More

    ಸಮುದ್ರದೊಳಗೆ ದಾಖಲೆ ಸೃಷ್ಟಿಸಿದಳು 100 ವರ್ಷದ ಅಜ್ಜಿ!

    ಇಲಿನಾಯ್ಸ್: ಸಾಧನೆ ಮಾಡಲು ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಈ ಮಾತನ್ನು ಸಾಧಿಸಿ ತೋರಿಸಿದ್ದಾರೆ ಶತಾಯುಷಿ ಅಜ್ಜಿ.

    ಸಮುದ್ರಾಳಕ್ಕೆ ಇಳಿದು ಸ್ಕೂಬಾ ಡೈವಿಂಗ್​ ಮಾಡುವ ಮೂಲಕ ಈ ಅಜ್ಜಿ ವಿಶ್ವದ ಅತಿ ಹಿರಿಯ ಸ್ಕೂಬಾ ಡೈವರ್ ಎಂದು ವಿಶ್ವ ದಾಖಲೆ ಮಾಡಿದ್ದಾರೆ.

    ದಕ್ಷಿಣ ಬೆಲೊಯ್ಟ್ ನ ಇಲ್ಲಿನೊಯ್ಸ್​ನ ನಿವಾಸಿಯಾಗಿರುವ ಬಿಲ್ ಲ್ಯಾಂಬರ್ಟ್ ಕಳೆದ ಭಾನುವಾರ 100ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೀಗ ದಕ್ಷಿಣ ಬೈಲೊಟ್‌ನ ಪಿಯರಲ್ ಲೇಕ್ ನಲ್ಲಿ 27 ನಿಮಿಷ ಸ್ಕೂಬಾ ಡೈವಿಂಗ್ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.

    ಈ ಅಜ್ಜಿ ಹಿಂದೆಯೇ ಅಂದರೆ 98ನೇ ವಯಸ್ಸಿನಲ್ಲಿ ಮೆಕ್ಸಿಕೊದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದರು. ಆದರೆ ದಾಖಲೆಗೆ ಅರ್ಜಿ ಹಾಕಿಲ್ಲದ ಹಿನ್ನೆಲೆಯಲ್ಲಿ ದಾಖಲೆಪುಟ ಸೇರಲು ಸಾಧ್ಯವಾಗಿರಲಿಲ್ಲ. ಇದೀಗ ವಿಶ್ವ ದಾಖಲೆ ಮಾಡಲು ಕನಿಷ್ಠ 20 ನಿಮಿಷ ಸಮುದ್ರದೊಳಗೆ ಇರಬೇಕಿತ್ತು. ಆದರೆ ಈ ಅಜ್ಜಿ 27 ನಿಮಿಷ ಇರುವ ಮೂಲಕ ದಾಖಲೆ ಮಾಡಿದ್ದಾರೆ.

    ಇದನ್ನೂ ಓದಿ: ಇರಾನ್​ನಲ್ಲಿ ಶಾಲೆ ಶುರು: ಮಕ್ಕಳು ಹೇಗೆ ಕುಳಿತಿದ್ದಾರೆ ನೋಡಿಯೊಮ್ಮೆ…

    96ನೇ ವಯಸ್ಸಿನಲ್ಲಿ ಸ್ಕೂಬಾ ಡೈವಿಂಗ್ ಮಾಡಿದ ಬ್ರಿಟನ್​ನ ವಲ್ಲಾಸ್ ರೈಮಂಡ್ ವೂಲಿ ಅವರ ಹೆಸರಿನಲ್ಲಿ ವಿಶ್ವದ ಅತಿ ಹಿರಿಯ ಸ್ಕೂಬಾ ಡೈವರ್ ಎಂಬ ದಾಖಲೆ ಇತ್ತು‌. ಇಷ್ಟು ಮಾಡಿದರೂ ಈ ಅಜ್ಜಿಗೆ ಸಮಾಧಾನವಿಲ್ಲ. 101 ನೇ ವಯಸ್ಸಿನಲ್ಲಿ ಸ್ಕೂಬಾ ಡೈವಿಂಗ್ ಮಾಡಿ ದಾಖಲೆ ನಿರ್ಮಿಸುವ ಇಚ್ಛೆಯನ್ನು ಅವರು ಹೊಂದಿದ್ದಾರೆ. ತಮ್ಮ ದಾಖಲೆಯನ್ನು ತಾವೇ ಮುರಿಯುವ ಉತ್ಸಾಹದಲ್ಲಿ ಇದ್ದಾರೆ.

    ತಮ್ಮ ತಾಯಿಯ ಈ ಐತಿಹಾಸಿಕ ಕ್ಷಣವನ್ನು ನೀಡಲು ಮಗಳು ಬೋಸ್ಟನ್​ನಿಂದ ಹಾಗೂ ಮೊಮ್ಮಗಳು ನ್ಯೂಯಾರ್ಕ್​ನಿಂದ ಬಂದಿದ್ದರು.

    ವಕೀಲ ಪ್ರಶಾಂತ್​​ ಭೂಷಣ್​ ವಿರುದ್ಧದ 11 ವರ್ಷದ ಕೇಸ್​ಗೆ ಮರುಜೀವ- ಏನಿದು ವಿವಾದ?

    ತಾಯಿಗೆ ಹೆಣ್ಣುಮಕ್ಕಳ ಪೂರೈಕೆ ಮಾಡುತ್ತಿದ್ದ ಮಕ್ಕಳು- ಬೀದಿ ಬದಿಯೇ ಇವರ ಅಡ್ಡಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts