ಸುಳ್ಯ: ಆಡುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ನಷ್ಟ ಉಂಟು ಮಾಡುವ ಕೃಷಿಕರಿಂದ ದಂಡ ವಸೂಲಿ ಮಾಡುವ ಪ್ರಕ್ರಿಯೆಗೆ ಬೆಳ್ಳಾರೆ ಗ್ರಾಪಂ ಮುಂದಾಗಿದೆ.
ಬೆಳ್ಳಾರೆ ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕವಾಗಿ ಪೇಟೆಯಲ್ಲಿ ಸಾಕು ಆಡುಗಳನ್ನು ಬಿಡಬಾರದಾಗಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಇದರ ಕುರಿತು ಕ್ರಮ ಕೈಗೊಳ್ಳದೆ ಪೇಟೆಗೆ ಆಡುಗಳನ್ನು ಬಿಡುತ್ತಿರುವ ದೂರುಗಳು ಬಂದಿರುವುದರಿಂದ ಬುಧವಾರ ಆಡುಗಳನ್ನು ಗ್ರಾಮ ಪಂಚಾಯಿತಿಯಿಂದ ಕಟ್ಟಿ ಹಾಕಿ ಮಾಲೀಕರಿಗೆ ದಂಡ ವಿಧಿಸುವ ಕ್ರಮ ಕೈಗೊಳ್ಳಲಾಗಿದೆ.
ಮುಂದೆ ಸಾಕುಪ್ರಾಣಿಗಳ ಮಾಲೀಕರು ಕ್ರಮ ಕೈಗೊಳ್ಳದೆ ಇದ್ದಲ್ಲಿ ಹೆಚ್ಚಿನ ಮೊತ್ತದ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದೆಂದು ಗ್ರಾಮ ಪಂಚಾಯಿತಿನಿಂದ ಎಚ್ಚರಿಕೆ ನೀಡಲಾಗಿದೆ.