ಅಶಕ್ತ ಕುಟುಂಬದೊಂದಿಗೆ ಹಬ್ಬ ಆಚರಣೆಯಿಂದ ಸಂತೃಪ್ತಿ : ಕಿಶೋರ್ ಜೆ.ಸಾಲ್ಯಾನ್ ಹೇಳಿಕೆ

New Project (30)
Published on

ಮೂಲ್ಕಿ: ಪರಿಸರದ ಆರ್ಥಿಕ ಅಶಕ್ತ ಕುಟುಂಬದ ಜತೆಯಾಗಿ ಅವರೊಂದಿಗೆ ದೀಪಾವಳಿ ಹಬ್ಬ ಆಚರಿಸಿ ಅವರ ಮುಖದಲ್ಲಿ ಸಂತಸ ಕಾಣುವುದರಿಂದ ಆತ್ಮತೃಪ್ತಿ ಉಂಟಾಗುತ್ತಿದೆ ಎಂದು ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಗೌರವಾಧ್ಯಕ್ಷ ಕಿಶೋರ್ ಜೆ.ಸಾಲ್ಯಾನ್ ಹೇಳಿದರು.

ಬೆಳಕಿನ ಹಬ್ಬ ದೀಪಾವಳಿಯನ್ನು ಆರ್ಥಿಕವಾಗಿ ಹಿಂದುಳಿದ ಎರಡು ಕುಟುಂಬದ ಮನೆಯಲ್ಲಿ ಘಟಕದ ವತಿಯಿಂದ ಆಚರಿಸಿ ಮಾತನಾಡಿದರು.

ಮೂಲ್ಕಿ ಘಟಕ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ನಮ್ಮ ಮನೆ ದೀಪಾವಳಿ ಕಾರ್ಯಕ್ರಮ ಈ ವರ್ಷ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಟ್ಟು ಗ್ರಾಮದ ಬಾಬು ಪೂಜಾರಿ ಹಾಗೂ ಕಕ್ವ ಗ್ರಾಮದ ಬೇಬಿ ಪೂಜಾರ್ತಿ ಮನೆಯಲ್ಲಿ ತಿಂಗಳಿಗೆ ಬೇಕಾದಷ್ಟು ಅಕ್ಕಿ, ದಿನಸಿ ಸಾಮಗ್ರಿ, ಸಿಹಿ ತಿಂಡಿ, ಕುಟುಂಬದ ಹಿರಿಯರಿಗೆ ಸೀರೆ ನೀಡಿ ಆಚರಿಸಿತು.

ಘಟಕಾಧ್ಯಕ್ಷ ಉಮೇಶ್ ಮಾನಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಅತಿಕಾರಿಬೆಟ್ಟು ಗ್ರಾಪಂ ಸದಸ್ಯ ಜಯಕುಮಾರ್, ಘಟಕದ ಉಪಾಧ್ಯಕ್ಷ ಮಾಧವ ಪೂಜಾರಿ ಕಿಲ್ಪಾಡಿ, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಶ್ರೀ ನಾರಾಯಣ ಗುರು ಸೇವಾದಳದ ದಳಪತಿ ಶಶಿಕಾಂತ್ ಚರಂತಿಪೇಟೆ, ಘಟಕ ಸಂಚಾಲಕರಾದ ತಾರಾನಾಥ್ ಎನ್.ಮೂಲ್ಕಿ, ಶಂಕರ್ ಪಡುಬೈಲ್, ಗಿರಿಧರ್ ಅಮೀನ್ ಕೊಕ್ಕರಕಲ್, ರಂಜಿತ್ ಮಾನಂಪಾಡಿ, ಯಶವಂತ್ ಮಾನಂಪಾಡಿ, ಜಗದೀಶ್ ಕಕ್ವಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net