ರೋಗಿಸ್ನೇಹಿ ವೈದ್ಯ ಡಾ.ಎ. ರವಿರಾಜ್: ಆರ್ಥೋ ಚಿಕಿತ್ಸೆಯಲ್ಲಿ ಸಿದ್ಧಹಸ್ತರು, 20 ಸಾವಿರಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆ! Vijayaratna Award 2025

Vijayaratna Award 2025
Published on

Vijayaratna Award 2025 : ‘ವೈದ್ಯೋ ನಾರಾಯಣೋ ಹರಿಃ’ ಅಂದರೆ ವೈದ್ಯ ದೇವರ ಸಮಾನ. ನಾನಾ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆ ಸೇರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಕಾಪಾಡಿ, ಕಾಳಜಿ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುವವರು ವೈದ್ಯರು. ಹಾಗಾಗಿ ಹಿರಿಯರು ವೈದ್ಯರನ್ನು ದೇವರ ಸ್ಥಾನದಲ್ಲಿ ಇರಿಸಿದ್ದಾರೆ. ಈ ಹೇಳಿಕೆಗೆ ಅನ್ವರ್ಥ ಎಂಬ ರೀತಿಯಲ್ಲಿ ಬಹಳಷ್ಟು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹವರ ಸಾಲಿನಲ್ಲಿ ಡಾ. ಎ. ರವಿರಾಜ್ ಸಹ ಒಬ್ಬರು. ಒಮ್ಮೆ ಇವರ ಬಳಿ ಚಿಕಿತ್ಸೆ ಪಡೆದವರು ಎಷ್ಟೇ ದೂರ ಇದ್ದರೂ, ಚಿಕಿತ್ಸೆ ಮುಂದುವರಿಸಲು ಹುಡುಕಿಕೊಂಡು ಹೋಗುತ್ತಾರೆ. ಸೌಮ್ಯ ಸ್ವಭಾವದ, ಸರಳ ಮತ್ತು ಸ್ನೇಹಮಯಿ ವ್ಯಕ್ತಿತ್ವದ ಇವರು ‘ವಿಜಯವಾಣಿ’ ಕೊಡಮಾಡುವ ವಿಜಯರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಾ.ಎ. ರವಿರಾಜ್, ಹಿರಿಯ ಸಲಹೆಗಾರರು, ಮೂಳೆ ಶಸ್ತ್ರಚಿಕಿತ್ಸಕರಾಗಿದ್ದು, ಕೀಲು ಬದಲಿ, ಕ್ರೀಡಾ ಔಷಧಗಳು, ಆಥೋಸ್ಕೊಪಿ ಮತ್ತು ಸಂಕೀರ್ಣ ಆಘಾತಗಳಿಗೆ ಚಿಕಿತ್ಸೆ ನೀಡುವಲ್ಲಿ 20 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದಾರೆ. ಆಥೋಸ್ಕೋಪಿ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಪರಿಣತರಾಗಿರುವ ಇವರು, ಸಾವಿರಾರು ರೋಗಿಗಳಿಗೆ ಮೊಣಕಾಲು, ಸೊಂಟ, ಭುಜ ಮತ್ತು ಮೊಣಕೈ ಬದಲಿ ಶಸ್ತ್ರಚಿಕಿತ್ಸೆಗಳು, ಮೊಣಕಾಲಿನ ಅಸ್ಥಿರಜ್ಜು ಪುನರ್ನಿರ್ವಣ, ಕಾರ್ಟಿಲೆಜ್ ದುರಸ್ತಿ ಮತ್ತು ಕ್ರೀಡಾ ಗಾಯಗಳು, ಆಥೋಸ್ಕೋಪಿಕ್ ಭುಜದ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಸದ್ಯ ನಗರದ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Vijayaratna Award 2025 1

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಡಾ. ಎ. ರವಿರಾಜ್, ಸತ್ಯಸಾಯಿ ಲೋಕಸೇವಾ ಶಾಲೆಯಲ್ಲಿ ಶಿಕ್ಷಣ ಮುಗಿಸಿ, 1995ರಲ್ಲಿ ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದರು. ಬಳಿಕ ಜೆಜೆಎಂ ವೈದ್ಯಕೀಯ ಕಾಲೇಜಿನಿಂದ ಡಿ ಆಥೋ ಪದವಿ, ಮಧುರೈನ ಇನ್​ಸ್ಟಿಟ್ಯೂಟ್ ಆಫ್ ಆಥೋಪೆಡಿಕ್ ರಿಸರ್ಚ್ ಆಂಡ್ ಆಕ್ಸಿಡೆಂಟ್ ಸರ್ಜರಿಯಿಂದ (ಐಒಆರ್​ಎಎಸ್) ಡಿಎನ್​ಬಿ-ಆಥೋ ಪದವಿ ಪಡೆದಿದ್ದಾರೆ. ಮೊದಲಿಗೆ ಬೆಂಗಳೂರಿನ ವಾಕ್ಹಾರ್ಟ್ (Wockhardt) ಆಸ್ಪತ್ರೆಯಲ್ಲಿ ಆಥೋಪೆಡಿಕ್ ಸರ್ಜನ್ ಮತ್ತು ಕನ್ಸಲ್ಟೆಂಟ್ ಆಗಿ ವೃತ್ತಿ ಆರಂಭಿಸಿದ ಡಾ.ರವಿರಾಜ್, ಜಾಯಿಂಟ್ ರೀಪ್ಲೇಸ್​ವೆುಂಟ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸಿದರು. ನಂತರ ಫೋರ್ಟಿಸ್ ಆಸ್ಪತ್ರೆಯಲ್ಲಿ ಸೇವೆ ಮುಂದುವರಿಸಿದರು. ಕಳೆದ 13 ವರ್ಷಗಳಿಂದ ಅಪೋಲೊ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈವರೆಗೂ 4 ಲಕ್ಷಕ್ಕೂ ಅಧಿಕ ರೋಗಿಗಳ ತಪಾಸಣೆ ನಡೆಸಿದ್ದು, 20 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕೀಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಡಾ.ಎ. ರವಿರಾಜ್, ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ. ದುಬೈ, ಅಬುಧಾಬಿ, ಮಲೇಷ್ಯಾ, ಬ್ಯಾಂಕಾಕ್, ನೆದರ್ಲೆಂಡ್, ಅಮೆರಿಕ ಮತ್ತು ಸ್ವಿಡ್ಜರ್ಲೆಂಡ್​ನ ವಿವಿಧ ಕೇಂದ್ರಗಳಿಂದ ಆಥೋಸ್ಕೋಪಿ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಸುಧಾರಿತ ತರಬೇತಿ ಪಡೆದಿದ್ದಾರೆ. ಸ್ವಿಡ್ಜರ್ಲೆಂಡ್​ನ ದಾವೋಸ್​ನಲ್ಲಿ ಸಂಕೀರ್ಣ ಆಘಾತ ಮತ್ತು ಮೂಳೆ ಮುರಿತ ನಿರ್ವಹಣೆಯಲ್ಲಿ ಸ್ನಾತಕೋತ್ತರ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಈ ಎಲ್ಲ ಪದವಿಗಳ ಜತೆಗೆ ರೋಬಾಟಿಕ್ ಶಸ್ತ್ರಚಿಕಿತ್ಸೆಯಲ್ಲೂ ತರಬೇತಿ ಪಡೆದು ನೂರಾರು ಮಂದಿಗೆ ಚಿಕಿತ್ಸೆ ನೀಡಿದ್ದಾರೆ.

ಸಂಧಿವಾತಕ್ಕೆ ಸಾಮಾನ್ಯ ಕಾರಣ

ಇದಕ್ಕೆ ಹಲವು ಕಾರಣಗಳಿವೆ. ತಂದೆ- ತಾಯಿಗೆ ಸಂಧಿವಾತ ಇದ್ದರೆ ಅದು ಮಕ್ಕಳಿಗೂ ‘ಬಳುವಳಿ’ಯಾಗಿ ಬರುತ್ತದೆ. ಅಂತಹವರು 30 ವರ್ಷದ ನಂತರ ಕನಿಷ್ಠ ಎರಡು ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮಧುಮೇಹಿಗಳು ಹಾಗೂ ಥೈರಾಯಿಡ್ ಸಮಸ್ಯೆ ಇರುವವರಲ್ಲೂ ಸಂಧಿವಾತ ಸಾಮಾನ್ಯ. ಇದಲ್ಲದೆ ಆಟೋ ಇಮ್ಯೂನ್ ರೋಗಗಳು ಮತ್ತು ಸೋಂಕುಗಳಿಂದ ಹಾಗೂ ಮೂಳೆ ಮುರಿತ, ಅತಿಯಾದ ಬೊಜ್ಜು ಸಹ ಸಂಧಿವಾತಕ್ಕೆ ಕಾರಣ. ಇದರ ಹೊರತಾಗಿ ವೃದ್ಧಾಪ್ಯದಲ್ಲಿ ವಯೋಸಹಜವಾಗಿಯೂ ಈ ಸಮಸ್ಯೆ ಬರುವ ಸಾಧ್ಯತೆಗಳು ಇವೆ. ದೇಹದಲ್ಲಿ ಪ್ರೋಟಿನ್ ಮತ್ತು ಯೂರಿಕ್ ಅಂಶ ಅಗತ್ಯಕ್ಕಿಂತ ಹೆಚ್ಚು ಇದ್ದರೂ ಸಂಧಿವಾತ ಬರುತ್ತದೆ.

