

ಹನೂರು: ದೂರದಿಂದ ನೋಡಿದ್ರೆ ಹುಲಿಯಂತೆ ಕಾಣುತ್ತೆ, ಅರೆಕ್ಷಣ ಎದೆಯಲ್ಲಿ ಢವಢವ ಶುರುವಾಗುತ್ತೆ. ಸಮೀಪಿಸುತ್ತಿದ್ದಂತೆ ಇದು ಹುಲಿಯಲ್ಲ, ನಾಯಿ! ಎಂದು ಅರಿವಾಗಿ ನಿಟ್ಟುಸಿರು ಬಿಡ್ತಾರೆ ಜನ.
ಇಂತಹ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಸಂಭವಿಸುತ್ತಿದೆ. ಅಜ್ಜೀಪುರ- ಹನೂರು ನಡುವೆ ಹುಲಿಪಟ್ಟೆ ನಾಯಿ ಓಡಾಡುತ್ತಿದ್ದು, ಇದನ್ನು ಕಂಡು ಪ್ರಯಾಣಿಕರು ಬೇಸ್ತು ಬೀಳುತ್ತಿದ್ದಾರೆ.
ಅರೆ, ಇದೇನಿದು ನಾಯಿಗೂ ಹುಲಿಯಂತೆ ಮೈಮೇಲೆ ಪಟ್ಟೆ ಇದೆಯಾ? ಎಂದು ಉಬ್ಬೇರಿಸಬೇಡಿ. ನಾಯಿಯ ಮೈಮೇಲಿರುವ ಹುಲಿಪಟ್ಟೆ ನಿಜವಲ್ಲ! ನಾಯಿಗೆ ಬಣ್ಣ ಬಳಿದು ಹುಲಿವೇಷ ಹಾಕಿದ್ದಾರೆ. ಕಾಡಂಚಿನ ಗ್ರಾಮದ ರೈತರು ಬೆಳೆ ಉಳಿಸಿಕೊಳ್ಳು ನಾಯಿಗೆ ಹುಲಿವೇಷ ಹಾಕಿ ಓಡಾಡಲು ಬಿಟ್ಟಿದ್ದಾರೆ.