಲಿ ಚಿತ್ರಗಳನ್ನಿಟ್ಟ ಪ್ರೊ.ರೇವತಿ, ಶಿಕ್ಷಕಿ ಲತಾ, ನೀತಾ ಪೈ, ಅಶ್ವಿನಿ ಶೆಟ್ಟಿ, ಅನುಷಾ ನಾಯರ್, ಸಂತೋಷ್ ಭಟ್, ಪ್ರಸಾದ್ ಆರ್.ಆಚಾರ್ಯ, ಸಂಜನಾ ಶ್ರೀನಿವಾಸ, ಉಜ್ವಲ್, ಅನಿರುದ್ಧ್ ಆನಂದ್, ಮಾನ್ವಿ ಪೈ, ಶರಣ್ ಆರ್.ಕುಮಾರ್ ಅವರನ್ನು ಗೌರವಿಸಲಾಯಿತು. ಸುಲಕ್ಷಣಾ ರಮೇಶ್ ನಿರೂಪಿಸಿದರು. ಲತಾ ಭಾಸ್ಕರ್ ಸ್ವಾಗತಿಸಿ, ರೇವತಿ ಬಿ. ವಂದಿಸಿದರು.