ಚಿಹ್ನೆ ಮತ್ತು ಲಕ್ಷಣಗಳು

ಮಂಡಿ, ಮೊಣಕಾಲು, ಮೊಣಕೈ, ಮುಂಗೈ ಸೇರಿ ಕೀಲುಗಳಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಸಂಬಂಧಿಸಿದ ಕೀಲುಗಳು ನಿರಂತರ ಕಾರ್ಯನಿರ್ವಹಿಸಿದಾಗ ನೋವು ಹೆಚ್ಚಾಗಿ ಊತ ಸಹ ಕಾಣಿಸಿಕೊಳ್ಳುತ್ತದೆ. ಸಂಧಿವಾತದ ರೋಗಿಗಳ ಕೀಲುಗಳಲ್ಲಿ ಲೂಬ್ರಿಕೆಂಟ್ ಸೈನೋವಿಯಲ್ ದ್ರವ ಅಧಿಕವಾಗಿರುತ್ತದೆ. ಇದು ಕೀಲುಗಳ ಉರಿಯೂತಕ್ಕೆ ಕಾರಣವಾಗುತ್ತದೆ. ಅರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಸಂಬಂಧಪಟ್ಟ ಕೀಲುಗಳ ಚಲನೆ ನಿಂತುಹೋಗುತ್ತದೆ. ಕೆಲ ರೋಗಿಗಳಲ್ಲಿ ನಿರ್ದಿಷ್ಟ ಕೀಲಿನ ಭಾಗದಲ್ಲಿ ನೋವಿನೊಂದಿಗೆ ಕೆಂಪು ಬಣ್ಣ ಕಾಣಿಸುತ್ತದೆ. ಕೆಲವರಲ್ಲಿ ಬೆಳಗ್ಗೆ ಎದ್ದಾಗ, ಸಂಜೆ ವೇಳೆ, ಮಳೆಗಾಲ ಮತ್ತು ಚಳಿಗಾಲದಲ್ಲಿ ನೋವು ಮತ್ತಷ್ಟು ಹೆಚ್ಚಲಿದ್ದು, ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು.

Raviraj

ಚಿಕಿತ್ಸೆಯ ವಿಧಗಳು...

ಸಾಂಪ್ರದಾಯಕ ಹಾಗೂ ರೋಬಾಟಿಕ್ ಎಂದು ಎರಡು ವಿಧದಲ್ಲಿ ಚಿಕಿತ್ಸೆ ಲಭ್ಯವಿದೆ. ಸದ್ಯ ಬಹುತೇಕ ಆಸ್ಪತ್ರೆಗಳಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿಯೇ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ರೋಬಾಟಿಕ್ ಯಂತ್ರದ ದುಬಾರಿ ವೆಚ್ಚ ಮತ್ತು ತಂತ್ರಜ್ಞಾನದ ಬಗ್ಗೆ ಅರಿವಿನ ಕೊರತೆ. ಸಾಂಪ್ರದಾಯಿಕ ವಿಧಾನದಲ್ಲಿ ನಿಖರತೆ ಕಡಿಮೆ ಇರಲಿದ್ದು, ನೋವಿನೊಂದಿಗೆ ಚೇತರಿಕೆ ಅವಧಿ ಹೆಚ್ಚಾಗಲಿದೆ. ಅದೇ ರೋಬಾಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದವರು ಅತಿಕಡಿಮೆ ಸಮಯ ಹಾಗೂ ಕಡಿಮೆ ನೋವಿನೊಂದಿಗೆ ಸುಧಾರಿಸಿಕೊಳ್ಳಬಹುದು. ಇದಲ್ಲದೆ ಚಿಕಿತ್ಸೆ ನಂತರ ಆಸ್ಪತ್ರೆ ವಾಸವೂ ಕಡಿಮೆ ಆಗಲಿದೆ. ಇದು ಸೋಂಕುರಹಿತ ಹಾಗೂ ಕಡಿಮೆ ನೋವಿನಿಂದ ಕೂಡಿದ್ದು, ಬೇಗ ಗುಣ ಹೊಂದಲು ಸಹಕಾರಿಯಾಗಲಿದೆ. ಈ ವಿಧಾನದಲ್ಲಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳು ಮರುದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದಾಗಿದೆ.

ಗೌರವ ಹುದ್ದೆಗಳು

ಪೀರ್-ರಿವ್ಯೂಡ್ ಜರ್ನಲ್​ಗಳಲ್ಲಿ ಡಾ. ರವಿರಾಜ್ ಅವರ 40ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಬಂಧಗಳು ಪ್ರಕಟಗೊಂಡಿವೆ. ಇವರು ಮೂಳೆಚಿಕಿತ್ಸೆಯಲ್ಲಿ ಸ್ನಾತಕೋತ್ತರ ತರಬೇತಿಗಾಗಿ ನವದೆಹಲಿಯ ರಾಷ್ಟ್ರೀಯ ಮಂಡಳಿಯ ಡಿಪ್ಲೊಮೇಟ್​ಗೆ ಶಿಕ್ಷಕರು ಮತ್ತು ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳು, ಕಾರ್ಯಾಗಾರಗಳು, ಜ್ಞಾನ ಹಂಚಿಕೆ ಅವಧಿಗಳು ಮತ್ತು ತರಬೇತಿಗಾಗಿ ಆಹ್ವಾನಿತ ಅತಿಥಿ ಅಧ್ಯಾಪಕರಾಗಿದ್ದಾರೆ. ಮೂಳೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳ ಅನುಕೂಲಕ್ಕಾಗಿ ಅನೇಕ ಕಾರ್ಯಾಗಾರಗಳು, ಕಾರ್ಪೆರೇಟ್ ಸಂವಾದಗಳು ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸಿದ್ದಾರೆ. ಅವರ ವ್ಯಾಪಕ ಅನುಭವ, ಮುಂದುವರಿದ ತರಬೇತಿ ಮತ್ತು ಸಂಶೋಧನಾ ಕಾರ್ಯಗಳೊಂದಿಗೆ, ಡಾ. ರವಿರಾಜ್ ಅವರು ಕೀಲು ಬದಲಿ ಶಸ್ತ್ರಚಿಕಿತ್ಸೆ ಮತ್ತು ಮೂಳೆಚಿಕಿತ್ಸೆ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿದ್ದಾರೆ.

ಪರಿಣತಿಯ ಕ್ಷೇತ್ರ

ಕೀಲು ಬದಲಿ ಶಸ್ತ್ರಚಿಕಿತ್ಸೆಗಳು (ಮೊಣಕಾಲು ಬದಲಿ, ಸೊಂಟ ಬದಲಿ), ಕ್ರೀಡಾ ಔಷಧ ಆಥ್ರೋಸ್ಕೊಪಿ (ಆಥೋಸ್ಕೊಪಿ ಮೊಣಕಾಲು ಮತ್ತು ಭುಜ) ಸಂಕೀರ್ಣ ಆಘಾತ ಚಿಕಿತ್ಸೆ ಡಾ. ಎ. ರವಿರಾಜ್ ಅವರು ಪರಿಣತಿ ಹೊಂದಿರುವ ಕ್ಷೇತ್ರಗಳಾಗಿವೆ. ರೊಬಾಟಿಕ್ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ನುರಿತ ಅನುಭವ ಹೊಂದಿದ್ದಾರೆ.

ಸಂಧಿವಾತಕ್ಕೆ ಉದಾಸೀನ ಸಲ್ಲದು

ದೇಹದ ಪ್ರತಿರಕ್ಷಣಾ ಕಾಯಿಲೆಗಳಲ್ಲಿ ಸಂಧಿವಾತ (ಆರ್ಥರೈಟಿಸ್) ಕಾಯಿಲೆ ಪ್ರಮುಖವಾಗಿದ್ದು, ದೀರ್ಘಕಾಲ ಕಾಡುವ ಈ ಕಾಯಿಲೆ ಇಂದು ಮನೆ ಮನೆ ಸಮಸ್ಯೆಯಾಗಿ ಪರಿಣಮಿಸಿದೆ. ಮಕ್ಕಳಿಂದ ವೃದ್ಧರವರೆಗೂ ಬಾಧಿತರಿದ್ದಾರೆ. ಜಾಗತಿಕವಾಗಿ ಪ್ರತಿ ನಾಲ್ವರಲ್ಲಿ ಒಬ್ಬರು ನಾನಾ ರೀತಿಯ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಹಾಗೂ ನೋವುರಹಿತ ಚಿಕಿತ್ಸೆ ಲಭ್ಯವಿದೆಯಾದರೂ, ನಿರ್ಲಕ್ಷ್ಯ, ಆರ್ಥಿಕ ಸಮಸ್ಯೆ ಹಾಗೂ ಅರಿವಿನ ಕೊರತೆಯಿಂದಾಗಿ ನೋವಿನಲ್ಲೇ ದಿನ ದೂಡುವ ಮಂದಿ ಸಮಸ್ಯೆ ಗಂಭೀರ ಹಂತಕ್ಕೆ ತಲುಪಿದಾಗ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಇದರಿಂದ ಚಿಕಿತ್ಸಾ ವಿಧಾನ ಕ್ಲಿಷ್ಟಕರವಾಗುವುದಲ್ಲದೆ ವೆಚ್ಚವೂ ಹೆಚ್ಚಾಗುತ್ತದೆ. ಆರಂಭದಲ್ಲೇ ಚಿಕಿತ್ಸೆ ಪಡೆದಲ್ಲಿ ದುಷ್ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಸಂಧಿವಾತಕ್ಕೆ ಕಾರಣಗಳು, ರೋಗ ಲಕ್ಷಣಗಳು, ಲಭ್ಯವಿರುವ ಚಿಕಿತ್ಸೆ, ಆಧುನಿಕ ತಂತ್ರಜ್ಞಾನ ಬಳಕೆಯ ಪರಿಣಾಮಗಳು, ವೈದ್ಯಕೀಯ ಸೌಲಭ್ಯಗಳ ಕುರಿತು ಆಥೋಪೆಡಿಕ್ ತಜ್ಞ ಡಾ. ಎ.ರವಿರಾಜ್ ವಿಜಯವಾಣಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಧಿವಾತವು ಕೀಲುಗಳ ಮೇಲೆ ಪರಿಣಾಮ ಬೀರುವ ತೀವ್ರ ನೋವಿನಿಂದ ಕೂಡಿರುವ ದೀರ್ಘಾವಧಿ ಬಾಧಿಸುವ ಕಾಯಿಲೆ. ಇದು ಕೀಲು ನೋವು ಮತ್ತು ಬಿಗಿತಕ್ಕೆ ಕಾರಣವಾಗಿ, ರೋಗಿಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ಸಾಮಾನ್ಯವಾಗಿ ವಯಸ್ಸಿನೊಂದಿಗೆ ಉಲ್ಬಣಿಸುವ ಈ ಕಾಯಿಲೆ ಕೆಲವರಲ್ಲಿ ಆನುವಂಶಿಕವಾಗಿಯೂ ಕಾಡುತ್ತದೆ. ಸಂಧಿವಾತದ ಆರಂಭಿಕ ಚಿಹ್ನೆ ಮತ್ತು ರೋಗಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವ ಮೂಲಕ ಯೋಗದ ದುಷ್ಪರಿಣಾಮ ತಡೆಗಟ್ಟಬಹುದಾಗಿದೆ.

ಎಚ್ಚರಿಕೆ ಕ್ರಮಗಳಿವು

* ದೇಹದ ತೂಕ ಕಾಯ್ದುಕೊಳ್ಳಿ

* ಸಮತೋಲಿತ ಆಹಾರ ಸೇವಿಸಿ

* ಮಧುಮೇಹ, ರಕ್ತದೊತ್ತಡ ನಿಯಂತ್ರಣದಲ್ಲಿರಲಿ

* ಥೈರಾಯಿಡ್ ಇರುವವರೂ ಎಚ್ಚರವಹಿಸಿ

* ವ್ಯಾಯಾಮ ಸೇರಿ ದೈಹಿಕ ಚಟುವಟಿಕೆ ಮಿತವಾಗಿರಲಿ

* ನೋವು ಬಂದ ನಂತರ ಪದ್ಮಾಸನ, ವಜ್ರಾಸನ, ಸುಖಾಸನ ಮಾಡಬೇಡಿ

* ದೇಹದ ಯಾವುದೇ ಭಾಗದಲ್ಲಿ ಹೆಚ್ಚು ನೋವು ಇದ್ದಲ್ಲಿ ನಿರ್ಲಕ್ಷಿಸಬೇಡಿ

* 40 ವರ್ಷದ ನಂತರ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿರಿ.

ಆಹಾರದ ಬಗ್ಗೆ ಎಚ್ಚರಿಕೆ

ತೂಕ ಇಲ್ಲದವರಲ್ಲೂ ಸಂಧಿವಾತ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಜನರು ಆಹಾರದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಇನ್ನು ಸಂಧಿವಾತ ಇರುವವರು ಹೊರಗಿನ ಆಹಾರ, ಸಂಸ್ಕರಿಸಿದ ಆಹಾರ ಹಾಗೂ ಮಾಂಸಾಹಾರದಿಂದ ದೂರ ಇರಬೇಕು. ಮನೆಯಲ್ಲಿ ತಯಾರಿಸಿದ ರುಚಿ-ಶುಚಿಯಾದ ಊಟ ಹಾಗೂ ತಾಜಾ ಹಣ್ಣು, ತರಕಾರಿ ಮತ್ತು ಸೊಪ್ಪು ಸೇವನೆ ಉತ್ತಮ.

ಚಿಕಿತ್ಸಾ ವಿಧಾನಗಳು

ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಮಾಡಿದರೆ ಚಿಕಿತ್ಸೆ ಸುಲಭವಾಗಲಿದ್ದು, ಹಾನಿಯನ್ನು ಕಡಿಮೆ ಮಾಡಬಹುದು. ಸಾಮಾನ್ಯ ಸಮಸ್ಯೆಗೆ ಔಷಧ, ವ್ಯಾಯಾಮ, ಕ್ಯಾಲ್ಶಿಯಂ ಮಾತ್ರೆ, ನೋವು ನಿವಾರಕ ಮಾತ್ರೆ ಮತ್ತು ಇಂಜೆಕ್ಷನ್​ಗಳನ್ನು ನೀಡಲಾಗುವುದು. ಗಂಭೀರವಾದಲ್ಲಿ ಶಸ್ತ್ರಚಿಕಿತ್ಸೆಯಿಂದ ಪರಿಹಾರ. ಸಮಸ್ಯೆ ಕಡಿಮೆ ಇದ್ದಾಗ ಶಸ್ತ್ರಚಿಕಿತ್ಸೆ ಇಲ್ಲದೆಯೇ ಸಂಧಿವಾತ ಕಾರ್ಟಿಲೆಜ್ ಬಲಪಡಿಸಬಹುದಾದ ಪೌಷ್ಟಿಕಾಂಶಭರಿತ ಒಳಕೀಲಿನ ಚುಚ್ಚುಮದ್ದು (ಸ್ಟೆರಾಯ್್ಡಳು, ಸೋಡಿಯಂ ಹೈಲು ರೊನೇಟ್, ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ (ಪಿಆರ್​ಪಿ), ಸ್ಟೆಮ್ೆಲ್ ಇಂಜೆಕ್ಷನ್ (ರೋಗಿಯ ಅಸ್ತಿಮಜ್ಜೆ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಿ ಅದನ್ನು ಔಷಧ ರೂಪವಾಗಿ ಪರಿವರ್ತಿಸಿ ನೀಡಲಾಗುತ್ತದೆ) ಹೈಲುರೊನಿಕ್ ಆಸಿಡ್ ಇಂಜೆಕ್ಷನ್, ಲ್ಯೂಬ್ರಿಕೆಂಟ್ ಇಂಜೆಕ್ಷನ್ ನೀಡಿ ನೋವು ನಿಯಂತ್ರಿಸಬಹುದಾಗಿದೆ.

ತಂತ್ರಜ್ಞಾನ ಮಹತ್ವದ ಪಾತ್ರ

ಅಪಘಾತದ ವೇಳೆ ಸಂಭವಿಸುವ ಮೂಳೆ ಮುರಿತ ಹಾಗೂ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿರುವ ಆಥೋ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿದೆ. ಅತ್ಯಂತ ಸಂಕೀರ್ಣ ಚಿಕಿತ್ಸೆಯನ್ನು ಸುಲಭವಾಗಿ ನಡೆಸಲು ರೊಬಾಟಿಕ್ ಶಸ್ತ್ರಚಿಕಿತ್ಸೆ ಸಹಕಾರಿಯಾಗಿದೆ. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯು (ಎಐ) ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ. ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಲಿದೆ.

ಮಂಡಿಚಿಪ್ ಸರ್ಜರಿ ರೋಬಾಟಿಕ್ ಯೋಜನೆ ಹೇಗೆ?

