

ಆನೆ ತನ್ನ ದಂತದಿಂದ ಬಸ್ ಎಡಭಾಗಕ್ಕೆ ತಿವಿದು ಹಾನಿಯುಂಟು ಮಾಡುತ್ತಿರುವ , ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶದ ಪಾರ್ವತಿಪುರಂನ ಮಾನ್ಯಂ ಜಿಲ್ಲೆಯ ಅರ್ಥಮ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ.
ಆಕ್ರೋಶಗೊಂಡಿದ್ದ ಆನೆ ಬಸ್ನ ಮುಂಭಾಗದ ಗ್ಲಾಸ್ಗೆ ತನ್ನ ಸೊಂಡಿಲಿನಿಂದ ಹೊಡೆದ ಪರಿಣಾಮ ಬಸ್ಮುಂಭಾಗದ ಗ್ಲಾಸ್ ಸಂಪೂರ್ಣವಾಗಿ ಪುಡಿ ಪುಡಿಯಾಗಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಬಸ್ನಿಂದ ಕೆಳಗೆ ಇಳಿದಿದ್ದಾರೆ.
ಆನೆಯು ಬಸ್ ಮುಂಭಾಗದ ಗ್ಲಾಸನ್ನ ಪುಡಿ ಮಾಡೋದು ಮಾತ್ರವಲ್ಲ, ಅಲ್ಲೇ ಸುತ್ತುವರೆದಿದ್ದ ಜನರನ್ನೂ ಒಂದಷ್ಟು ದೂರ ಅಟ್ಟಾಡಿಸಿಕೊಂಡು ಹೋಗಿದೆ. ಈ ವೇಳೆ ಪ್ರಯಾಣಿಜಕರು ಗಾಬರಿಯಿಂದ ಓಡುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಲ್ಲದೆ ಆನೆ ಬಸ್ ನಿಲ್ಲಿಸಿದ ಜಾಗದಿಂದ ಸ್ವಲ್ಪ ದೂರ ತೆರಳುತ್ತಿದ್ದಂತಯೇ ಚಾಲಕ ಬಸ್ ರಿವರ್ಸ್ ತೆಗೆದುಕೊಂಡು ಹೋಗಿದ್ದಾನೆ. ಆನೆ ತುಂಬಾ ದೂರ ಹೋದ ಬಸ್ ಒಳಗಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಇನ್ನು ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತೆ. ಎರಡ್ಮೂರು ದಿನದ ಹಿಂದೆ ರಸ್ತೆ ಮಧ್ಯೆ ನಿಂತಿದ್ದ ಆನೆ ಕಂಡು ಸರ್ಕಾರಿ ಬಸ್ ಅರ್ಧ ಗಂಟೆ ನಿಂತಲ್ಲೇ ನಿಂತಿತ್ತು. ಬೈಕ್-ಕಾರು ಸವಾರರು ಕೂಡ ನಿಂತಲ್ಲೇ ನಿಂತಿದ್ದರು. ಗಾಡಿ ರಿವರ್ಸ್ ತೆಗೆದು ಹೋಗೋದಕ್ಕೂ ಸಾಧ್ಯವಿಲ್ಲ ಅಮತಾರೆ ಜನರು.