

ನವದೆಹಲಿ: ಮಹಿಳೆಯರನ್ನು ಶೈಕ್ಷಣಿಕವಾಗಿ ಮುಂದುವರಿಯುವಂತೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ.
ಅದರಂತೆ, ಪದವಿ ಶಿಕ್ಷಣ ಪೂಣರ್ಗೊಳಿಸಿದ ಮಹಿಳಾ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ಪಾಸ್ಪೋರ್ಟ್ ಕೂಡ ನೀಡುವ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಾಗುತ್ತಿದೆ.
ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಇಂಥದ್ದೊಂದು ಯೋಜನೆ ಘೋಷಿಸಿದ್ದಾರೆ. ವಿದ್ಯಾರ್ಥಿನಿಯರು ಪದವಿ ಪೂರ್ಣಗೊಳಿಸುತ್ತಿದ್ದಂತೆ ಕಾಲೇಜಿನಲ್ಲಿಯೇ ಪಾಸ್ಪೋರ್ಟ್ ಕೂಡ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರಸ್ತೆ ಸಂಚಾರ ನಿಯಮಗಳು ಹಾಗೂ ಸುರಕ್ಷಿತ ವಾಹನ ಚಾಲನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ 18- 25 ವಯಸ್ಸಿನವರಿಗೆ ವಾಹನ ಚಾಲನಾ ಕಲಿಕಾ ಪರವಾನಗಿ ಹಾಗೂ ಹೆಲ್ಮೆಟ್ ವಿತರಣಾ ಸಮಾರಂಭದಲ್ಲಿ ಈ ವಿಷಯ ತಿಳಿಸಿದ್ದಾರೆ. ಜತೆಗೆ, ಇನ್ನು ಮುಂದೆ ಕಾಲೇಜಿನಲ್ಲಿಯೇ ವಾಹನ ಚಾಲನಾ ಪರವಾನಗಿಯನ್ನು ವಿತರಿಸಲಾಗುವುದು ಎಂದು ಹೇಳಿದರು.
ಪಂಜಾಬ್, ಹರಿಯಾಣ ಸೇರಿ ಉತ್ತರ ಭಾರತದ ರಾಜ್ಯಗಳಿಂದ ವಿದೇಶಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಜತೆಗೆ, ಉಳಿದ ರಾಜ್ಯಗಳಿಗೆ ಹೋಳಿಸಿದಲ್ಲಿ ಇಲ್ಲಿ ಪಾಸ್ಪೋಟ್ರ್ ಹೊಂದುವವರ ಸಂಖ್ಯೆಯೂ ಅಧಿಕ ಈ ಕಾರಣಕ್ಕಾಗಿ ಸರ್ಕಾರ ಇಂಥದ್ದೊಂದು ಯೋಜನೆಗೆ ಮುಂದಾಗಿದೆ.