ವಿವೇಕಾನಂದರ ಆದರ್ಶ ಅಳವಡಿಕೆ : ವಾರ್ಷಿಕೋತ್ಸವ ಸಮಾರಂಭದಲ್ಲಿ ಡಾ.ಬಿ.ಜಗದೀಶ್ ಶೆಟ್ಟಿ ಹೇಳಿಕೆ

mabukala
ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಹಾಗೂ ಬಿ.ಡಿ.ಶೆಟ್ಟಿ ಕಾಲೇಜ್ ಮಾಬುಕಳ ವಾರ್ಷಿಕೋತ್ಸವ ಸಮಾರಂಭ ಜರುಗಿತು
Published on

ವಿಜಯವಾಣಿ ಸುದ್ದಿಜಾಲ ಕೋಟ

ವಿದ್ಯಾರ್ಥಿಗಳು ಜೀವನದಲ್ಲಿ ವಿವೇಕಾನಂದರ ಆದರ್ಶ, ತತ್ವ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರಾಮಾಣಿಕರಾಗಿ ದೇಶದ ಸತ್ಪ್ರಜೆಯಾಗಬೇಕು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ಹೇಳಿದರು. ಫಾರ್ಚ್ಯೂನ್ ಅಕಾಡೆಮಿಕ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ಆಡಳಿತಕೊಳಪಟ್ಟ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಹಾಗೂ ಬಿ.ಡಿ.ಶೆಟ್ಟಿ ಕಾಲೇಜು ಮಾಬುಕಳ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಬ್ರಹ್ಮಾವರ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಅಧ್ಯಕ್ಷ ಡಾ.ದೈವಿಕ್ ಟಿ.ಶೆಟ್ಟಿ ಅಧ್ಯಕ್ಷತೆ ವಹಿದ್ದರು. ಚೇರ್ಮನ್ ತಾರಾನಾಥ್ ಶೆಟ್ಟಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಹಂಗಾರಕಟ್ಟೆ ಚೇತನಾ ಪ್ರೌಢಶಾಲೆ ಮುಖ್ಯಶಿಕ್ಷಕಿ ಕಲ್ಪನಾ ಶೆಟ್ಟಿ, ವಿದ್ಯಾರ್ಥಿ ನಾಯಕರಾದ ಕೋಟೇಶ್ ಹಾಗೂ ಎಂ.ವಿ.ಹರಿಕೃಷ್ಣ ಉಪಸ್ಥಿತರಿದ್ದರು. ಉಪನ್ಯಾಸಕಿ ಅಮಿಷಾ ಸ್ವಾಗತಿಸಿ, ಪ್ರಾಂಶುಪಾಲ ಪ್ರೊ.ಸ್ಮಿತಾಮೋಲ್ ಇ.ಎಂ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕಿ ಅನುರಾಧಾ, ಅಂಬಿಕಾ ಹಾಗೂ ಪ್ರೀತಿಕಾ ಬಹುಮಾನ ವಿಜೇತರ ವಿವರ ವಾಚಿಸಿದರು. ಶಿಕ್ಷಕರಾದ ವೀಣಾ ನಿರೂಪಿಸಿ, ಸುಕುಮಾರ್ ಶೆಟ್ಟಿಗಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net