ಕಾಣೆಯಾದ ಮುದ್ದಿನ ಗಿಳಿಯನ್ನು ಹುಡುಕಿ ಕೊಟ್ಟರೆ 10 ಸಾವಿರ ರೂ. ಬಹುಮಾನ

Parrot Goes Missing Madhya Pradesh Man Offers 10,000 Cash Reward
Published on: 

ಮಧ್ಯಪ್ರದೇಶ: ಸಾಕುಪ್ರಾಣಿಗಳು ಮತ್ತು ಪಕ್ಷಿಗಳ ಮೇಲೆ ಜನರು ತುಂಬಾ ಪ್ರೀತಿ ಇಟ್ಟುಕೊಂಡಿರುತ್ತಾರೆ. ಮನೆಯ ಮಕ್ಕಳಂತೆ ಕಾಣುತ್ತಾರೆ. ಹೀಗೆ ಒಬ್ಬ ವ್ಯಕ್ತಿಯು ತನ್ನ ಮುದ್ದಿನ ಗಿಳಿಯನ್ನು ಹುಡುಕಿ ಕೊಟ್ಟರೆ ಸಾವಿರಾರು ರೂಪಾಯಿ ಹಣವನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದ್ದಾನೆ.

ತನ್ನ ಗಿಳಿ ನಾಪತ್ತೆಯಾಗಿದೆ, ಅದನ್ನು ತಂದುಕೊಟ್ಟರೆ 10 ಸಾವಿರ ಬಹುಮಾನ ನೀಡುವುದಾಗಿ ಆಟೋಗಳಲ್ಲಿ ಮೈಕ್ ಹಾಕಿಕೊಂಡು ಸಾಕಷ್ಟು ಜಾಹೀರಾತು ಮಾಡುತ್ತಿದ್ದಾರೆ. ಆದರೆ ಅವರ ಮುದ್ದಿನ ಗಿಳಿ ಎಲ್ಲೂ ಕಾಣಲಿಲ್ಲ. ದುರದೃಷ್ಟವಶಾತ್, ಅವನೊಂದಿಗೆ ಅವನ ಇಡೀ ಕುಟುಂಬವು ಚಿಂತಿತವಾಗಿದೆ.

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ದೀಪಕ್ ಸೋನಿ ಎಂಬ ವ್ಯಕ್ತಿ ತನ್ನ ಕುಟುಂಬದೊ ಮುದ್ದಾದ ಗಿಳಿಯೊಂದನ್ನು ಸಾಕಿತ್ತು. ಒಮ್ಮೆ ಅದು ಹಾರಿಹೋಗಿ ಹಿಂತಿರುಗಿತು. ಆದರೆ ಒಂದು ದಿನ ಮನೆಯಿಂದ ಹಾರಿ ಹೋದ ಗಿಳಿ ಮರಿ ಮರಳಿ ಬರಲೇ ಇಲ್ಲ. ದಿನ ಕಳೆದರೂ ಗಿಳಿ ಮನೆಗೆ ಬಾರದ ಕಾರಣ ದೀಪಕ್ ಮನೆಯವರು ಆತಂಕಗೊಂಡಿದ್ದಾರೆ. ಇಡೀ ಕುಟುಂಬವೇ ದುಃಖಿತವಾಗಿತ್ತು. ಗಿಳಿ ಹುಡುಕಿದರು ಪತ್ತೆಯಾಗಿಲ್ಲ ಹೀಗಾಗಿ ಗಿಳಿ ಇರುವ ಸ್ಥಳ ಪತ್ತೆ ಮಾಡಿಕೊಟ್ಟರೆ ರೂ.10 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಈ ಹಿಂದೆಯೂ ಸಾಕುಪ್ರಾಣಿ, ಪಕ್ಷಿಗಳನ್ನು ಕಳೆದುಕೊಂಡವರು ಇದೇ ರೀತಿ ಹೇಳಿಕೆ ನೀಡಿದ ಪ್ರಕರಣಗಳಿವೆ. ಸಾಕುಪ್ರಾಣಿಗಳು ಮತ್ತು ಪಕ್ಷಿಗಳ ಮೇಲೆ ಜನರ ಪ್ರೀತಿ ತುಂಬಾ ಪ್ರಬಲವಾಗಿದೆ. ಅವರಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಮನುಷ್ಯರು, ಪ್ರಾಣಿಗಳು ಮತ್ತು ಪಕ್ಷಿಗಳು ಅವಿನಾಭಾವ ಸಂಬಂಧವನ್ನು ಹೊಂದಿವೆ.