ದಂಡ ಕಟ್ಟಲು ಕೇಳಿದ ಟಿಟಿಇ ಮೇಲೆ ಗೂಂಡಾವರ್ತನೆ; ರೈಲ್ವೆ ಪೊಲೀಸರನ್ನು ಕಂಡಾಕ್ಷಣ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?

ಮುಂಬೈ: ಎಸಿ ಲೋಕಲ್​ ಪಶ್ಚಿಮ ರೈಲ್ವೆಯಲ್ಲಿ ಟಿಕಿಟ್​ ತಪಾಸಣೆ ವೇಳೆ ಟಿಟಿಇ (ಟಿಕೆಟ್​ ಚೆಕರ್​) ಜತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಟಿಟಿಇ ಅವರ ಮೇಲೆ ಹಲ್ಲೆ ಮಾಡಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಘಟನೆ ಬಳಿಕ ಅನುಚಿತವಾಗಿ ವರ್ತಿಸಿದ ಪ್ರಯಾಣಿಕರು ಸಿಕ್ಕಿಬಿದ್ದಿದ್ದು ಕ್ಷಮೆಯಾಚಿಸಿದ್ದಾರೆ ಎಂದು ಪಶ್ವಿಮ ರೈಲ್ವೆ ಖಚಿತಪಡಿಸಿದೆ.

ಇದನ್ನು ಓದಿ: ಸಂಸತ್ತಿನಲ್ಲಿ ಸ್ಪೀಕರ್​​​ ಎದುರೇ ಕೈ-ಕೈ ಮಿಲಾಯಿಸಿದ ಸದಸ್ಯರು; ಸದನದಲ್ಲಿ ಹರಿಯಿತು ನೆತ್ತರು

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ವೈರಲ್​ ವಿಡಿಯೋದಲ್ಲಿ ಟಿಟಿಇ ಜಸ್ಬೀರ್​ಸಿಂಗ್​ ಅವರೊಂದಿಗಿ ಪ್ರಯಾಣಿಕರು ಅನುಚಿತವಾಗಿ ವರ್ತಿಸಿರುವುದು ಹಾಗೂ ಟಿಟಿಇ ಅವರ ಬಟ್ಟೆಯನ್ನು ಹರಿದಿರುವುದನ್ನು ಕಾಣಬಹುದಾಗಿದೆ.

ಪ್ರಯಾಣ ದರ ಹೆಚ್ಚಿರುವ ಕಾರಣ ಪ್ರಥಮ ದರ್ಜೆ ಟಿಕೆಟ್​ ಹೊಂದಿರುವವರು ಎಸಿ ಲೋಕಲ್​​​ನಲ್ಲಿ ಪ್ರಯಾಣಿಸಲು ಅನುಮತಿಸುವುದಿಲ್ಲ. ಆದರೆ ಪ್ರಥಮ ದರ್ಜೆ ಟಿಕೆಟ್​ ಹೊಂದಿದ್ದ ಮೂವರು ಪ್ರಯಾಣಿಕರು ಎಸಿ ಲೋಕಲ್​ನಲ್ಲಿ ಟಿಕೆಟ್​ ಚೆಕಿಂಗ್ ವೇಳೆ ಸಿಕ್ಕಿಬಿದ್ದಿದ್ದಾರೆ. ಪ್ರಯಾಣ ದರದಲ್ಲಿನ ವ್ಯತ್ಯಾಸದ ಹಣವನ್ನು ಹಾಗೂ ದಂಡವನ್ನು ಪಾವತಿಸಲು ಟಿಟಿಇ ಅವರು ಕೇಳಿದಾಗ ಗಲಾಟೆ ಆರಂಭಿಸಿದ್ದಾರೆ. ಟಿಟಿಇ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪಶ್ಚಿಮ ರೈಲ್ವೆ ಸಿಪಿಆರ್​ಒ ವಿನೀತ್​ ಅಭಿಷೇಕ್​​ ಹೇಳಿದ್ದಾರೆ.

ರೈಲ್ವೆ ಪ್ರೊಟೆಕ್ಷನ್​ ಫೋರ್ಸ್​​​(ಆರ್​ಪಿಎಫ್​​​0ನ ಹಾಗೂ ರೈಲ್ವೆ ಪೊಲೀಸರು(ಜಿಆರ್​ಪಿ) ಬಂದ ಬಳಿಕ ಅನುಚಿತವಾಗಿ ವರ್ತಿಸಿದ್ದ ಪ್ರಯಾಣಿಕರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮಾಪತ್ರ ಬರೆದು ಕ್ಷಮೆಯಾಚಿಸಿದ್ದಾರೆ ಎಂದು ಅವರು ಹೇಳಿದರು. ನಮ್ಮ ರೈಲ್ವೆ ಸಿಬ್ಬಂದಿ ವಿರುದ್ಧದ ಅನುಚಿತ ವರ್ತನೆಯು ತಪ್ಪು ಮಾತ್ರವಲ್ಲದೆ ಶಿಕ್ಷಾರ್ಹ ಅಪರಾಧವಾಗಿದೆ. ಪ್ರಯಾಣಿಕರು ಮಾನ್ಯವಾದ ಟಿಕೆಟ್‌ಗಳೊಂದಿಗೆ ಪ್ರಯಾಣಿಸಲು ಮತ್ತು ಸಿಬ್ಬಂದಿಯೊಂದಿಗೆ ಉತ್ತಮವಾಗಿ ವರ್ತಿಸಲು ನಾನು ವಿನಂತಿಸುತ್ತೇನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.(ಏಜೆನ್ಸೀಸ್​​)

ಮಾನಸಿಕವಾಗಿ ಸಿದ್ಧನಿದ್ದೆ ಆದ್ರೆ…. ಒಲಿಂಪಿಕ್ಸ್​ನಲ್ಲಿನ ಪ್ರದರ್ಶನದ ಕುರಿತು ನೀರಜ್​ ಚೋಪ್ರಾ ಹೇಳಿದಿಷ್ಟು

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…