ಸಮಾಜಸೇವೆಯೊಂದಿಗೆ ಧಾರ್ಮಿಕ ಸೇವೆ ಸ್ತುತ್ಯರ್ಹ : ಡಾ.ದೇವಿಪ್ರಸಾದ್ ಕಾನತ್ತೂರು ಮೆಚ್ಚುಗೆ

10
Published on

ಸುಬ್ರಹ್ಮಣ್ಯ: ಪಂಜ ಜೇಸಿಸ್ ಸಂಸ್ಥೆಯು ಸಮಾಜಮುಖಿ, ವ್ಯಕ್ತಿತ್ವ ವಿಸನ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಮಾದರಿಯಾಗಿದೆ ಎಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಹೇಳಿದರು.

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಜೆಸಿಐ ಪಂಜ ಪಂಚಶ್ರೀ ಘಟಕದ ಜೇಸಿ ಸಪ್ತಾಹ ಮತ್ತು ಕೆಸರು ಗದ್ದೆ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಾಕೆ ಮಾಧವ ಗೌಡ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿದರು. ಜೆಸಿಸ್ ವಲಯ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಪೆಲ್ತಡ್ಕ ಜೇಸಿ ಸಪ್ತಾಹ ಉದ್ಘಾಟಿಸಿದರು.

ಪಂಜ ಜೆಸಿಸ್ ಅಧ್ಯಕ್ಷ ಮಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು. ಜೆಸಿಸ್ ವಲಯಾಧಿಕಾರಿ ಲೋಕೇಶ್ ಆಕ್ರಿಕಟ್ಟೆ, ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ನಿಕಟಪೂರ್ವಾಧ್ಯಕ್ಷ ಜೀವನ್ ಮಲ್ಕಜೆ, ಸಪ್ತಾಹ ನಿರ್ದೇಶಕ ದೇವಿಪ್ರಸಾದ್ ಚಿಕ್ಮುಳಿ, ಕಾರ್ಯದರ್ಶಿ ಅಶ್ವಥ್ ಬಾಬ್ಲುಬೆಟ್ಟು ಮೊದಲಾದವರಿದ್ದರು.

ವಾಸುದೇವ ಮೇಲ್ಪಾಡಿ ವೇದಿಕೆಗೆ ಆಹ್ವಾನಿಸಿದರು. ಗಗನ್ ಕಿನ್ನಿಕುಮೇರಿ ಜೇಸಿ ವಾಣಿ ವಾಚಿಸಿದರು. ಜೀವನ್ ಶೆಟ್ಟಿಗದ್ದೆ, ಕೌಶಿಕ್ ಕುಳ, ಪ್ರವೀಣ್ ಕುಂಜತ್ತಾಡಿ ಅತಿಥಿಗಳನ್ನು ಪರಿಚಯಿಸಿದರು. ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net