ಚಂದ್ರಶೇಖರ ಸ್ವಾಮೀಜಿ ಜನ್ಮದಿನ ಆಚರಣೆ : ಭಕ್ತ ವೃಂದದಿಂದ ಮೂಲ್ಕಿಯಲ್ಲಿ ಸೇವಾ ಕಾರ್ಯಕ್ರಮ

New Project (34)
Published on

ಮೂಲ್ಕಿ: ಅಧ್ಯಾತ್ಮಿಕ ವಿಶ್ವ ಗುರು, ಅಂತಾರಾಷ್ಟ್ರೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಜನ್ಮ ದಿನಾಚರಣೆ ದೀಪಾವಳಿ ಸಂಭ್ರಮದೊಂದಿಗೆ ಅವರ ಹುಟ್ಟೂರಿನಲ್ಲಿ ಸ್ವಾಮೀಜಿ ಅವರ ಭಕ್ತ ವೃಂದದ ಮೂಲಕ ಅನೇಕ ಸೇವಾ ಕಾರ್ಯಕ್ರಮ ಮೂಲ್ಕಿಯಲ್ಲಿ ನಡೆಯಿತು.

ಶ್ರೀ ಚಂದ್ರಶೇಖರ ಸ್ವಾಮೀಜಿ ಕುಟುಂಬಿಕರಾಗಿ ತಮ್ಮ ಆರಾಧ್ಯ ಕ್ಷೇತ್ರ ತಿರುಪತಿ ಶ್ರೀ ವೆಂಕಟೇಶ್ವರ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಯುಎಇ, ಅರಬ್ ದೇಶದಲ್ಲಿ ನಡೆಯುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸ್ವಾಮೀಜಿ ಅವರ ಬೆಂಗಳೂರು ಮತ್ತು ಮೂಲ್ಕಿಯ ಆಶ್ರಮದ ಮೂಲಕ ವಿವಿಧ ಸಾಮಾಜಿಕ ಕಾರ್ಯ ನಡೆದವು. ಸ್ವಾಮೀಜಿ ಅವರ ಹುಟ್ಟುಹಬ್ಬವನ್ನು ವಿವಿಧ ಸಾಮಾಜಿಕ ಚಟುವಟಿಕೆಯೊಂದಿಗೆ ಆಚರಿಸುವ ಉದ್ದೇಶದಿಂದ ಅವರ ಭಕ್ತರು ಹಾಗೂ ಅಭಿಮಾನಿಗಳು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕುಡಿಯುವ ಶುದ್ಧ ನೀರಿನ ಯಂತ್ರ ಹಾಗೂ ಒಳ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿದರು. ಶ್ರಮಿಕರು, ದುರ್ಬಲ ವರ್ಗ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ನೆರವು, ಬೆಂಗಳೂರಿನ ಸೇವಾಶ್ರಮದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮದೊಂದಿಗೆ ಬಡವರ್ಗದವರಿಗೆ ಉಚಿತ ಕೊಡುಗೆ ನೀಡಲಾಯಿತು.

ಮೂಲ್ಕಿ ನಪಂ ಸದಸ್ಯ ಭೀಮಾಶಂಕರ್ ಆರ್.ಕೆ, ಸಾಮಾಜಿಕ ಕಾರ್ಯಕರ್ತ ವಿಕ್ಕಿ ಶೆಟ್ಟಿ, ನಿಧೀಶ್ ಶೆಟ್ಟಿ ಧರ್ಮಸ್ಥಳ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ಸುವರ್ಣ, ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುನೀಲ್ ಜತ್ತನ್ನ, ಆಯುಷ್ ವೈದ್ಯಾಧಿಕಾರಿ ಡಾ.ದಿವ್ಯಾ, ಶುಶ್ರೂಶಕಿ ಶಾಂತಿ, ಸಿಬ್ಬಂದಿ ಅಶ್ವಿನಿ, ಮೂಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಸಾಮಾಜಿಕ ಕಾರ್ಯಕರ್ತ ಶಿವಾನಂದ ಆರ್.ಕೆ., ಆಶ್ರಮದ ಸಂಚಾಲಕ ಪುನೀತ್ ಕೃಷ್ಣ, ಪತ್ರಕರ್ತ ನರೇಂದ್ರ ಕೆರೆಕಾಡು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net