ಕೆಳಗೆ ಬಿದ್ದು ತನಗೇನೂ ತಿಳಿಯದಂತೆ ಮುಖ ಮಾಡಿಕೊಂಡ ಪಾಂಡಾ; ಈ ವಿಡಿಯೋ ನೋಡಿದರೆ ನಗು ಉಕ್ಕಿ ಬರದೇ ಇರಲಾರದು…

paanda
Published on

ನವದೆಹಲಿ: ಆಗಾಗ ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳ ವೀಡಿಯೋಗಳತ್ತ ಎಲ್ಲರೂ ಆಕರ್ಷಿತರಾಗುವುದೂ ಸಹಜ. ಇದೀಗ ಪಾಂಡಾದ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ನಗು ತಡೆಯಲು ಸಾಧ್ಯವಾಗುತ್ತಿಲ್ಲ.

ಸಾಮಾನ್ಯವಾಗಿ ಪಾಂಡಾ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ವಿಶೇಷವಾಗಿ ಅದು ತುಂಬಾ ಸುಂದರವಾಗಿ ಮತ್ತು ಮುದ್ದಾಗಿದೆ. ಅಂದಹಾಗೆ ವೈರಲ್ ಆಗಿರುವ ವಿಡಿಯೋದಲ್ಲಿ ಪಾಂಡಾ ಉದ್ಯಾನವನದಲ್ಲಿ ಕುರ್ಚಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಅದು ಕುರ್ಚಿಯ ಮೇಲೆ ಕುಳಿತುಕೊಂಡು ಕುರ್ಚಿಯನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಅಲ್ಲಾಡಿಸುತ್ತಾ ಮೋಜು ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ಬೀಳುತ್ತದೆ. ಕೊನೆಗೆ ತಿರುಗಿ ನೋಡಿದ ಪಾಂಡಾ ತನಗೇನು ತಿಳಿಯದವರಂತೆ ಮುಖ ಮಾಡಿಕೊಳ್ಳುತ್ತದೆ. ಹೇಗೋ ತನ್ನನ್ನು ತಾನು ನಿಭಾಯಿಸಿಕೊಂಡು ಆಮೇಲೆ ಎದ್ದು ನಿಲ್ಲುತ್ತದೆ.

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್ 'ಬುಟೊಂಗಿಬಿಡನ್' ಹೆಸರಿನ ಟ್ವಿಟರ್‌ ಪೇಜ್​​​​​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಹೆಚ್ಚು ವೈರಲ್ ಆಗಿದ್ದು, ವಿಡಿಯೋವನ್ನು 23 ಮಿಲಿಯನ್​​​​ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, 247 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋಗೆ ಲೈಕ್ಸ್ ಕೊಟ್ಟಿದ್ದಾರೆ. ಹಾಗೆಯೇ 67 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಈ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸಾಮಾಜಿಕ ಜಾಲತಾಣ ಬಳಕೆದಾರರೂ ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆದಾರರು 'ವಾವ್ ಎಂತಹ ಉತ್ತಮ ವಿಡಿಯೋ', 'ನನಗೆ ನಗು ತಡೆಯಲು ಸಾಧ್ಯವಾಗಲಿಲ್ಲ' ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net