

ನವದೆಹಲಿ: ಬಾಲಿವುಡ್ನ ಹಿರಿಯ ನಟ ಪರೇಶ್ ರಾವಲ್ ಅವರನ್ನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್ಡಿ)ದ ಹೊಸ ಚೇರ್ಮನ್ ಆಗಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಗುರುವಾರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಎನ್ಎಸ್ಡಿ ಟ್ವೀಟ್ ಮೂಲಕ ಹೊಸ ಚೇರ್ಮನ್ ನೇಮಕದ ವಿಚಾರವನ್ನು ಪ್ರಕಟಿಸಿದೆ. ಎನ್ಎಸ್ಡಿಯ ಹೊಸ ಚೇರ್ಮನ್ ಆಗಿ ಪ್ರಸಿದ್ಧ ನಟ ಪದ್ಮಶ್ರೀ ಪರೇಶ್ ರಾವಲ್ ಅವರನ್ನು ಗೌರವಾನ್ವಿತ ರಾಷ್ಟ್ರಪತಿಯವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಎನ್ಎಸ್ಡಿ ಕುಟುಂಬ ಅವರನ್ನು ಬರಮಾಡಿಕೊಳ್ಳುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಇನ್ನಷ್ಟು ಉನ್ನತಿ ಸಾಧಿಸಲು ಎನ್ಎಸ್ಡಿ ಕಾರ್ಯತತ್ಪರವಾಗಲಿದೆ ಎಂಬ ಸಂದೇಶವನ್ನು ಟ್ವೀಟ್ ಮಾಡಿದೆ.
ಹಾಲಿ ಅಧ್ಯಕ್ಷರಾಗಿರುವ ಪ್ರಸಿದ್ಧ ರಂಗ ಕಲಾವಿದ ಅರ್ಜುನ್ ದೇವ್ ಚರಣ್ ಅವರಿಂದ ಪರೇಶ್ ರಾವಲ್ ಅಧಿಕಾರ ಸ್ವೀಕರಿಸಲಿದ್ದಾರೆ. (ಏಜೆನ್ಸೀಸ್)