ಜನರಿಗೆ ಆರೋಗ್ಯ ಮಾಹಿತಿ

gan
Published on

ಕುಂದಾಪುರ: ಮನೆಮನೆಯಲ್ಲಿ ನಿತ್ಯವೂ ಆರೋಗ್ಯ ತಪಾಸಣೆ ನಡೆಯಬೇಕಿದ್ದು, ಜನರಿಗೆ ಆರೋಗ್ಯದ ಬಗ್ಗೆ ಸೂಕ್ತ ಮಾಹಿತಿ ಒದಗಿಸಬೇಕು ಎಂದು ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ಅಧ್ಯಕ್ಷ ಶೇಖರ್ ಎಂ.ಶೆಟ್ಟಿ ಹೇಳಿದರು.

ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್, ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರು, ಗ್ರಾಮ ಪಂಚಾಯಿತಿ ಇಡೂರು-ಕುಂಜ್ಞಾಡಿ ಹಾಗೂ ನಮ್ಮ ಭೂಮಿ ಸಿಡಬ್ಲ್ಯುಸಿ ಸಂಸ್ಥೆಯ ಸಹಯೋಗದಲ್ಲಿ ಇಡೂರು-ಕುಂಜ್ಞಾಡಿಯಲ್ಲಿ ಗುರುವಾರ ಮನೆ ಮನೆಗೆ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸಾವಿತ್ರಿ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸದಸ್ಯ ಸತೀಶ್ ಕುಮಾರ್ ಶೆಟ್ಟಿ ಚಿತ್ತೂರು ರೋಟರಿ ಸೌಲಭ್ಯದ ಮಾಹಿತಿ ನೀಡಿದರು. ನಮ್ಮ ಭೂಮಿ ಸಂಸ್ಥೆಯ ನರಸಿಂಹ ಗಾಣಿಗ, ಗ್ರಾಮ ಪಂಚಾಯಿತಿ ಸದಸ್ಯೆ ಸುಮತಿ ಗೌಡ, ಆಶಾ ಕಾರ್ಯಕರ್ತೆ ಸುಶೀಲಾ, ಸುಜಾತಾ ಹಾಗೂ ಸಂಜೀವಿನಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರೇಮಲತಾ ಸ್ವಾಗತಿಸಿದರು. ಪ್ರೇಮ ಕಾರ್ಯಕ್ರಮ ನಿರೂಪಿಸಿದರು. ರತ್ನಾವತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net