ರೋಗಿಗೆ ಸಿಟಿ ಸ್ಕಾ್ಯನ್ ಮಾಡಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಂಗವನ್ನು ನಿರ್ದಿಷ್ಟ ಹಾಗೂ ನಿಖರವಾಗಿ ಗುರುತು ಮಾಡಲಾಗುತ್ತದೆ. ಇದನ್ನು ವರ್ಚುವಲ್ ‘3ಡಿ’ ಮೋಡ್ ಅಲ್ಲಿ ರೋಬಾಟಿಕ್ ಸ್ವೀಕರಿಸಲಿದೆ. ಇದಕ್ಕೆ ನುರಿತ ಮತ್ತು ತಜ್ಞ ವೈದ್ಯರ ಅವಶ್ಯಕತೆ ಇರುತ್ತದೆ. ಚಿಕಿತ್ಸೆ ವೇಳೆ ರೋಬಾಟ್ ಯಂತ್ರದ ನೆರವಿನಿಂದ ಗುರುತು ಮಾಡಿರುವ ನಿರ್ದಿಷ್ಟ ಜಾಗವನ್ನು ಕತ್ತರಿಸಲಿದೆ.

ರೋಬಾಟಿಕ್ ಕಾರ್ಯ ಹೇಗೆ?

ರೋಬಾಟಿಕ್ ಶಸ್ತ್ರಚಿಕಿತ್ಸೆ ಎಂದಾಕ್ಷಣ ಇಲ್ಲಿ ನೇರವಾಗಿ ರೋಬಾಟಿಕ್ ಯಂತ್ರವೇ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ. ಬದಲಿಗೆ ನುರಿತ ವೈದ್ಯರ ತಂಡ ರೋಬಾಟಿಕ್ ಯಂತ್ರದ ನಿರ್ವಹಣೆ ಮಾಡುವ ಮೂಲಕ ಈ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಆದರೆ, ಈ ಚಿಕಿತ್ಸಾ ವಿಧಾನದಲ್ಲಿ ಯೋಜನೆ ರೂಪಿಸುವುದೇ ವೈದ್ಯರಿಗೆ ಇರುವ ದೊಡ್ಡ ಸವಾಲು. ಅದಕ್ಕಾಗಿ ಈ ಚಿಕಿತ್ಸಾ ವಿಧಾನದಲ್ಲಿ ಬಹಳಷ್ಟು ಪರಿಣಿತಿ ಹೊಂದಿರಬೇಕು. ಯೋಜನೆ ನಿಖರವಾಗಿದ್ದರೆ, ಶಸ್ತ್ರಚಿಕಿತ್ಸೆ ಕೂಡ ಅಷ್ಟೇ ನಿಖರವಾಗಿರಲಿದೆ. ಚಿಕಿತ್ಸೆಗೆ ಒಳಪಡುವ ವ್ಯಕ್ತಿಯ ಅಂಗವನ್ನು ಸರಿಯಾದ ಕ್ರಮದಲ್ಲಿ ಗುರುತು ಮಾಡಿಕೊಂಡರೆ, ಅದರ ಆಧಾರದ ಮೇಲೆ ರೋಬಾಟಿಕ್ ಯಂತ್ರದ ಮೂಲಕ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ.

ತಂತ್ರಜ್ಞಾನದ ಪ್ರಯೋಜನಗಳು

ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದ್ದು, ಸಂಧಿವಾತಕ್ಕೆ ಆರಂಭದ ದಿನಗಳಲ್ಲಿ ಇಂಪ್ಲಾಟ್ ಮಾಡುವಾಗ 6-8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ತಂತ್ರಜ್ಞಾನದಿಂದಾಗಿ ಇಂದು 20-30 ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಬಹುದಾಗಿದೆ. ಮಾತ್ರವಲ್ಲದೆ, ರೋಬಾಟಿಕ್ ತಂತ್ರಜ್ಞಾನ ಬಳಸಿಕೊಂಡು ಇಂದು ಅತ್ಯಂತ ನಿಖರ ಹಾಗೂ ನೋವುರಹಿತವಾಗಿ ಕಡಿಮೆ ಸಮಯದಲ್ಲಿ ಚಿಕಿತ್ಸೆ ಸಾಧ್ಯವಿದ್ದು, ರೋಗಿಯೂ ಎರಡೇ ದಿನದಲ್ಲಿ ನಡೆದಾಡಬಹುದಾಗಿದ್ದು, 4 ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಬಹುದಾಗಿದೆ.

