ಕ್ರಿಕೆಟರ್​ ಸ್ಮೃತಿ ಮಂಧಾನಗೆ ಕೂಡಿ ಬಂದ ಕಂಕಣ ಭಾಗ್ಯ ; ಶೀಘ್ರದಲ್ಲೇ ಇಂಧೋರ್​​ನ ಸೊಸೆಯಾಗಿಲಿರುವ ಲೇಡಿ ಕ್ರಿಕೆಟರ್​ Smriti Mandhana

untitled-design-2025-10-19t135622195-68f4a0c038aa7 (1)
Published on

ಇಂದೋರ್: ಭಾರತ ತಂಡದ ಕ್ರಿಕೆಟ್​ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಕುರಿತಾದ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಅವರು ( Smriti Mandhana ) ಸಧ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಸ್ವತಃ ಅವರ ಗೆಳೆಯ , ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೋಗಳಲ್ಲಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಮುಚ್ಚಲ್ ಮತ್ತು ಮಂಧಾನಾ ನಡುವಿನ ಸಂಬಂಧದ ಬಗ್ಗೆ ಮಾಧ್ಯಮ ವರದಿಗಳು ಬಹಳ ಹಿಂದಿನಿಂದಲೂ ಸುದ್ಧಿಯನ್ನು ಹರಡುತ್ತಿದ್ದವು. ಆದರೆ ಈವರೆಗೂ ಸಾರ್ವಜನಿಕವಾಗಿ ದಂಪತಿಗಳು ಎಂದು ಘೋಷಿಸಿರಲಿಲ್ಲ.

ಶುಕ್ರವಾರ ರಾಜ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಇಂದೋರ್‌ನ ಮುಚ್ಚಲ್​ ಅವರನ್ನು ಸ್ಮೃತಿ ಜೊತೆಗಿನ ಭಾಂದವ್ಯ ಹಾಗೂ ಅವರೊಂದಿಗೆ ಕಳೆದ ನೆನಪುಗಳ ಬಗ್ಗೆ ಕೇಳಿದಾಗ, "ನಾನು ಹೇಳುವುದು ಇಷ್ಟೇ ಮಂಧಾನ ಶೀಘ್ರದಲ್ಲೇ ಇಂದೋರ್​ನ ಸೊಸೆಯಾಗುತ್ತಾರೆ" ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಹೇಳಿಕೆಗೆ ಸಂಗೀತ ನಿರ್ದೇಶಕಿಯೊಬ್ಬರು ಮಾತನಾಡಿದ್ದು, ನಾನು ನಿಮಗೆ ಶೀರ್ಷಿಕೆ ನೀಡಿದ್ದೇನೆ ಎಂದು ವ್ಯಂಗ್ಯವಾಡಿದರು. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಮತ್ತು ಆರಂಭಿಕ ಬ್ಯಾಟ್ಸ್‌ವುಮನ್ ಮಂಧಾನ, ಭಾನುವಾರ ಇಂಗ್ಲೆಂಡ್ ವಿರುದ್ಧದ ಐಸಿಸಿ ಮಹಿಳಾ ವಿಶ್ವಕಪ್ ಏಕದಿನ ಪಂದ್ಯಕ್ಕಾಗಿ ಇಂದೋರ್‌ನಲ್ಲಿದ್ದಾರೆ ಎಂದು ತಿಳಿಸಿದರು.

ಪಂದ್ಯದ ಬಗ್ಗೆ ಮುಚ್ಚಲ್​ ಪ್ರತಿಕ್ರಿಯೆ

ಭಾರತೀಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಅವರಿಗೆ ನನ್ನ ಶುಭಾಶಯಗಳು. ಭಾರತೀಯ ಕ್ರಿಕೆಟ್ ತಂಡವು ಪ್ರತಿ ಪಂದ್ಯವನ್ನು ಗೆದ್ದು ದೇಶಕ್ಕೆ ಕೀರ್ತಿ ತರಬೇಕೆಂದು ನಾವು ಯಾವಾಗಲೂ ಬಯಸುತ್ತೇವೆ ಎಂದು ಮುಚ್ಛಲ್ ಹೇಳಿದರು.

ತಮ್ಮ ಸಹೋದರಿ ಪಾಲಕ್ ಮುಚ್ಚಲ್ ಅವರೊಂದಿಗೆ ಹಲವಾರು ಬಾಲಿವುಡ್ ಚಿತ್ರಗಳಿಗೆ ಸಂಗೀತ ಸಂಯೋಜಿಸುವ ಮೂಲಕ ಹೆಸರುವಾಸಿಯಾಗಿರುವ ಸಂಗೀತಗಾರ-ಚಲನಚಿತ್ರ ನಿರ್ಮಾಪಕ, ಪ್ರಸ್ತುತ ತಮ್ಮ ನಿರ್ದೇಶನದ 'ರಾಜು ಬಜೆವಾಲಾ' ಚಿತ್ರದ ಚಿತ್ರೀಕರಣದಲ್ಲಿ ಸಧ್ಯ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಜನಪ್ರಿಯ ಟಿವಿ ಧಾರಾವಾಹಿ ಬಾಲಿಕಾ ವಧುವಿನ ಅವಿಕಾ ಗೋರ್ ಮತ್ತು ಪಂಚಾಯತ್ ವೆಬ್ ಸರಣಿಯ ಮೂಲಕ ಮನ್ನಣೆ ಗಳಿಸಿದ ಚಂದನ್ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net