More

    VIDEO: ರಸ್ತೆಬದಿಯಲ್ಲಿ ಮೃತದೇಹವಿದೆ ಎಂಬ ಕರೆಯಿಂದ ಸ್ಥಳಕ್ಕೆ ಹೋದ ಪೊಲೀಸರಿಗೆ ದೊಡ್ಡ ಶಾಕ್

    ಘಾಜಿಯಾಬಾದ್​: ರಸ್ತೆ ಬದಿಯಲ್ಲಿ ಒಂದು ಮೃತದೇಹ ಇದೆ…ತುಂಬ ಹೊತ್ತಿನಿಂದ ಅಲ್ಲಿಯೇ ಇದೆ ಎಂಬ ಕರೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬೇಸ್ತು ಬಿದ್ದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​​ನಲ್ಲಿ ನಡೆದಿದೆ.

    ಜನನಿಬಿಡ ರಸ್ತೆಯ ಪಕ್ಕ ಬಿಳಿ ಬಟ್ಟೆಯನ್ನು ಪೂರ್ತಿಯಾಗಿ ಸುತ್ತಿಕೊಂಡ ಸ್ಥಿತಿಯಲ್ಲಿ ದೇಹವೊಂದು ಇತ್ತು. ಅದನ್ನು ನೋಡಿದ ಸ್ಥಳೀಯರು ಮೃತದೇಹವೆಂದೇ ಭಾವಿಸಿದ್ದರು. ಕೊವಿಡ್​-19 ಇರುವುದರಿಂದ ಅದನ್ನು ಮುಟ್ಟಲು ಭಯಪಟ್ಟು ಪೊಲೀಸರಿಗೆ ಕರೆ ಮಾಡಿದ್ದರು. ಆದರೆ ನಂತರ ಗೊತ್ತಾಯಿತು…ಅದು ಮೃತದೇಹವಲ್ಲ. ವ್ಯಕ್ತಿಯೋರ್ವ ಮೈತುಂಬ ಬಿಳಿ ಬಟ್ಟೆ ಹೊದ್ದು ಮಲಗಿದ್ದ ಎಂದು. ಇದನ್ನೂ ಓದಿ: PHOTOS|ಫ್ರೆಂಚ್​ ನಿರ್ಮಿತ ರಫೇಲ್​ ಸೇನೆ ಸೇರಿದ ಕ್ಷಣ : ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ

    ಅದು ಮೃತದೇಹವೆಂದು ಭಾವಿಸಿದ ಜನರು, ರಸ್ತೆಯಲ್ಲಿ ನಿಂತು ನೋಡಿ ಮುಂದೆ ಹೋಗುತ್ತಿದ್ದರು. ಹತ್ತಿರ ಸುಳಿಯುತ್ತಿರಲಿಲ್ಲ. ಆದರೆ ಪೊಲೀಸರು ಹತ್ತಿರ ಹೋಗಿ ನೋಡುವಷ್ಟರಲ್ಲಿ ಆ ವ್ಯಕ್ತಿ ಎದ್ದುಕುಳಿತಿದ್ದ. ಅವನು ಹೊದ್ದಿದ್ದು ಬಟ್ಟೆಯಾಗಿರಲಿಲ್ಲ. ಬದಲಿಗೆ ಒಂದು ಬಿಳಿ ಪ್ಲಾಸ್ಟಿಕ್​ ಚೀಲವಾಗಿತ್ತು.

    ಇದು 29 ಸೆಕೆಂಡ್​ಗಳ ವಿಡಿಯೋ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ನೆಟ್ಟಿಗರೂ ಸಹ ವಿಚಿತ್ರ ಕಾಮೆಂಟ್​ಗಳನ್ನು ಬರೆದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts