ಭ್ರಷ್ಟ ರಾಜಕಾರಣಿಯತ್ತ ಶೂ ತೋರಿ 'ಕಳ್ಳ ಕಳ್ಳ' ಎಂದು ಕೂಗಿದ ಜನರು..

Mondal
Published on

ಪಶ್ಚಿಮ ಬಂಗಾಳ: ಭ್ರಷ್ಟ ರಾಜಕಾರಣಿಗಳು ದಾಳಿಗೆ ಒಳಗಾಗಿ ಬಂಧನಕ್ಕೆ ಒಳಗಾಗುವುದು, ವಿಚಾರಣೆಗೆ ಈಡಾಗುವುದು ಮುಂತಾದವೆಲ್ಲ ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಭ್ರಷ್ಟ ರಾಜಕಾರಣಿಯೊಬ್ಬ ಸಾರ್ವಜನಿಕರಿಂದ ಬಹಿರಂಗವಾಗಿ ತೀವ್ರ ಮುಜುಗರಕ್ಕೊಳಗಾದ ಪ್ರಸಂಗವೊಂದು ನಡೆದಿದೆ.

ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ಪಕ್ಷದ ಬಿರ್​ಭುಮ್​ ಜಿಲ್ಲಾಧ್ಯಕ್ಷ ಅನುಬ್ರತ ಮೊಂಡಲ್ ಮುಜುಗರಕ್ಕೆ ಒಳಗಾದವರು. ಮೇವು ಹಗರಣ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಈತನನ್ನು ಇಂದು ವಿಚಾರಣೆಗಾಗಿ ಅಸಾನ್ಸಲ್​ ಎಂಬಲ್ಲಿನ ಸಿಬಿಐ ನ್ಯಾಯಾಲಯಕ್ಕೆ ಕರೆ ತರಲಾಗಿತ್ತು.

ಈ ಸಂದರ್ಭದಲ್ಲಿ ಮೊಂಡಲ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಶೂ ತೋರಿ 'ಕಳ್ಳ ಕಳ್ಳ' ಎಂದು ಕೂಗಿದ್ದಾರೆ. ಪೊಲೀಸರ ವಶದಲ್ಲಿದ್ದ ಮೊಂಡಲ್ ಸಾರ್ವಜನಿಕರು ಬಹಿರಂಗವಾಗಿ ವ್ಯಕ್ತಪಡಿಸಿದ ಆಕ್ರೋಶದಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದು ಕಂಡುಬಂತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಂಡಲ್​ನನ್ನು ಸಿಬಿಐ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net