More

    ದುಬೈನಲ್ಲಿ ಐಐಎಂಎಫ್​ ಲೋಗೋ ಅನಾವರಣ; ನಿರ್ದೇಶಕ ಪವನ್ ಒಡೆಯರ್​​ಗೆ ದುಬೈ ಕನ್ನಡಿಗರಿಂದ ಸನ್ಮಾನ

    ಬೆಂಗಳೂರು: ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಯಾಂಡಲ್​ವುಡ್- 2023 (ಐಐಎಂಎಫ್​) ಪ್ರಶಸ್ತಿ ಪ್ರದಾನ ಸದ್ಯದಲ್ಲೇ ನಡೆಯಲಿದ್ದು, ಆ ಕುರಿತ ಲಾಂಛನವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಡೊಳ್ಳು’ ಸಿನಿಮಾ ನಿರ್ಮಾಪಕ, ನಿರ್ದೇಶಕ ಪವನ್ ಒಡೆಯರ್ ದುಬೈನಲ್ಲಿ ಅನಾವರಣಗೊಳಿಸಿದರು.

    ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಾದ ಪೀಟರ್ ಜಾಸನ್ ಮತ್ತು ರಶ್ಮಿ ಪೀಟರ್, ಮಮತಾ ಸಿಂಥಿಲ್ ಸೇರಿದಂತೆ ಹಲವರು ಸಿನಿಮಾ ಮೇಲಿನ ಪ್ರೀತಿಯಿಂದ ‘ಟೀಂ ಸುಪ್ರೀಂ’ ಸಂಸ್ಥೆ ಸ್ಥಾಪಿಸಿದ್ದು, ಈ ಸಂಸ್ಥೆಯಡಿ ಭಾರತೀಯ ಚಿತ್ರರಂಗದ ಶ್ರೇಷ್ಠ ಕಲಾವಿದರನ್ನು ಗುರುತಿಸಿ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-ಸ್ಯಾಂಡಲ್​ವುಡ್​-2023 (ಐಐಎಂಎಫ್​) ಕಾರ್ಯಕ್ರಮದ ಮೂಲಕ ಪ್ರಶಸ್ತಿ ನೀಡಲಿದ್ದಾರೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಐಐಎಂಎಫ್​ ಲೋಗೋ ಅನಾವರಣಗೊಳಿಸಲಾಯಿತು. ನಿರ್ದೇಶಕ ಪವನ್ ಒಡೆಯರ್ ಹಾಗೂ ಟಗರು-ಸಲಗ ಸಿನಿಮಾಗಳ ಸಂಭಾಷಣೆಗಾರ ಮಾಸ್ತಿ ಲೋಗೋ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಪವನ್ ಒಡೆಯರ್​ಗೆ ಸನ್ಮಾನ ನಡೆಸಲಾಯಿತು. ಪವನ್ ಒಡೆಯರ್ ಚೊಚ್ಚಲ ನಿರ್ಮಾಣ, ಸಾಗರ್ ಪುರಾಣಿಕ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಡೊಳ್ಳು’ ಸಿನಿಮಾ ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದ್ದು, ರಾಷ್ಟ್ರಪ್ರಶಸ್ತಿಗೂ ಭಾಜನವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಗಿತ್ತು.

    ಇದನ್ನೂ ಓದಿ: ಸಂಪ್ರದಾಯ ಮತ್ತು ಆಧುನಿಕತೆಯ ಸಂಘರ್ಷ: ‘ಡೊಳ್ಳು’ ಸಿನಿಮಾ ವಿಮರ್ಶೆ

    ಬಳಿಕ ಮಾತನಾಡಿದ ಪವನ್​ ಒಡೆಯರ್, ಇದೊಂದು ಗ್ರೇಟ್ ಇವೆಂಟ್. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ತಮ್ಮ ಕೆಲಸ ಗುರುತಿಸಿ ನೀಡಿರುವ ಗೌರವ ಖುಷಿ ಕೊಟ್ಟಿದೆ. ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿರುವ ‘ಡೊಳ್ಳು’ ಸಿನಿಮಾ ನಿರ್ಮಾಣ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

    ಇದನ್ನೂ ಓದಿ: ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

    ಕನ್ನಡದಲ್ಲಿ ಗೂಗ್ಲಿ, ರೇಮೋ ಮುಂತಾದ ಚಿತ್ರಗಳ ನಿರ್ದೇಶನ ಮಾಡಿರುವ ಪವನ್ ಒಡೆಯರ್​, ಬಾಲಿವುಡ್​ಗೂ ಪದಾರ್ಪಣೆ ಮಾಡಿದ್ದು, ಹಿಂದಿ ಚಿತ್ರವೊಂದಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕಾಶ್ ಎಂಟರ್​ಟೇನ್ಮೆಂಟ್ ಪ್ರೊಡಕ್ಷನ್ಸ್, ಒಡೆಯರ್ ಮೂವೀಸ್, ಆರ್ನ ಕ್ರಿಯೇಟಿವ್ಸ್​ ಮೀಡಿಯಾ ಸಹಯೋಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಿಂದಿ ಚಿತ್ರ ‘ನೋಟರಿ’ಯಲ್ಲಿ ಬೆಂಗಾಲಿ ತಾರೆ ಪರಂಬ್ರತಾ ಉಪಾಧ್ಯಾಯ ಹಾಗೂ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಟಿಸಿದ್ದಾರೆ.

    ದುಬೈನಲ್ಲಿ ಐಐಎಂಎಫ್​ ಲೋಗೋ ಅನಾವರಣ; ನಿರ್ದೇಶಕ ಪವನ್ ಒಡೆಯರ್​​ಗೆ ದುಬೈ ಕನ್ನಡಿಗರಿಂದ ಸನ್ಮಾನ

    ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್​.ಡಿ.ದೇವೇಗೌಡ

    40% ಕಮಿಷನ್​ ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts