

ಬಿಗ್ ಬಾಸ್ ಎಂಟ್ರಿ ಬೆನ್ನಲ್ಲೇ ಸೀಸನ್ 10 ರ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ ಆಗಿ ಸ್ಪರ್ಧಿಸುತ್ತಿರುವ ಪವಿ ಪೂವಪ್ಪ ಅವರ ಹಾಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.
ಮಾಡೆಲಿಂಗ್ ಜಗತ್ತಿನಿಂದ ರಿಯಾಲಿಟಿ ಶೋಗೆ ಕಾಲಿಟ್ಟಂತಹ ಪವಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪವಿ ಪೂವಪ್ಪ ಹಾಟ್ ಫೋಟೋಗಳಿಗೆ ಜನ ನಾನಾ ಕಾಮೆಂಟ್ಗಳನ್ನ ಮಾಡುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಈಗ ಇಬ್ಬರು ಸ್ಪರ್ಧಿಗಳು ದೊಡ್ಮನೆಯೊಳಗಡೆ ಕಾಲಿಟ್ಟಿದ್ದಾರೆ. ಅವರಲ್ಲಿ ಒಬ್ಬರಾಗಿರುವ ಪವಿ ಪೂವಪ್ಪ, 2013ರ ರಿಂದ ಮಾಡಲಿಂಗ್ ಕ್ಷೇತ್ರದಲ್ಲಿದ್ದಾರೆ.
ಪವಿ ಪೂವಪ್ಪ ಪೋಟೋಸ್ಗೆ ಜನ ನಾನಾ ಕಾಮೆಂಟ್ಗಳನ್ನ ಮಾಡುತ್ತಿದ್ದು, 1500ಕ್ಕೂ ಅಧಿಕ ಶೋಗಳನ್ನು ಮಾಡಿರುವ ಮಾಡೆಲ್ ಪವಿ ಪೂವಪ್ಪ.
ಬಿಗ್ಬಾಸ್ ಮನೆಯಲ್ಲಿ ಸದ್ಯ ಬಿಗ್ಬಾಸ್ ಮನೆಯಲ್ಲಿ ನಡೆದ ನೀರೆರಚುವ ಟಾಸ್ಕ್ನಲ್ಲಿ ಸಖತ್ತಾಗಿ ಪರ್ಫಾರ್ಮ್ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಪ್ಯಾಶನ್ ಲೋಕದಲ್ಲಿ ಮಿಂಚುತ್ತಿರುವ ಬೆಡಗಿ ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
ಪವಿ ಪೂವಪ್ಪ ಪೂರ್ಣ ಹೆಸರು, ಪಾನಿಕುಟ್ಟೀರ ಪವಿತ್ರಾ ಪೂವಪ್ಪ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಂತರದಲ್ಲಿ ಪವಿ ತಮ್ಮ ಹೆಸರನ್ನ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ.