More

    40% ಕಮಿಷನ್​ ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹೇಳಿಕೆ

    ಬೆಂಗಳೂರು: ಬಿಜೆಪಿಯ 40% ಕಮಿಷನ್​ ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ಹೇಳಿಕೆ ನೀಡಿದರು.

    ಬಿಬಿಎಂಪಿ ಅಧಿಕಾರಿ ಲೋಕಾಯಕ್ತ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿನ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಹೊರಗೆ ಬಂದಿದೆ. ಒಂದು ಕೋಟಿ ರೂ. ಹಣ, ನೆಲಮಂಗಲದಲ್ಲಿ ಜಮೀನು ಪತ್ತೆಯಾಗಿದೆ ಎಂದು ಅವರು, ಈ ಮೂಲಕ ಬಿಜೆಪಿಯ 40% ಕಮಿಷನ್​ ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್​.ಡಿ.ದೇವೇಗೌಡ

    ಬಿಬಿಎಂಪಿ ಯಾರ ಉಸ್ತುವಾರಿಯಲ್ಲಿ ಇತ್ತು, ಬಿಜೆಪಿಯ 40% ಕಮಿಷನ್​ ಭ್ರಷ್ಟಾಚಾರದ ರೂವಾರಿ ಯಾರು ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.

    ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಮನೆಯಲ್ಲಿ ಕಂತೆ‌ ಕಂತೆ ಹಣ, ಬೆಳ್ಳಿ, ಚಿನ್ನ, ವಿದೇಶಿ ಕರೆನ್ಸಿಗಳು ಪತ್ತೆ!

    ನೆಲಮಂಗಲದಲ್ಲಿ 5 ಎಕರೆ ಜಮೀನು, ಮಲ್ಲೇಶ್ವರದಲ್ಲಿ ಮೂರು‌ ನಿವೇಶನ, ಕೋಟಿಗಟ್ಟಲೆ ಹಣ, ಚಿನ್ನಾಭರಣಗಳು ಸಿಕ್ಕಿವೆ. ಅಧಿಕಾರಿ ಬಳಿ ಇಷ್ಟೊಂದು ಆಸ್ತಿ ಹೇಗೆ ಬಂತು? ಇವೆಲ್ಲವೂ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ, ಸರ್ಕಾರದ 40% ಕಮಿಷನ್ ಆರೋಪಕ್ಕೆ ಇದೂ ಸಾಕ್ಷಿ, ಒಬ್ಬ ಅಧಿಕಾರಿ ಇಷ್ಟು ಆಸ್ತಿ ಮಾಡಿದ್ದಾನೆಂದರೆ ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ, ಇವೆಲ್ಲದಕ್ಕೂ ಸರ್ಕಾರದ ಕುಮ್ಮಕ್ಕಿದೆ ಎಂದು ವೇಣುಗೋಪಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಂಡಾಯ ಶಮನಕ್ಕಾಗಿ ಶಾಸಕರ ಕಾಲು ಹಿಡಿಯಲು ಹೋದ ಜೆಡಿಎಸ್ ಅಭ್ಯರ್ಥಿ!

    ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts