ನಮ್ಮ ಸುತ್ತಲೂ ಎಂತಹ ಸ್ನೇಹಿತರಿರುವರು ಎಂಬುದು ಮುಖ್ಯ; ಆಪ್ತರಿಗಾಗಿಯೇ ಈ ಸಂದೇಶ ಹಂಚಿಕೊಂಡ್ರ ಪವಿತ್ರಾಗೌಡ | Pavithra Gowda

blank

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಅವರ ಆಪ್ತೆ ಪವಿತ್ರಾ ಗೌಡ(Pavithra Gowda) ಸೇರಿದಂತೆ ಒಟ್ಟು 17 ಆರೋಪಿಗಳು ಜೈಲು ಪಾಲಾಗಿದ್ದು ಗೊತ್ತೆ ಇದೆ. ಜಾಮೀನಿನ ಮೇಲೆ ಹೊರಬಂದ ಬಳಿಕ ಟೆಂಪಲ್​ ರನ್​ ಮಾಡುತ್ತಿದ್ದ ಪವಿತ್ರಾ ಗೌಡ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ.

ಇದನ್ನು ಓದಿ: ನನ್ನ ಅಮ್ಮನಿಗೆ ಈಗೆಲ್ಲಾ ಹೇಳ್ಬೇಡಿ;ಕಾಮೆಂಟ್​​ ಮಾಡುವವರಿಗೆ ಖುಷಿ ಗೌಡ ಕ್ಲಾಸ್​​ | Pavithra gowda

ಇತ್ತೀಚೆಗಷ್ಟೆ ಪವಿತ್ರಾ ಯಾರಿಗೋ ಕೌಂಟರ್​ ನೀಡುವಂತೆ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ, ಮೇಲೊಬ್ಬ ಎಲ್ಲವನ್ನೂ ವೀಕ್ಷಿಸುತ್ತಿರುವನು. ನಿಮ್ಮ ಕಣ್ಣೀರಿನ ಎಲ್ಲ ಹನಿಗಳಿಗೆ ನ್ಯಾಯ ನೀಡುವನು ಎನ್ನುವ ಭಗವದ್ಗೀತೆಯ ಸಂದೇಶವನ್ನು ಹಂಚಿಕೊಂಡಿದ್ದರು. ಇದೀಗೆ ಪವಿತ್ರಾಗೌಡ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮತ್ತೊಂದು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಪ್ರಸ್ತುತ ಹಂಚಿಕೊಂಡಿರುವ ವಿಡಿಯೋದಲ್ಲಿ ಈಗ ಅವರು ಗೆಳೆಯರ ಬಗ್ಗೆ ತಮ್ಮ ಆಲೋಚನೆ ಹೇಗಿದೆ ಎಂಬುದನ್ನು ವಿವರಿಸುವಂತೆ ಕಾಣುತ್ತಿದೆ. ವಿಡಿಯೋದಲ್ಲಿ ಸೌತ್​ ನಟಿ ರಾಶಿ ಖನ್ನಾ ಅವರ ವಿಡಿಯೋ ಇದೆ. ಅದರಲ್ಲಿ ರಾಶಿ ಖನ್ನಾ ನಮ್ಮ ಸುತ್ತ ಯಾವ ಒಳ್ಳೆಯ ಸ್ನೇಹಿತರು ಇರೋದು ಎಷ್ಟು ಮುಖ್ಯ ಎಂಬುದನ್ನು ನಾನು ಅರಿತುಕೊಂಡೆ. ಅದು ನೀವು ಏನು ಎಂಬುದನ್ನು ನಿರ್ಧಾರ ಮಾಡುತ್ತದೆ. ನನಗೆ ಒಳ್ಳೆಯ ಫ್ರೆಂಡ್ಸ್ ಇದ್ದಾರ ಎಂದು ಹೇಳುತ್ತಾರೆ.

ಅಲ್ಲದೆ ಆ ವಿಡಿಯೋದಲ್ಲಿ, ಒಳ್ಳೆಯದನ್ನು ಮಾಡುವ ಗೆಳೆಯರ ಜತೆ ಸದಾ ಇರಿ, ನಿಮ್ಮ ತಳ್ಳುವವರ ಜತೆ ಅಲ್ಲ. ನೀನು ನನ್ನನ್ನು ಭೇಟಿ ಮಾಡಿಯೇ ಇಲ್ಲ, ನೀನು ನನಗೆ ಸಮಯ ಕೊಡಲೇ ಇಲ್ಲ ಎಂದು ಹೇಳುವವರು ಗೆಳೆಯರಲ್ಲ. ಭೇಟಿ ಆಗದಿದ್ದರೂ ಪರವಾಗಿಲ್ಲ ನಾನು ನಿನ್ನ ಪರವಾಗಿ ನಿಲ್ಲುತ್ತೇನೆ ಎನ್ನುವವರು ಸ್ನೇಹಿತರು ಎಂದು ಹೇಳಲಾಗಿದೆ. ಯಾವ ಕಾರಣಕ್ಕೆ ಪವಿತ್ರಾ ಈ ವಿಡಿಯೋ ಹಂಚಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಹುಟ್ಟುಹಾಕುತ್ತಿದೆ. ಪವಿತ್ರಾ ಗೌಡ ಅವರು ಜೈಲಿನಿಂದ ಮರಳಿದ ಬಳಿಕ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ 777 ಬ್ಯೂಟಿಕ್ ರೀಲಾಂಚ್ ಮಾಡುವ ಮೂಲಕ ತಮ್ಮ ಉದ್ಯಮಕ್ಕೆ ಮರಳಿದ್ದಾರೆ.

ಕುತಂತ್ರಗಳನ್ನು ಮೇಲೊಬ್ಬ ನೋಡುತ್ತಿರುವನು; ಹೀಗೆ ಪವಿತ್ರಾಗೌಡ ಕೌಂಟರ್​ ಕೊಟ್ಟಿದ್ದು ಯಾರಿಗೆ? | Pavithra Gowda

Share This Article

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…