ಬ್ಯಾಟರಾಯನಪುರ ಗ್ರಾಮದೇವರಿಗೆ ಪಂಚಲೋಹದ ಕವಚ; ಅ.2ಕ್ಕೆ ಹೂವಿನ ಪಲ್ಲಕ್ಕಿ ಮೆರವಣಿಗೆ

navara
Published on

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಬ್ಯಾಟರಾಯನಪುರದ ಗ್ರಾಮದೇವತೆಗಳಾದ ಶ್ರೀದೊಡ್ಡಮ್ಮ ಹಾಗೂ ಶ್ರೀ ಮಹೇಶ್ವರಮ್ಮ ದೇವರ ವಿಗ್ರಹಗಳಿಗೆ ಹೊಸದಾಗಿ ಪಂಚಲೋಹದ ಕವಚ ಧಾರಣೆ ಮಾಡಿ ವಿಶೇಷ ಪೂಜೆ ಕೈಗೊಳ್ಳಲಾಯಿತು.

ನವರಾತ್ರಿಯ 5ನೇ ದಿನವಾದ ಶುಕ್ರವಾರ ಹೋಮ-ಹವನ ನಡೆಸಿ ದೇವರಿಗೆ ಕವಚ ತೊಡಿಸಲಾಯಿತು. ಮತ್ತಿಕೆರೆಯ ಬುಡ್ಡಯ್ಯನವರ ಕುಟುಂಬದ ಎಂ.ಸಿ. ಸುನೀಲ್ ಗೌಡ ಅವರು ಚಿನ್ನ ಸೇರಿದಂತೆ 10 ಕೆ.ಜಿ. ತೂಕದ ಪಂಚಲೋಹದ ಕವಚ ಹಾಗೂ ಆಭರಣವನ್ನು ಕೊಡುಗೆಯಾಗಿ ನೀಡಿದರು.

ನವರಾತ್ರಿ ಹಿನ್ನೆಲೆ ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಹೋಮ ಹಾಗೂ ವಿಶೇಷ ಪೂಜೆ, ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ. ವಿಜಯದಶಮಿ ಪ್ರಯುಕ್ತ ಅ.2ರಂದು ಗ್ರಾಮದೇವತೆಗಳು ಹಾಗೂ ಗ್ರಾಮದ ಇನ್ನಿತರ ದೇವರನ್ನು ಹೂವಿನ ಪಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿಯವರು ತಿಳಿಸಿದ್ದಾರೆ.

ಬ್ಯಾಟರಾಯನಪುರ ಗ್ರಾಮದೇವತೆಗಳಿಗೆ ಪಂಚಲೋಹದ ಕವಚ ಹಾಗೂ ಆಭರಣವನ್ನು ಎಸ್.ಚಿಕ್ಕಣ್ಣ, ಮುನಿರತ್ನಮ್ಮ, ಎಂ.ಸಿ. ಸುನೀಲ್ ಗೌಡ, ಪಿ. ಕೀರ್ತಿ. ಕೊಡುಗೆಯಾಗಿ ಸಮರ್ಪಿಸಿದರು. ಈ ವೇಳೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net