ವಿನಿಶ್ ಕುಮಾರ್‌ಗೆ ಪ್ರಥಮ ಸ್ಥಾನ

vinish
Published on

ಗಂಗೊಳ್ಳಿ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗಂಗೊಳ್ಳಿ ಸೆಂಟರ್‌ನ ವಿನಿಶ್ ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾನೆ. ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ 5ನೇ ತರಗತಿ ವಿದ್ಯಾರ್ಥಿ. ಕಾವ್ರಾಡಿಯ ವಿಜಯ್ ಕುಮಾರ್ ಹಾಗು ಅನುಷಾ ಸಿ.ಬಂಗೇರ ದಂಪತಿ ಪುತ್ರ. ಸಂಸ್ಥೆ ಶಿಕ್ಷಕರಾದ ಪ್ರಸನ್ನ ಕೆ., ಸುನೀತಾ ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net