Paris Olympic 2024: ಮೊದಲ ದಿನವೇ ಭಾರತಕ್ಕೆ ನಿರಾಸೆ, ಏರ್​ ರೈಫಲ್ ವಿಭಾಗದಲ್ಲಿ ಶೂಟರ್​ಗಳು ಫೇಲ್​

Shooting
Published on

ಪ್ಯಾರೀಸ್​: ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ದಿನವೇ ಭಾರತೀಯ ಸ್ಪರ್ಧಿಗಳಿಂದ ನಿರಾಸೆಯ ಪ್ರದರ್ಶನ ಮೂಡಿಬಂದಿದೆ.

ಹತ್ತು ಮೀಟರ್ ಏರ್​ ರೈಫಲ್​ ವಿಭಾಗದಲ್ಲಿ ಭಾರತೀಯ ಶೂಟರ್​ಗಳು ಪದಕ ಬೇಟೆಯಾಡುವಲ್ಲಿ ವಿಫಲರಾಗಿದ್ದಾರೆ. ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಪಡೆಯಲು ಭಾರತದ ಕ್ರಿಡಾಪಟುಗಳು ಕೇವಲ 1 ಅಂಕದಿಂದ ದೂರ ಉಳಿಯುವ ಮೂಲಕ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿದರು.

ಜರ್ಮನಿಯ ಶೂಟರ್​ಗಳು 629.7 ಅಂಕಗಳನ್ನು ಗಳಿಸಿ, ಪದಕದ ಸುತ್ತಿಗೆ ಲಗ್ಗೆ ಇಟ್ಟರೆ, ಭಾರತೀಯ ರಮಿತಾ ಮತ್ತು ಅರ್ಜುನ್ 628.7 ಅಂಕಗಳನ್ನು ಕಲೆಹಾಕಿ ಪದಕದ ಆಸೆಯನ್ನು ಕೈಚೆಲ್ಲುವ ಮೂಲಕ 6ನೇ ಸ್ಥಾನಕ್ಕೆ ಕುಸಿದರು. ಒಟ್ಟು 17 ದಿನಗಳ ಕಾಲ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಮೊದಲ ದಿನವೇ ಭಾರತಕ್ಕೆ ಯಾವುದೇ ಪದಕ ಸಿಗದಿರುವುದು ಭಾರತೀಯರನ್ನು ನಿರಾಸೆಗೆ ದೂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net