ಕರಾಟೆ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆ

karate
ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭಿಷೇಕ್ ಆರ್. ಹಾಗೂ ದಿಶಾ.
Published on

ಕೋಟ: ಫೀನಿಕ್ಸ್ ಅಕಾಡೆಮಿ ಇಂಡಿಯಾ ಆಯೋಜಿಸಿದ ಕರಾಟೆ ಬ್ಲಾೃಕ್ ಬೆಲ್ಟ್ ಪರೀಕ್ಷೆಯಲ್ಲಿ ಸಾಸ್ತಾನ ಕರಾಟೆ ಡೋಜ ತರಬೇತಿ ತಂಡದಿಂದ ಅಭಿಷೇಕ್ ಆರ್. ಹಾಗೂ ದಿಶಾ ಸಾಸ್ತಾನ ಕಪ್ಪುಪಟ್ಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಬೆಳ್ಳಿ ಹಾಗೂ ಕಂಚು ಪದಕ ಪಡೆದಿದ್ದಾರೆ. ಹಾಗೆಯೇ ಫೀನಿಕ್ಸ್ ಅಕಾಡೆಮಿ ಮುಖ್ಯ ಕರಾಟೆ ಶಿಕ್ಷಕ ಹಾಗೂ ತರಬೇತಿದಾರರಾದ ಸೆನ್ಸಾಯ್ ಮಂಜುನಾಥ್ ಕೋಟೇಶ್ವರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net