More

    ದಾಖಲೆ ಬರೆದ ಕನಿಷ್ಠ ತಾಪಮಾನ

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಗುರುವಾರ ಗರಿಷ್ಠ 33.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಳೆದ 20 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿರುವುದು ಇದೇ ಮೊದಲು.

    ಭಾರತೀಯ ಹವಾಮಾನ ಇಲಾಖೆ ಮೂಲಗಳ ಮಾಹಿತಿಯಂತೆ 2004ರ ಮೇ.1ರಂದು ಗರಿಷ್ಠ 36.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 27.1ಡಿಗ್ರಿ ಸೆಲ್ಸಿಯಸ್ ತಾಪಮಾನ ಈವರೆಗಿನ ಕನಿಷ್ಠ ತಾಪಮಾನದ ಗರಿಷ್ಠ ಏರಿಕೆಯಾಗಿತ್ತು. ಮೇ.4ರಿಂದ 6ರ ವರೆಗೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಏ. 7ರಂದು ಮೋಡ ಚದುರಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಕಳೆದ ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ಪೂರ್ಣ ರೂಪದಲ್ಲಿ ತೇವಾಂಶ ಜತೆಯಲ್ಲಿ ಉಷ್ಣತೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹವಾಮಾನ ಇಲಾಖೆಯ ಪ್ರಕಾರ 2014ರಿಂದ 2024ರ ತನಕನೂ ಬೇಸಿಗೆಯ ಲೆಕ್ಕಚಾರದಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾದ ಉದಾಹರಣೆಗಳು ಸಾಕಷ್ಟು ಇದೆ. ಆದರೆ ಈ ತಾಪಮಾನ ಏರಿದಂತೆ ಮಳೆಯಾಗುವ ಸಾಧ್ಯತೆಗಳೇ ಅಧಿಕ. ಈ ಬಾರಿತಾಪಮಾನ 40ಡಿ.ಸೆ ದಾಟಿದರೂ ಕೂಡ ಮಳೆಯ ಬದಲು ಉಷ್ಣ ಗಾಳಿಯ ಪ್ರಮಾಣವೇ ಅಧಿಕ. ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ನಾನಾ ಭಾಗದಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗೂ ತಲುಪಿದೆ. ಉಷ್ಣತೆ ಏರಿಕೆಯಾದಂತೆ ತೇವಾಂಶದಲ್ಲೂ ನಿರಂತರವಾಗಿ ಏರಿಕೆಯಾಗುತ್ತದೆ.

    ಬಿಸಿಲು ಹಾಗೂ ಒಣ ಹವೆ

    ದ.ಕ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಸೇರಿದಂತೆ ಕರಾವಳಿ ಭಾಗದಲ್ಲಿ ಸರಾಸರಿ 36.1 ಗರಿಷ್ಟ ಉಷ್ಣಾಂಶ ದಾಖಲಾಗಿದೆ. ರಾತ್ರಿ ಮಳೆ ಕಾಡು ಹಾಗು ಪಶ್ಚಿಮಘಟ್ಟದ ಹಲವಡೆ ಹೆಚ್ಚಿನ ಪ್ರಮಾಣದ ಮೋಡಕವಿದ ವಾತಾವರಣ ಕಂಡುಬಂದಿದೆ. ಮುಂದಿನ 2-3 ದಿನ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆಯಿದ್ದು, ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.

    ದ.ಕ ಜಿಲ್ಲೆಯಲ್ಲಿ ಹೀಟ್‌ವೇವ್ ಪ್ರಬಾವ ಇಳಿಕೆ

    ರಾಜ್ಯದ ಹತ್ತಕ್ಕೂ ಅಕ ಜಿಲ್ಲೆಯಲ್ಲಿ ತೀವ್ರವಾದ ಉಷ್ಣ ಅಲೆಗಳು ಮುಂದಿನ ಐದು ದಿನಗಳ ಕಾಲ ಇರಲಿದೆ ಎನ್ನುವ ಮಾಹಿತಿಯನ್ನು ಐಎಂಡಿ ಬಹಿರಂಗ ಪಡಿಸಿದೆ. ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದರ ಪ್ರಭಾವ ಕಡಿಮೆಯಾಗಿದ್ದು, ಉಷ್ಣ ಅಲೆಯ ಬದಲು ತೇವಾಂಶದಲ್ಲಿ ಗಣನೀಯ ಏರಿಕೆ ಕಾಣಿಸಿಕೊಳ್ಳಲಿದೆ. ದ.ಕ.ಜಿಲ್ಲೆಗೆ ಇದೇ ಮೊದಲ ಬಾರಿಗೆ ಯೆಲ್ಲೋ ಜತೆಗೆ ಆರೆಂಜ್ ಅಲರ್ಟ್ ಬಿಸಿಲಿಗೆ ನೀಡಲಾಗಿತ್ತು. ಈ ಹಿಂದೆ ಮಳೆಗಾಲದಲ್ಲಿ ಮಾತ್ರವೇ ಅಲರ್ಟ್‌ಗಳನ್ನು ನೀಡುವ ಕೆಲಸವಾಗುತ್ತಿದ್ದು ಈಗ ಬಿಸಿಲಿಗೂ ಅಲರ್ಟ್ ಘೋಷಣೆಯಾಗುತ್ತಿರುವುದು ಆತಂಕವನ್ನು ಹೆಚ್ಚಳ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts