ಭಗವಂತನ ಆರಾಧನೆಯಿಂದ ನೆಮ್ಮದಿ

NELLI
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ನೆಲ್ಲಿಗೆ ಬಂದಾಗ ಎಲ್ಲಿಗೆ ಬಂದೆವೋ ಎನ್ನುವಂತಿದೆ. ಅಷ್ಟು ಪ್ರಮಾಣದಲ್ಲಿ ದೇಗುಲ ಅಭಿವೃದ್ಧಿಯಾಗಿದೆ. ಒಂದು ದೇಗುಲವೆಂದರೆ ಗ್ರಾಮಕ್ಕೆ ಹೃದಯವಿದ್ದಂತೆ. ಮನುಷ್ಯನ ಜೀವನಕ್ಕೆ ಸರಿಯಾದ ದಿಕ್ಕು ತೋರುವುದು ದೇಗುಲಗಳು ಮಾತ್ರ. ಭಗವಂತನಿಗೆ ಭಕ್ತಿಯಿಂದ ನಮ್ಮನ್ನು ನಾವು ಸಮರ್ಪಿಸಿದಾಗ ನೆಮ್ಮದಿ ಬದುಕು ನಮ್ಮದಾಗುತ್ತದೆ ಎಂದು ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ನಿಟ್ಟೆ ನೆಲ್ಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ, ಸದ್ಗುರು ಶ್ರೀ ನಿತ್ಯಾನಂದ ಮಂದಿರ ಬ್ರಹ್ಮಕಲಶೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾದ ಕರ್ನಾಟಕ ದಕ್ಷಿಣ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್, ಮುಂಬೈ ಬಂಟರ ಸಂಘ ಸಹ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು, ಬೆಳಗಾವಿ ಬೇವಿನಕೊಪ್ಪ ಆನಂದಾಶ್ರಮದ ಶ್ರೀ ವಿಜಯಾನಂದ ಸ್ವಾಮೀಜಿ ಮಾತನಾಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಶ್ರೀಧರ್ ಟಿ.ಎನ್.ಹುಬ್ಬಳ್ಳಿ, ಚೇತನ್ ಕೋಟ್ಯಾನ್ ಅತ್ತೂರು, ದಿನೇಶ್ ಮೆಂಡನ್ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ಸುನೀಲ್ ಕೆ.ಆರ್. ಸ್ವಾಗತಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.

ನಮ್ಮ ದೇಶದಲ್ಲಿ ಧಾರ್ಮಿಕ ಪ್ರಜ್ಞೆ ಹೆಚ್ಚಳವಾಗಿದೆ. ಸಂಸ್ಕಾರ, ಸಂಸ್ಕೃತಿ ಹೊಂದಿರುವ ಭಾರತದಂತಹ ದೇಶ ಜಗತ್ತಿನಲ್ಲಿ ಮತ್ತೊಂದಿಲ್ಲ. ನಾವು ಅತ್ಯಂತ ಪುಣ್ಯ ಭೂಮಿಯಲ್ಲಿ ಜನಿಸಿದ್ದೇವೆ. ಈ ನೆಲದ ಮಣ್ಣಿನ ಕಣ ಕಣವೂ ಪವಿತ್ರವಾಗಿದೆ. ಹಿಂದು ಸಮಾಜ ಉಳಿಯದಿದ್ದರೇ ಜಗತ್ತು ಶಾಂತಿಯಿಂದ ಇರಲು ಸಾಧ್ಯವಿಲ್ಲ.

-ಪಿ.ಎಸ್.ಪ್ರಕಾಶ್, ಪ್ರಾಂತ ಸಹಕಾರ್ಯವಾಹ, ಕರ್ನಾಟಕ ದಕ್ಷಿಣ ರಾಷ್ಟ್ರೀಯ ಸ್ವಯಂಸೇವಕ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net