ಹೆಬ್ರಿ: ಇತಿಹಾಸ ಪ್ರಸಿದ್ಧ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಕ್ಷೇತ್ರದ ತಂತ್ರಿಗಳಾದ ಕೆ.ಜಿ.ವಿಟ್ಠಲ ಹಾಗೂ ಅರ್ಚಕ ಪಿ.ಕೃಷ್ಣ ಅಡಿಗ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ನೆರವೇರಿದವು.
ಬೆಳಗ್ಗೆ ಪುಣ್ಯಾಹವಾಚನ, ಕಲಶಾಭಿಷೇಕ ಮಹಾಪೂಜೆ, ಉತ್ಸವ ಬಲಿ, ಪಲ್ಲಕ್ಕಿ, ಚಂದ್ರಮಂಡಲ ರಥ ಓಕುಳಿಯಾಟ, ಮಹಾಪೂಜೆ, ನಿತ್ಯಬಲಿ ನಡೆಯಿತು. ಹುಲಿ ಕುಣಿತ, ಚೆಂಡೆ ಕುಣಿತ ಹಾಗೂ ಸಿಡಿಮದ್ದು ಪ್ರದರ್ಶನ ಭಕ್ತರ ಗಮನ ಸೆಳೆಯಿತು.
ಸೋಮವಾರ ರಾತ್ರಿ ದೀವಟಿಕೆ ಸಲಾಮ್, ಕೊಡಿಪೂಜೆ, ವಾಲಗಮಂಟಪ ಪೂಜೆ, ಓಕುಳಿ, ತೀರ್ಥಯಾತ್ರ ಬಲಿ, ಅವಭೃಥ ಸ್ನಾನ, ಆರಾಟೋತ್ಸವ, ಸೂಟೆಬಲಿ, ಪೂರ್ಣಾಹುತಿ, ಮಂತ್ರಾಕ್ಷತೆ, ಧ್ವಜಾವರೋಹಣ, ಮಹಾಪೂಜೆ, ನಿತ್ಯಬಲಿ, ದೊಡ್ಡರಂಗಪೂಜೆ, ರಂಗಪೂಜೆ ಬಲಿ, ಚಂದ್ರಮಂಡಲ ರಥ ಜರುಗಿತು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಕಾರ್ಯನಿರ್ವಹಣಾಧಿಕಾರಿ ಗುರುರಾಜ್ ಪಿ.ಆರ್., ಅರ್ಚಕ ಕೃಷ್ಣ ಅಡಿಗ, ಸಮಿತಿ ಸದಸ್ಯರಾದ ರಾಜಕುಮಾರ್ ಶೆಟ್ಟಿ ದೊಡ್ಮನೆ, ದಿನೇಶ್ ಪೂಜಾರಿ ಗರಡಿ ಮನೆ, ಸಂತೆಕಟ್ಟೆ ರಾಮದಾಸ್ ನಾಯ್ಕ ಬುಕ್ಕಿಗುಡ್ಡೆ, ಲಲಿತಾಂಬಾ ಆನಂದ ಗೌಡ ಕುಕ್ಕುಂಜಾರು, ರಾಮ ಕುಲಾಲ್ ಪಕ್ಕಾಲ್, ರಂಜಿತ್ ಪ್ರಭು ಬುಕ್ಕಿಗುಡ್ಡೆ, ಶಾಂತಾ ಆರ್.ಶೆಟ್ಟಿ ವಡ್ಡಮೇಶ್ವರ, ಸಿಬ್ಬಂದಿ ಉಪಸ್ಥಿತರಿರುವರು.
