ಡೆತ್​ ನೋಟ್​ ಬರೆದ ನಟಿ ಪಾಯಲ್​ ಘೋಷ್​ ; ನಾನು ಸತ್ತರೆ ಇವರೇ ಕಾರಣ..

Payal Ghosh
Published on

ಮುಂಬೈ: ನಟಿ ಪಾಯಲ್​ ಘೋಷ್​ ಅವರು ಸ್ಯೂಸೈಡ್​ ನೋಟ್​ ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದ್ದು, ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

ಡೇತ್​​ ನೋಟ್​​ನಲ್ಲಿ ಏನಿದೆ?: 'ನಾನು ಪಾಯಲ್ ಘೋಷ್, ನಾನು ಆತ್ಮಹತ್ಯೆ ಅಥವಾ ಹೃದಯಾಘಾತದಿಂದ ಸತ್ತರೆ ಅದಕ್ಕೆ ಕಾರಣರಾದವರು..." ಎಂದು ಬರೆದುಕೊಂಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡ ಪತ್ರದಲ್ಲಿ ಯಾರ ಹೆಸರನ್ನೂ ಹೇಳಿಲ್ಲ, ಯಾವುದೇ ಸೂಚನೆಯನ್ನೂ ನೀಡಿಲ್ಲ. ಅಭಿಮಾನಿಗಳು ಕಾಮೆಂಟ್​​ ಮಾಡುತ್ತಾ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಕೆಯ ಸ್ಯೂಸೈಡ್​ ನೋಟ್​, ಪೂರ್ಣಗೊಳ್ಳಲಿಲ್ಲ. ಇದು ಆಕೆಯ ಅಭಿಮಾನಿಗಳನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.

ಎರಡು ದಿನಗಳ ಹಿಂದಷ್ಟೇ ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ್ದ ನಟಿ, ಈಗ ಆತ್ಮಹತ್ಯೆ ನೋಟ್​ ಬರೆದಿಟ್ಟಿರುವುದರಿಂದ ಎಲ್ಲೆಡೆ ಆತಂಕ ಮನೆಮಾಡಿದೆ. ಕಳೆದ ವರ್ಷ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡಿ, ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿದರು ಎಂದು ನಟಿ ಪಾಯಲ್ ಘೋಷ್ ಹೇಳಿದ್ದರು. ಈಗ ಅರೆ ಬರೆದಿರುವ ಸ್ಯೂಸೈಡ್​ ನೋಟ್​ ಬರೆದಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ. 33 ವರ್ಷದ ಪಾಯಲ್ ಘೋಷ್ ಹಿಂದಿ ಮಾತ್ರವಲ್ಲದೆ ಇಂಗ್ಲಿಷ್, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net