

ಹೆಬ್ರಿ: ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನ ಸಮಗ್ರ ಮಾಹಿತಿ ಒಳಗೊಂಡ ದೇವಸ್ಥಾನ ವೈಬ್ಸೈಟನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಗುರುವಾರ ಅನಾವರಣಗೊಳಿಸಿದರು.
ದೇಗುಲ ಸ್ವಾಗತ ಸಮಿತಿ ಉದ್ಘಾಟನೆ ಹಾಗೂ ರಥಬೀದಿಯಲ್ಲಿ ಅಳವಡಿಸಿದ ದಾರಿದೀಪಗಳ ಉದ್ಘಾಟನೆ ನಡೆಯಿತು. ಸ್ವಾಗತ ಸಮಿತಿ ಸಂಚಾಲಕರಾಗಿ ಸಂದೀಪ್ ಶೆಟ್ಟಿ ಕಾರ್ಯದರ್ಶಿಯಾಗಿ ತಿರುಮಲೇಶ್, ನೂರಾರು ಜನ ಸಮಿತಿ ಸದಸ್ಯರು ಸೇರ್ಪಡೆ ಗೊಂಡರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಕೆ.ಶಾಂತರಾಮ ಸೂಡ, ಕಾರ್ಯನಿರ್ವಹಣಾಧಿಕಾರಿ ಹಾಗೂ ಉಡುಪಿ ತಹಸೀಲ್ದಾರ್ ಗುರುರಾಜು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಜ್ ಕುಮಾರ್ ಶೆಟ್ಟಿ, ದಿನೇಶ್ ಪೂಜಾರಿ, ಸಂತೆಕಟ್ಟೆ ರಾಮದಾಸ್ ನ್ಯಾಕ್, ಲಲಿತಾಂಬಾ ಆನಂದಗೌಡ, ರಾಮ ಕುಲಾಲ್ ಪಕ್ಕಾಲ್, ರಂಜಿತ್ ಪ್ರಭು, ಶಾಂತಾ ಆರ್.ಶೆಟ್ಟಿ, ತಾಂತ್ರಿಕ ಸಲಹೆಗಾರ ಸಂತೋಷ ಕುಲಾಲ್ ಉಪಸ್ಥಿತರಿದ್ದರು.