

ಹೈದರಾಬಾದ್: ಸಿನಿಮಾ ನಟ-ನಟಿಯರು ಶೂಟಿಂಗ್ ಸ್ಪಾಟ್ಗೆ ಕಾರ್ ಬಿಟ್ಟು ಯಾರಿಗೂ ಗೊತ್ತಾಗದಂತೆ ಸೈಕಲ್ ಅಥವಾ ಬೈಕ್ನಲ್ಲಿ ಹೋದ ಅದೆಷ್ಟೋ ಘಟನೆಗಳಿವೆ. ಕಳೆದ ವರ್ಷ ನಟ ಸುದೀಪ್, ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ 'ಕೋಟಿಗೊಬ್ಬ 3' ಚಿತ್ರದ ಶೂಟಿಂಗ್ಗೆ ಸೈಕಲ್ನಲ್ಲಿ ಹೋಗಿದ್ದರು.
ಈಗ ತೆಲುಗು ನಟ 'ಪವರ್ ಸ್ಟಾರ್' ಪವನ್ ಕಲ್ಯಾಣ್ ಸಹ ಅದೇ ತರಹ ಮಾಡಿದ್ದಾರೆ. 'ವಕೀಲ್ ಸಾಬ್' ಚಿತ್ರದ ಚಿತ್ರೀಕರಣಕ್ಕೆ ಅವರು ಮೆಟ್ರೋದಲ್ಲಿ ಹೋಗುವ ಮೂಲಕ ಹಲವರಲ್ಲಿ ಹುಬ್ಬೇರಿಸಿದ್ದಾರೆ.
ಇದನ್ನೂ ಓದಿ: ನವೆಂಬರ್ 26ರಂದು ‘ಅಗೋಳಿ ಮಂಜಣ್ಣನ’ ಟೀಸರ್ …
'ವಕೀಲ್ ಸಾಬ್' ಚಿತ್ರದ ಚಿತ್ರೀಕರಣವು ಇದೀಗ ಹೈದರಾಬಾದ್ನ ಮಿಯಾಪುರ್ನಲ್ಲಿ ನಡೆಯುತ್ತಿದೆ. ಶೂಟಿಂಗ್ ಸ್ಪಾಟ್ಗೆ ಯಾಕೆ ಮೆಟ್ರೋದಲ್ಲಿ ಹೋಗಬಾರದು ಎಂದನಿಸಿದ್ದೇ ತಡ, ನಿರ್ಮಾಪಕ ದಿಲ್ ರಾಜು ಮತ್ತು ಆಪ್ತಸಹಾಯಕರು ಮತ್ತು ಬಾಡಿಗಾರ್ಡ್ಗಳ ಜತೆಗೆ ಯಾರಿಗೂ ಗೊತ್ತಾಗದಂತೆ ಪವನ್ ಕಲ್ಯಾಣ್ ಮೆಟ್ರೋ ಹತ್ತಿದ್ದಾರೆ.
ಮಾಧಾಪುರ ಮೆಟ್ರೋ ಸ್ಟೇಶನ್ನಲ್ಲಿ ಹತ್ತಿದ ಅವರು ಅಮೀರ್ಪೇಟೆಯಲ್ಲಿ ಇಳಿದು, ಅಲ್ಲಿಂದ ಇನ್ನೊಂದು ಮೆಟ್ರೋದಲ್ಲಿ ಮಿಯಾಪುರ್ ಸ್ಟೇಶನ್ ತಲುಪಿದ್ದಾರೆ. ಇಷ್ಟೆಲ್ಲಾ ಓಡಾಡಿದರೂ, ಪವನ್ ಕಲ್ಯಾಣ್ ತಮ್ಮ ನಡುವೆ ಇದ್ದಾರೆ ಎಂದು ಸಹಪ್ರಯಾಣಿಕರ್ಯಾರಿಗೂ ಗೊತ್ತಾಗಿಲ್ಲ.
ಅಷ್ಟೇ ಅಲ್ಲ, ಪವನ್ ತಮ್ಮ ಸಹಪ್ರಯಾಣಿಕರ ಜತೆಗೆ ಒಂದಿಷ್ಟು ಉಭಯಕುಶಲೋಪರಿಯನ್ನೂ ನಡೆಸಿದ್ದಾರೆ. ಆದರೆ, ಯಾರಿಗೂ ತಾವು ಮಾತನಾಡುತ್ತಿರುವುದು ಪವನ್ ಕಲ್ಯಾಣ್ ಜತೆಗೆ ಎಂಬ ಸುಳಿವು ಸಿಕ್ಕಿಲ್ಲ ಅದಕ್ಕೆ ಕಾರಣ, ಪವನ್ ಮುಖಕ್ಕೆ ಮಾಸ್ಕ್ ಧರಿಸುವುದರ ಜತೆಗೆ ಕೂಲಿಂಗ್ ಗ್ಲಾಸ್ ಸಹ ತೊಟ್ಟಿದ್ದರು. ಹಾಗಾಗಿ ಅವರೊಬ್ಬ ದೊಡ್ಡ ನಟ ಇರಬಹುದು ಎಂದು ಸಹಪ್ರಯಾಣಿಕರಿಗೆ ಗೊತ್ತಾಗಲಿಲ್ಲವಂತೆ.
ಸದ್ಯ 'ವಕೀಲ್ ಸಾಬ್' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪವನ್ ಆದಷ್ಟು ಬೇಗ ಅದನ್ನು ಮುಗಿಸಿ, ಕೃಷ್ ಜಗಲರ್ಮುಡಿ ಮತ್ತು ಹರೀಶ್ ಶಂಕರ್ ನಿರ್ದೇಶನದ ಚಿತ್ರಗಳಲ್ಲಿ ನಟಿಸಲಿದ್ದಾರೆ. ಇದೆಲ್ಲದರ ಜತೆಗೆ 'ಅಯ್ಯಪನಂ ಕೋಶಿಯಂ'ನ ತೆಲುಗು ರೀಮೇಕ್ನಲ್ಲಿ ಸಹ ಕಾಣಿಸಿಕೊಳ್ಳುತ್ತಿರುವ ಸುದ್ದಿ ಇದೆ.