More

    ನಾಗರಿಕ ಸೇವಾ ಪ್ರಿಲಿಮ್ಸ್ ಬರೆಯುವವರ ಗಮನಕ್ಕೆ…

    ನವದೆಹಲಿ: ನಾಗರಿಕ ಸೇವಾ ನೇಮಕಾತಿಗೆ ಸಂಬಂಧಿಸಿದ ಪ್ರಿಲಿಮ್ಸ್ ಪರೀಕ್ಷೆ ಅಕ್ಟೋಬರ್ 4ರಂದು ದೇಶಾದ್ಯಂತ ನಡೆಯಲಿದ್ದು, ಅದನ್ನು ಬರೆಯುವ ಅಭ್ಯರ್ಥಿಗಳು ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎಂದು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್​ (ಯುಪಿಎಸ್​ಸಿ) ಗುರುವಾರ ತಿಳಿಸಿದೆ.

    ಕರೊನಾ ಸೋಂಕು ವ್ಯಾಪಕವಾಗಿರುವ ಕಾರಣ, ಅದಕ್ಕೆ ಸಂಬಂಧಿಸಿದ ನಿಯಮಗಳ ಪಾಲನೆ ಈ ಬಾರಿ ಕಡ್ಡಾಯವಾಗಿದೆ. ಇದರಂತೆ ಪ್ರಿಲಿಮ್ಸ್ ಬರೆಯಲು ಬರುವವರು ಮಾಸ್ಕ್ ಧರಿಸಿರಬೇಕಾದ್ದು ಕಡ್ಡಾಯ. ಅದೇ ರೀತಿ, ಪಾರದರ್ಶಕ ಬಾಟಲಿಗಳಲ್ಲಿ ಹ್ಯಾಂಡ್​ ಸ್ಯಾನಿಟೈಸರ್ ಅನ್ನೂ ಅಭ್ಯರ್ಥಿಗಳೇ ತೆಗೆದುಕೊಂಡು ಹೋಗಬೇಕು. ಮಾಸ್ಕ್ ಧರಿಸದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿಲ್ಲ. ವೈಯಕ್ತಿಕ ಸ್ವಚ್ಛತೆಯ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ್ದೂ ಅವಶ್ಯ ಎಂದು ಯುಪಿಎಸ್​ಸಿ ಹೇಳಿದೆ.

    ಇದನ್ನೂ ಓದಿ: ನಟಿಯರಿಬ್ಬರಿಗೂ ಡೋಪಿಂಗ್​ ಟೆಸ್ಟ್​; ಅತ್ತುಅತ್ತು ಸುಸ್ತಾದ ಸಂಜನಾಗೆ ರಾಗಿಣಿ ಸಾಂತ್ವನ

    ಈ ಮೊದಲು ಪ್ರಿಲಿಮ್ಸ್ ಮೇ 31ಕ್ಕೆ ನಿಗದಿಯಾಗಿತ್ತು. ಆದರೆ, ಲಾಕ್​ಡೌನ್ ಕಾರಣಕ್ಕೆ ಅದು ಮುಂದೂಡಲ್ಪಟ್ಟಿತ್ತು. ಇದೀಗ ಅಕ್ಟೋಬರ್ 4ರಂದು ದೇಶಾದ್ಯಂತ ಈ ಪರೀಕ್ಷೆ ನಡೆಯುತ್ತಿದ್ದು, ಯುಪಿಎಸ್​ಸಿ ಈಗಾಗಲೇ ಇ-ಅಡ್ಮಿಟ್ ಕಾರ್ಡನ್ನು ಅಪ್ಲೋಡ್ ಮಾಡಿದೆ. ಅಭ್ಯರ್ಥಿಗಳು ಅದರ ವೆಬ್​ಸೈಟ್​ಗೆ ತೆರಳಿ (http://upsconline.nic.in) ಇ-ಅಡ್ಮಿಟ್ ಕಾರ್ಡ್ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆ ಪ್ರಾರಂಭಕ್ಕೆ ಹತ್ತು ನಿಮಿಷ ಇರುವಾಗಲೇ ಪ್ರವೇಶ ದ್ವಾರ ಮುಚ್ಚಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಯುಪಿಎಸ್​ಸಿ ವೆಬ್​ಸೈಟ್ ಗಮನಿಸಬಹುದು.

    ಇದನ್ನೂ ಓದಿ: ಸರ್ಕಾರ ಕೊಟ್ಟರೂ ಹಣ ಕೊಡದ ರೇಷ್ಮೆ ಇಲಾಖೆ: ಬೆಳೆಗಾರರಿಗೆ ಪ್ರೋತ್ಸಾಹಧನ ಸಿಗದೆ ಸಂಕಷ್ಟ

    ಪ್ರತಿ ವರ್ಷ ಸಿವಿಲ್ ಸರ್ವೀಸ್ ಪರೀಕ್ಷೆ ಪ್ರಿಲಿಮಿನರಿ, ಮೇನ್ ಮತ್ತು ಸಂದರ್ಶನ ಎಂಬ ಮೂರು ಹಂತದಲ್ಲಿ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಭಾರತೀಯ ಆಡಳಿತ ಸೇವೆ (ಐಎಎಸ್​), ಭಾರತೀಯ ವಿದೇಶಾಂಗ ಸೇವೆ (ಐಎಫ್​ಎಸ್​), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಇತರೆ ಸೇವೆಗಳಿಗೆ ಸರ್ಕಾರ ನಿಯೋಜಿಸುತ್ತದೆ. (ಏಜೆನ್ಸೀಸ್)

    ಡ್ರಗ್ಸ್ ದಂಧೆಯಲ್ಲಿ ಯಾರೇ ಇದ್ರೂ ಕಾನೂನು ಪ್ರಕಾರವೇ ಕ್ರಮ- ಗೃಹ ಸಚಿವ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts