

ನವದೆಹಲಿ: ಡ್ರ್ಯಾಗನ್ ಚೀನಾದ 59ಕ್ಕೂ ಹೆಚ್ಚು ಆಪ್ಗಳನ್ನು ನಿರ್ಬಂಧಿಸುವ ಮೂಲಕ ಮೇಕ್ ಇನ್ ಇಂಡಿಯಾ ಸಂಕಲ್ಪ ಈಡೇರಿಸುವ ಪಣ ತೊಟ್ಟಿರುವ ಕೇಂದ್ರ ಸರ್ಕಾರ ದೇಶದ ವಿವಿಧ ಕಂಪನಿಗಳಲ್ಲಿ ಚೀನಾದ ಕೇಂದ್ರೀಯ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ(ಪಿಬಿಒಸಿ)ವಿಸ್ತರಿಸಿರುವ ಹೂಡಿಕೆಯ ಬೇರು ಕಂಡು ದಂಗಾಗಿದೆ.
ಎರಡು ವರ್ಷಗಳ ಹಿಂದಷ್ಟೇ ಆರ್ಬಿಐ ಭಾರತದಲ್ಲಿ ಶಾಖೆ ಆರಂಭಿಸಲು ಪಿಬಿಒಸಿಗೆ ಅನುಮತಿ ಕೊಟ್ಟಿತ್ತು. ಈ ಬ್ಯಾಂಕ್ನ ಮೂಲಕ ಚೀನಾದ ಹಲವು ಕಂಪನಿಗಳು ತಮ್ಮ ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ಪರೋಕ್ಷವಾಗಿ ನಿಯಂತ್ರಿಸಲ್ಪಟ್ಟಿರುವ ಕಂಪನಿಗಳಲ್ಲಿ , ಭಾರತೀಯ ಆರ್ಥಿಕತೆಯಲ್ಲಿ ವ್ಯೂಹಾತ್ಮಕವಾಗಿ ಮಹತ್ವ ಪಡೆದುಕೊಂಡಿರುವ ವಲಯಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಒಲವು ತೋರಿದ್ದವು ಎನ್ನಲಾಗಿದೆ. ಕೇಂದ್ರ ಸರ್ಕಾರ ತನ್ನ ವಿದೇಶಿ ಹೂಡಿಕೆ ನಿಯಮಗಳಿಗೆ ತಿದ್ದುಪಡಿ ತಂದ ಬಳಿಕ ಈ ಹೂಡಿಕೆಗಳ ಮಾಹಿತಿ ಬಹಿರಂಗವಾಗಿದೆ.
ಎಲ್ಲೆಲ್ಲಿ ಪಿಬಿಒಸಿ ಹೂಡಿಕೆ?: ಎಚ್ಡಿಎಫ್ಸಿ- ಶೇ.1, ಇತರ ಹಲವು ಸಂಸ್ಥೆಗಳಲ್ಲಿ ಶೇ.1 ಅಥವಾ ಅದಕ್ಕಿಂತ ಕಡಿಮೆ ಹೂಡಿಕೆ ಇರುವುದರಿಂದ ಗಮನಕ್ಕೆ ಬರುತ್ತಿಲ್ಲ ಪಿರಾಮಲ್ ಎಂಟರ್ಪ್ರೖೆಸಸ್-ಶೇ.0.43(137 ಕೋಟಿ ರೂಪಾಯಿ), ಅಂಬುಜಾ ಸಿಮೆಂಟ್-ಶೇ.32(122 ಕೋಟಿ ರೂಪಾಯಿ), ಎಚ್ಡಿಎಫ್ಸಿ-ಶೇ.1.0 (13,100 ಕೋಟಿ ರೂಪಾಯಿ)
ಹೂಡಿಕೆಯ ಹೊಳೆ: 2019ರಲ್ಲಿ ಸಣ್ಣ ಪಾಲುದಾರ ಕಂಪನಿಯಾಗಿ ಭಾರತಕ್ಕೆಕಾಲಿಟ್ಟ ಪಿಬಿಒಸಿ ಅತಿ ಕಡಿಮೆ ಸಮಯದಲ್ಲಿ ಹಲವಾರು ಕಂಪನಿಗಳ ಪಾಲುದಾರಿಕೆ ಪಡೆಯಿತು. ಆದರೆ ಒಟ್ಟಾರೆ ಎಷ್ಟೆಷ್ಟು ಹೂಡಿಕೆ ಮಾಡಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಇಂದು ಚೀನಾ ಕಂಪನಿಗಳು ಪ್ರಮುಖ ಹೂಡಿಕೆದಾರರಾಗಿ ಹೊರಹೊಮ್ಮಿರುವ ಹಿಂದೆ ಚೀನಾದ ಈ ಕೇಂದ್ರೀಯ ಬ್ಯಾಂಕ್ನ ಪ್ರಭಾವ ಸಾಕಷ್ಟು ಕೆಲಸ ಮಾಡಿದೆ. ತಾಂತ್ರಿಕತೆಯ ಸ್ಟಾರ್ಟಪ್ಗಳು,ರಿಯಲ್ ಎಸ್ಟೇಟ್ ಸೆಕ್ಟೇರ್ನಲ್ಲೂ ತನ್ನ ಹೂಡಿಕೆ ಬೇರನ್ನು ವಿಸ್ತರಿಸಿಕೊಂಡಿದೆ. ಅಲಿಬಾಬಾ, ಪೇಟಿಎಂ ಗ್ರೂಪ್, ಝೋಮ್ಯಾಟೋ, ಬಿಜೂಸ್ನಂಹ ಕಂಪನಿಗಳ ಮೂಲಕ ಭಾರತದಲ್ಲಿ ಹೂಡಿಕೆಯ ಹೊಳೆ ಹರಿಸುತ್ತಿದೆ.