More

    PHOTOS|ಫ್ರೆಂಚ್​ ನಿರ್ಮಿತ ರಫೇಲ್​ ಸೇನೆ ಸೇರಿದ ಕ್ಷಣ : ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ

    ಅಂಬಾಲ: ಫ್ರಾನ್ಸ್ ನಿರ್ಮಿತ ಬಹೂಪಯೋಗಿ ಐದು ರಫೇಲ್ ಫೈಟರ್​ ಜೆಟ್​ಗಳು ಇಂದು ಭಾರತೀಯ ವಾಯುಪಡೆಗೆ ಔಪಚಾರಿಕವಾಗಿ ಸೇರ್ಪಡೆಗೊಂಡಿವೆ. ಅಂಬಾಲ ವಾಯುನೆಲೆಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಸೇರ್ಪಡೆ ನಡೆದಿದ್ದು, ಭಾರತೀಯ ವಾಯುಪಡೆಯ ಬಲವೃದ್ಧಿಯಾಗಿದೆ.

    ಈ ಸಂದರ್ಭವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್​ ಪಾರ್ಲೇ, ಭಾರತೀಯ ಸೇನೆಯ ಚೀಫ್ ಆಫ್ ಡಿಫೆನ್ಸ್ ಸ್ಟಾಫ್​ ಜನರಲ್ ಬಿಪಿನ್ ರಾವತ್​, ಏರ್​ ಚೀಫ್ ಮಾರ್ಷಲ್​ ಆರ್​ಕೆಎಸ್. ಭದೌರಿಯಾ ಮತ್ತು ಫ್ರಾನ್ಸ್​ನ ರಕ್ಷಣಾ ಸಂಸ್ಥೆಯ ಉನ್ನತ ಅಧಿಕಾರಿಗಳು ಕಣ್ತುಂಬಿಕೊಂಡರು. ರಫೇಲ್​ಗೆ ವಾಟರ್​ ಕೆನೋನ್​ ಸಲ್ಯೂಟ್ ವಿಶೇಷ ಆಕರ್ಷಣೆ ಆಗಿತ್ತು. ಅದೇ ರೀತಿ ಸಾಂಪ್ರದಾಯಿಕ ಸರ್ವಧರ್ಮ ಪೂಜೆ ನಂತರ ಏರಿಯಲ್ ಡ್ರಿಲ್ ನಡೆಯಿತು.

    ಇದನ್ನೂ ಓದಿ: ಅಭಿವೃದ್ಧಿ ಕಾಮಗಾರಿಗಳಿಗೆ ಮರು ಶಂಕುಸ್ಥಾಪನೆ ಸಮಂಜಸವಲ್ಲ – ಪಪಂ ಸದಸ್ಯೆ ಡಾ.ನಂದಿತಾ ದಾನರಡ್ಡಿ ಆರೋಪ

    ಜಗತ್ತಿಗೊಂದು ದೊಡ್ಡ ಸಂದೇಶ: ರಫೇಲ್ ಜೆಟ್​ಗಳ ಸೇರ್ಪಡೆಯ ಮೂಲಕ ಜಗತ್ತಿಗೆ ದೊಡ್ಡ ಮತ್ತು ಕಠಿಣ ಸಂದೇಶ ರವಾನೆಯಾಗಿದೆ. ವಿಶೇಷವಾಗಿ ನಮ್ಮ ಸಾರ್ವಭೌಮತೆಯ ಮೇಲೆ ಕಣ್ಣಿಟ್ಟಿರುವ ದೇಶಗಳಿಗೆ ಇದು ಎಚ್ಚರಿಕೆಯ ಸಂದೇಶ. ನಮ್ಮ ಗಡಿಭಾಗದಲ್ಲಿ ಉಂಟಾಗಿರುವ ಸಂಘರ್ಷಮಯ ಸನ್ನಿವೇಶದಲ್ಲಿ ಈ ರೀತಿಯ ಸೇರ್ಪಡೆಯು ಬಹಳ ಮಹತ್ವದ್ದು. ಬದಲಾವಣೆಯ ಸಮಯವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮನ್ನು ನಾವು ಅದಕ್ಕೆ ಸಜ್ಜುಗೊಳಿಸುತ್ತಿದ್ದೇವೆ. ಪ್ರಧಾನ ಮಂತ್ರಿ ನರೇಂದ್ರಮೋದಿಯವರು ನಮ್ಮ ರಾಷ್ಟ್ರೀಯ ಸುರಕ್ಷತೆಯನ್ನೇ ಆದ್ಯತೆಯನ್ನಾಗಿ ಮಾಡಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಇದೇ ವೇಳೆ ಅಭಿಪ್ರಾಯಪಟ್ಟರು.

    ಇದನ್ನೂ ಓದಿ: ಸಮುದ್ರದೊಳಗೆ ದಾಖಲೆ ಸೃಷ್ಟಿಸಿದಳು 100 ವರ್ಷದ ಅಜ್ಜಿ!

    ಫ್ರಾನ್ಸ್​ನ ರಕ್ಷಣಾ ಸಚಿವ ಪಾರ್ಲೇ ಈ ಬಗ್ಗೆ ಪ್ರತಿಕ್ರಿಯಿಸುತ್ತ, ದ್ವಿಪಕ್ಷೀಯ ರಕ್ಷಣಾ ಸಂಬಂಧ ಈ ಮೂಲಕ ಮತ್ತೊಂದು ಮಜಲನ್ನು ತಲುಪಿದೆ. ಹೊಸ ಅಧ್ಯಾಯ ಪ್ರಾರಂಭವಾಗಿದೆ ಎಂದು ಹೇಳಿದರು. (ಏಜೆನ್ಸೀಸ್)

    ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ಪರೇಶ್ ರಾವಲ್ ಸಾರಥ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts