More

    55 ವರ್ಷದಿಂದ ಲಾಟರಿಗೆ 12 ಲಕ್ಷ ಖರ್ಚು: ಇದೇ ಮೊದಲ ಬಾರಿ ಬಂದ ಬಹುಮಾನದ ಮೊತ್ತ ನೋಡಿ ಗ್ರಾಹಕ ಶಾಕ್​

    ಪಟ್ಟಣಂತಿಟ್ಟ: ಓಣಂ ಬಂಪರ್​ ಲಾಟರಿಯ ಫಲಿತಾಂಶವನ್ನು ಮೊನ್ನೆ (ಸೆ.22) ಘೋಷಣೆ ಮಾಡಲಾಯಿತು. ಈ ಬಾರಿ 75 ಲಕ್ಷಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್​ ಖರೀದಿ ಮಾಡಿದರು. ತಮಿಳುನಾಡಿ ನಾಲ್ವರು ಯುವಕರು ಮೊದಲ ಬಹುಮಾನವನ್ನು ಪಡೆದಿದ್ದಾರೆ. ಒಂದು ಟಿಕೆಟ್​ಗೆ 500 ರೂ. ಪಾವತಿಸಿ ಏನನ್ನೂ ಪಡೆಯದ ಹಿನ್ನೆಲೆಯಲ್ಲಿ ಅನೇಕರಿಗೆ ನಿರಾಸೆಯೂ ಆಗಿದೆ. ಆದರೆ, ಪಟ್ಟಣಂತಿಟ್ಟ ಮೂಲದ ರಾಜನ್​ ಮಾತ್ರ ನಿರಾಶರಾಗಿಲ್ಲ.

    ಮಾಧ್ಯಮ ವರದಿಗಳ ಪ್ರಕಾರ ರಾಜನ್​ ಅವರು ನಿವೃತ್ತ ಸರ್ಕಾರಿ ನೌಕರರು. ಕಳೆದ 55 ವರ್ಷಗಳಿಂದ ಲಾಟರಿ ಖರೀದಿ ಮಾಡುತ್ತಿದ್ದಾರೆ. ಲಾಟರಿ ಟಿಕೆಟ್​ಗಾಗಿಯೇ ಈವರೆಗೆ 12 ಲಕ್ಷ ರೂಪಾಯಿಯನ್ನು ವ್ಯಯಿಸಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಲಾಟರಿ ಖರೀದಿ ಮಾಡಿದ ರಾಜನ್​ ಈ ಬಾರಿ ಕೇವಲ 500 ರೂಪಾಯಿ ಗೆದ್ದಿದ್ದಾರೆ.

    ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ನಿರ್ಮಾಪಕ ಎಂ.ಎನ್. ಸುರೇಶ್

    ರಾಜನ್​ ಅವರು 9 ಸಾವಿರ ರೂ. ಖರ್ಚು ಮಾಡಿ 18 ಬಾರಿ ಓಣಂ ಬಂಪರ್​ ಲಾಟರಿ ಟಿಕೆಟ್​ ಖರೀದಿ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಲಾಟರಿಗೆ ಕೇವಲ 500 ರೂಪಾಯಿ ಬಹುಮಾನವನ್ನು ಪಡೆದಿದ್ದಾರೆ. ಇದುವರೆಗೂ ರಾಜನ್​ ಒಂದೂವರೆ ಲಕ್ಷ ಲಾಟರಿ ಟಿಕೆಟ್​ಗಳನ್ನು ಖರೀದಿ ಮಾಡಿದ್ದಾರೆ. ಒಮ್ಮೆಯೂ ಬಹುಮಾನ ಬಂದಿರಲಿಲ್ಲ. ಮೊದಲ ಬಾರಿಗೆ ಬಹುಮಾನ ಬಂದಿದೆ. ಆದರೆ, ಕೇವಲ 500 ರೂಪಾಯಿ.

    ಕೇವಲ 500 ರೂ. ಬಂದರೂ ಬೇಸರಿಸಿಕೊಳ್ಳದ ರಾಜನ್​, ಲಾಟರಿ ಟಿಕೆಟ್​ಗಳ ಖರೀದಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ನನ್ನ ಕೈಯಲ್ಲಿ ಸಾಧ್ಯವಾಗುವಷ್ಟ ದಿನ ಲಾಟರಿ ಖರೀದಿ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಗ್ಯಾಸ್​ ಸೊರಿಕೆಯಾಗಿ ಸಿಲಿಂಡರ್ ಸ್ಫೋಟ; ಮೂವರು ಮೃತ್ಯು

    VIDEO| ಗಣಪತಿ ವಿಸರ್ಜನೆ ಕಾರ್ಯಕ್ರದಲ್ಲಿ ಬಾಯ್​ಫ್ರೆಂಡ್ ಜೊತೆ ಭರ್ಜರಿ ಸ್ಟೆಪ್ಸ್​ ಹಾಕಿದ ಜಾಹ್ನವಿ ಕಪೂರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts