ಪ್ಯಾಲೆಸ್ತೀನ್ ಬಾವುಟ ತೆರವುಗೊಳಿಸಿದ ಪೊಲೀಸರು

19bkl1 (1)
Published on

ಭಟ್ಕಳ: ಪ್ಯಾಲೆಸ್ತೀನ್ ಬಾವುಟ ಅಂಟಿಸಿಕೊಂಡು ಓಡಾಡುತ್ತಿದ್ದ ಆಟೋ ರಿಕ್ಷಾವೊಂದರ ಬಾವುಟವನ್ನು ಸಂಸದ ವಿಶ್ವೇಶ್ವರ ಹೆಗಡೆ ಅವರ ಸೂಚನೆ *ಮೆರೆಗೆ ಪೊಲೀಸರು ಬುಧವಾರ ತೆರವುಗೊಳಿಸಿದ್ದಾರೆ.


ಪಟ್ಟಣದಲ್ಲಿ ನಿಗದಿಯಾಗಿದ್ದ ಸದಸ್ಯತ್ವ ಅಭಿಯಾನದ ಪ್ರಚಾರಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಮಿಸಿದ್ದರು. ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆಯಲ್ಲಿ ರಾಜ್ಯದ *ವಿವಿಧಡೆ ಪ್ಯಾಲೆಸ್ತೀನ್ ಬಾವುಟ ಹಿಡಿದು ಓಡಾಡಿದ ಬಗ್ಗೆ ಪ್ರಸ್ತಾಪಿಸಿಸಿದ್ದರು. ಸ್ಥಳೀಯ ರಿಕ್ಷಾಗಳ ಹಿಂಭಾಗದಲ್ಲಿ ಪ್ಯಾಲೆಸ್ತೀನ್ ಬಾವುಟ ಹಾಗೂ ಸ್ಟಿಕ್ಕರ್ ಅಂಟಿಸಿ ಓಡಿಸುತ್ತಿರುವುದನ್ನು ಕೆಲವರು ಸಂಸದರ ಗಮನಕ್ಕೆ ತಂದರು.


ತಕ್ಷಣವೇ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿದ ಸಂಸದರು, ಪ್ಯಾಲೆಸ್ತೀನ್ ಬಾವುಟವಿರುವ ರಿಕ್ಷಾಗಳನ್ನು ಗುರುತಿಸಿ *ಕೂಡಲೆ ಅವುಗಳ *ಮೆಲಿರುವ ಬಾವುಟ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಕಾರ್ಯಪ್ರವೃತ್ತವಾದ ಪೊಲೀಸರು ರಿಕ್ಷಾಗಳಲ್ಲಿನ ಪ್ಯಾಲೆಸ್ತೀನ್ ಬಾವುಟ ತೆರವುಗೊಳಿಸಿದ್ದಾರೆ. ಈ ಬಗೆಗೆ ಹಲವಾರು ಬಾರಿ ದೂರಿದರೂ ಕ್ರಮ ಕೈಗೊಳ್ಳದ ಪೊಲೀಸರು, ಸಂಸದರ ಸೂಚನೆಗೆ ಕಾರ್ಯನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net