ಮಕ್ಕಳಲ್ಲಿರಲಿ ಗುರಿ ಸಾಧನೆಯ ಛಲ

compitition
ಕೆಥೊಲಿಕ್ ಸಭಾ ಕುಂದಾಪುರ ಘಟಕದ ವತಿಯಿಂದ ಅಂತರ್ ಶಾಲಾ ದೇಶ ಭಕ್ತಿ ಗೀತೆ ಹಾಗೂ ನೃತ್ಯ ಸ್ಪರ್ಧೆಗಳು ನಡೆಯಿತು
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ದೇಶಕ್ಕೆ ಸ್ವಾತಂತ್ರೃ ಲಭಿಸಲು ಅಸಂಖ್ಯಾತ ಜನರು ಹೋರಾಡಿದ್ದು, ಜೀವವನ್ನೇ ಅರ್ಪಿಸಿದ್ದಾರೆ. ಮಕ್ಕಳು ಗುರಿ ಸಾಧಿಸುವ ಛಲ ಹೊಂದಬೇಕು ಎಂದು ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಹೇಳಿದರು. ಸ್ವಾತಂತ್ರೋತ್ಸವ ಪ್ರಯುಕ್ತ ಕೆಥೊಲಿಕ್ ಸಭಾ ಕುಂದಾಪುರ ಘಟಕದ ವತಿಯಿಂದ ಶನಿವಾರ ನಡೆದ ಕುಂದಾಪುರ ಪುರಸಭೆ ವ್ಯಾಪ್ತಿಯೊಳಗಿನ ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ದೇಶಭಕ್ತಿ ಗೀತೆ ಹಾಗೂ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನ ಧರ್ಮಗುರು ಪಾವ್ಲ್ ರೇಗೊ ಅಧ್ಯಕ್ಷತೆ ವಹಿಸಿದ್ದರು. ತೀರ್ಪುದಾರ ವಿಲ್ಸನ್ ಒಲಿವೆರಾ ಅನಿಸಿಕೆ ವ್ಯಕ್ತಪಡಿಸಿದರು. ಪಾರ್ವತಿ ಕೊತ್ವಾಲ್ ಮತ್ತು ಆಶರ್ ಆ್ಯಂಟೋನಿ ಮೆಂಡೊನ್ಸಾ ತೀರ್ಪುಗಾರರಾಗಿದ್ದರು. ಶೈಲಾ ಡಿ ಅಲ್ಮೇಡಾ, ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಲ್ಸನ್ ಡಿ ಆಲ್ಮೇಡಾ ಸ್ವಾಗತಿಸಿದರು. ಶಾಂತಿ ಪಿಂಟೊ ವಂದಿಸಿದರು. ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು.

ವಿಭಾಗವಾರು ಸ್ಪರ್ಧೆಗಳು

ಸಮೂಹ ಗೀತೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಶಾಲೆ ಪ್ರಥಮ, ಕೋಡಿ ಬ್ಯಾರೀಸ್ ಸ್ಕೂಲ್ ದ್ವಿತೀಯ, ಹೋಲಿ ರೋಜರಿ ಶಾಲೆ ತೃತೀಯ ಸ್ಥಾನ ಪಡೆಯಿತು. ಪ್ರಾಥಮಿಕ ವಿಭಾಗದ ಸಮೂಹ ನೃತ್ಯದಲ್ಲಿ ಹೋಲಿ ರೋಜರಿ ಪ್ರಥಮ, ಸಂತ ಜೋಸೆಫ್ ದ್ವಿತೀಯ ಹಾಗೂ ಯುಬಿಎಂಸಿ ಶಾಲೆ ತೃತೀಯ ಸ್ಥಾನ ಪಡೆಯಿತು. ಪ್ರೌಢಶಾಲಾ ವಿಭಾಗದ ಸಮೂಹ ಗೀತೆಯಲ್ಲಿ ಶ್ರೀ ವೆಂಕಟರಮಣ ಶಾಲೆ ಪ್ರಥಮ, ಕೋಡಿ ಬ್ಯಾರೀಸ್ ಶಾಲೆ ದ್ವಿತೀಯ, ವಿಕೆಆರ್ ಆಚಾರ್ಯ ಶಾಲೆ ತೃತೀಯ ಸ್ಥಾನಿಯಾಯಿತು. ಪ್ರೌಢಶಾಲೆಯ ಸಮೂಹ ನೃತ್ಯದಲ್ಲಿ ಶ್ರೀ ವೆಂಕಟರಮಣ ಶಾಲೆ ಪ್ರಥಮ, ವಿಕೆಆರ್ ಆಚಾರ್ಯ ಶಾಲೆ ದ್ವಿತೀಯ ಹಾಗೂ ಹೋಲಿ ರೋಜರಿ ಶಾಲೆ ತೃತೀಯ ಸ್ಥಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net