ದೇಹ ತೂಕ ಕಾಪಾಡಿಕೊಳ್ಳಿ

ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಮಂದಿಯಲ್ಲಿ ಮೊಣಕಾಲಿನ ಅಸ್ಥಿಸಂಧಿವಾತ ಸಾಧ್ಯತೆ ಹೆಚ್ಚು. ಹಾಗಾಗಿ ಆರೋಗ್ಯದೊಂದಿಗೆ ದೇಹದ ತೂಕವನ್ನು ಸರಿಯಾಗಿಟ್ಟುಕೊಳ್ಳುವುದು ಅತೀ ಮುಖ್ಯ. ಇದಲ್ಲದೆ ಮಂಡಿ, ಮೊಣಕಾಲು, ಮೊಣಕೈಗಳಿಗೆ ಪೆಟ್ಟಾಗಿದ್ದರೆ ನಿರ್ಲಕ್ಷಿಸದೆ ಅದಕ್ಕೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ ಅದು ಸಹ ಸಂಧಿವಾತದ ಬೆಳವಣಿಗೆಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.

ರೋಬಾಟಿಕ್ ಪರಿಣಾಮಕಾರಿ ಚಿಕಿತ್ಸೆ

ವಯಸ್ಸು ಹೆಚ್ಚಾದಂತೆ ಮಂಡಿನೋವು, ಸಂಧಿವಾತ ರೀತಿಯ ಹಲವು ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ಕಾಯಿಲೆ ಜೀವನದ ಓಡಾಟವನ್ನೇ ನಿಲ್ಲಿಸಿ ಬಿಡುತ್ತವೆ. ಇವುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಮತ್ತೆ ಜೀವನೋತ್ಸಾಹ ಪಡೆಯಲು ಸಾಧ್ಯವಿದೆ. ಎಲ್ಲದಕ್ಕೂ ಶಸ್ತ್ರಚಿಕಿತ್ಸೆಯ ಅವಕಶ್ಯತೆ ಇಲ್ಲ. ಆದರೆ, ಅನಿವಾರ್ಯ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಅತ್ಯವಶ್ಯಕ. ಇದರಲ್ಲಿ ನಿಖರತೆಯ ಶಸ್ತ್ರಚಿಕಿತ್ಸೆಗಾಗಿ ‘ರೋಬಾಟಿಕ್ ತಂತ್ರಜ್ಞಾನ’ ಮೊರೆ ಹೋಗುವುದು ಉತ್ತಮ. ವೆಚ್ಚದಲ್ಲಿ ಸಾಮಾನ್ಯ ಚಿಕಿತ್ಸೆಗಿಂತ ತುಸು ಹೆಚ್ಚಾದರೂ ನಿಖರತೆ, ಕಡಿಮೆ ನೋವು, ಬೇಗ ಗುಣಮುಖರಾಗಲು ಸಹಕಾರಿಯಾಗಿದೆ.

ಗುಣಮಟ್ಟದ ಸೇವೆಗೆ ಆದ್ಯತೆ

ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ನುರಿತ ವೈದ್ಯಕೀಯ ತಂಡ ಹೊಂದಿರುವ ನಗರದ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆ ಎಲ್ಲ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಮಲ್ಟಿಸ್ಪೆಷಾಲಿಟಿ ಚಿಕಿತ್ಸೆ ನೀಡುತ್ತಿದೆ. ಅದರಲ್ಲಿ ಆಥೋ ಸಮಸ್ಯೆಗಳಿಗೂ ಅತ್ಯುತ್ತಮ ಚಿಕಿತ್ಸೆ ಒದಗಿಸುತ್ತಿದೆ. ಮಂಡಿ ನೋವು ಸೇರಿ ಸಂಧಿವಾತದ ಸಮಸ್ಯೆ ಇರುವವರಿಗೆ ಅತ್ಯಾಧುನಿಕ ಇಂಪ್ಲಾಂಟ್​ಗಳನ್ನು ಬಳಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಆಸ್ಪತ್ರೆಯು ಗುಣಮಟ್ಟದ ಸೇವೆಗೆ ಆದ್ಯತೆ ನೀಡಿದೆ.

ಡಾ. ರವಿರಾಜ್ ಭೇಟಿ ಮಾಡುವ ವಿಳಾಸ

ಕ್ಲಿನಿಕ್: ವಿಜಯ ಮೆಡಿಕಲ್ ಸೆಂಟರ್

(ಡಾ. ರವಿರಾಜ್ ಆಥೋಕೇರ್)

ಐಐಎಂಬಿ ಹಿಂಭಾಗ, ವಿಜಯ ಬ್ಯಾಂಕ್ ಲೇಔಟ್,

ಬನ್ನೇರುಘಟ್ಟ ರಸ್ತೆ, ಬೆಂಗಳೂರು-560 076

ಮೊ: 85538 15999

ಅಪೋಲೊ ಆಸ್ಪತ್ರೆ, ಐಐಎಂಬಿ ಎದುರು, 154/11, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560 076 ಮೊ: 85538 15999

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net