ತೀರ್ಥೊಟ್ಟುವಿನಲ್ಲಿ ಅಡಕೆ ಕೃಷಿ ಕಾರ್ಯಾಗಾರ

New Project (14)
Published on

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ವತಿಯಿಂದ ಲಯನ್ಸ್ ಕ್ಲಬ್ ಬಂಟ್ವಾಳ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಪೂಪಾಡಿ ಕಟ್ಟೆಯ ತೀರ್ಥೊಟ್ಟು ಚಂದ್ರಶೇಖರ್ ಕೊಟ್ಟಾರಿ ನಿವಾಸದಲ್ಲಿ ಅಧಿಕ ಇಳುವರಿಗಾಗಿ ಅಡಕೆ ರೋಗ ನಿವಾರಣೆಯ ಕುರಿತು ಮಾಹಿತಿ ಕಾರ್ಯಗಾರ ಮಂಗಳವಾರ ಜರುಗಿತು.

ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಿಪಿಸಿಆರ್‌ಐ ವಿಟ್ಲದ ಹಿರಿಯ ತಾಂತ್ರಿಕ ಅಧಿಕಾರಿ ಪುರಂದರ ಸಿ.ಕೂಟೇಲು ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಕೃಷಿ ಅಧಿಕಾರಿ ನಂದನ್ ಶೆಣೈ ಇಲಾಖೆಯ ಸಹಾಯಧನದ ಮಾಹಿತಿ ಹಾಗೂ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ಅಧಿಕಾರಿ ಹನುಮಂತ ಕಾಳಗಿ ಯಂತ್ರೋಪಕರಣಗಳ ಸಹಾಯಧನ ಕುರಿತು ವಿವರಿಸಿದರು.

ತೋಟಗಾರಿಕೆ ಇಲಾಖೆ ಪ್ರಭಾರ ಸಹಾಯಕ ಹರೀಶ್, ನರ್ಸರಿ ಹಾಗೂ ಇತರ ಸೌಲಭ್ಯ, ಸಹಾಯಧನದ ಕುರಿತು ವಿವರಿಸಿದರು. ಯೋಜನೆಯ ಬಂಟ್ವಾಳ ವಲಯ ಮೇಲ್ವಿಚಾರಕಿ ರೂಪ ರೈ ಸ್ವಾಗತಿಸಿದರು. ಸೇವಾ ಪ್ರತಿನಿಧಿ ವಸಂತಿ ವಂದಿಸಿದರು. ಯೋಜನೆಯ ಬಂಟ್ವಾಳ ತಾಲೂಕಿನ ಕೃಷಿ ಮೇಲ್ವಿಚಾರಕ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net