

Delhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಅವರ ದುರಹಂಕಾರದ ಕಾರಣದಿಂದಲೇ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಮಹಾಘಟಬಂಧನ್ ತೊರೆದು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದೆ ಎಂದು ಬಿಜೆಪಿ (BJP IT cell) ತೀವ್ರ ವಾಗ್ದಾಳಿ ನಡೆಸಿದೆ .
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಮಹಾಮೈತ್ರಿಕೂಟವು ತನ್ನ ಉನ್ನತ ನಾಯಕರ ವರ್ತನೆಯಿಂದಾಗಿ ಮುರಿದು ಬಿದ್ದಿದ್ದು, ಬಿಹಾರದಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು ಅದು ಇನ್ನು ಮುಂದೆ ಮಹಾಘಟಬಂಧನದ ಭಾಗವಾಗಿಲ್ಲ ಎಂದು ಘೋಷಿಸಿದೆ. ಅಷ್ಟೇ ಅಲ್ಲ, ಬಿಹಾರ ಚುನಾವಣೆಯ ನಂತರ, ಜಾರ್ಖಂಡ್‌ನಲ್ಲಿ ಮೈತ್ರಿಕೂಟದ ಕುರಿತಾದ ನಿರ್ಧಾರವನ್ನು ಸಹ ಮರುಪರಿಶೀಲಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಮಹಾಘಟಬಂಧನದಲ್ಲಿನ ಸಂಘರ್ಷದ ಹಿಂದಿನ ನಿಜವಾದ ಕಾರಣ ರಾಹುಲ್ ಮತ್ತು ತೇಜಸ್ವಿ ದುರಹಂಕಾರ ಎಂದು ಬರೆದಿದ್ದಾರೆ.
ಇದನ್ನೂ ಓದಿ:ಡಿಸಿಸಿ ಬ್ಯಾಂಕ್ ಚುನಾವಣೆ; ಹೈವೋಲ್ಟೇಜ್ ಕಾದಾಟ!
ಮಾಳವೀಯ ಅವರ ಹೇಳಿಕೆಯನ್ನು ಪುನರುಚ್ಛರಿಸಿದ ಬಿಹಾರ ಬಿಜೆಪಿ ಘಟಕ, ಮಹಾಮೈತ್ರಿಕೂಟ ಕುಸಿಯುತ್ತಿದೆ. ಒಂದೊಂದಾಗಿ ಮಿತ್ರ ಪಕ್ಷಗಳು ತಮ್ಮ ತ್ಯಜಿಸುತ್ತಿವೆ. ಚುನಾವಣೆಗೂ ಮುನ್ನ ಪರಿಸ್ಥಿತಿ ಹೀಗಿದ್ದರೆ, ಚುನಾವಣೆಯ ನಂತರ ಏನಾಗಬಹುದು? ಎಂದು ಪ್ರಶ್ನಿಸಿದೆ. ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಕೂಡ ಮೈತ್ರಿಕೂಟವನ್ನು ಟೀಕಿಸಿದ್ದು, ಮಹಾಘಟಬಂಧನ್‌ನಲ್ಲಿ ಗೊಂದಲವಿದ್ದು, ಮೈತ್ರಿಕೂಟದೊಳಗಿನ ಅಭ್ಯರ್ಥಿಗಳು ಪರಸ್ಪರ ಕದನಕ್ಕಿಳಿದಿದ್ದಾರೆ ಎಂದು ಹೇಳಿದರು.
ನವೆಂಬರ್ 11 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಚಕೈ, ಧಮ್ದಹಾ, ಕಟೋರಿಯಾ (ಎಸ್‌ಟಿ), ಮಣಿಹರಿ (ಎಸ್‌ಟಿ), ಜಮುಯಿ ಮತ್ತು ಪಿರ್‌ಪೈಂಟಿ (ಎಸ್‌ಸಿ) ಎಂಬ ಆರು ಸ್ಥಾನಗಳಲ್ಲಿ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಂಡಿಯಾ ಕೂಟದಂತೆ ಎನ್‌ಡಿಎಯಲ್ಲೂ ಒಳಜಗಳವಿದ್ದು, ನಾವು ಚುನಾವಣೆಯಲ್ಲಿ ಹೋರಾಡುತ್ತೇವೆ, ಗೆಲ್ಲುತ್ತೇವೆ. ಜೆಎಂಎಂ ಬೆಂಬಲವಿಲ್ಲದೆ ಬಿಹಾರದಲ್ಲಿ ಯಾವುದೇ ಸರ್ಕಾರ ರಚನೆಯಾಗದಂತೆ ನೋಡಿಕೊಳ್ಳುತ್ತೇವೆ. ಚುನಾವಣೆಯ ಬಳಿಕ ಜೆಎಂಎಂ ಜಾರ್ಖಂಡ್‌ನಲ್ಲಿನ ಮೈತ್ರಿಕೂಟದ ಕುರಿತಾದ ನಿರ್ಧಾರವನ್ನು ಸಹ ಮರುಪರಿಶೀಲಿಸಲಾಗುವುದು ಎಂದರು. ಅಕ್ಟೋಬರ್ 14 ರೊಳಗೆ ನಮ್ಮ ತಕ್ಕಂತೆ ಗೌರವಯುತ ಸೀಟುಗಳನ್ನು ನೀಡದಿದ್ದರೆ, ಪಕ್ಷ ತನ್ನದೇ ಆದ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಅಕ್ಟೋಬರ್ 11 ರಂದು ಜೆಎಂಎಂ, ಇಂಡಿಯಾ ಬ್ಲಾಕ್ ನಾಯಕರಿಗೆ ಪತ್ರ ಬರೆದಿತ್ತು.
ಬಿಹಾರ ಚುನಾವಣೆಯಲ್ಲಿ ಪಕ್ಷವು ಸ್ವಂತವಾಗಿ ಸ್ಪರ್ಧಿಸಲು ನಿರ್ಧರಿಸಿದೆ, ಈ ಸಂಖ್ಯೆ 6 ರಿಂದ 10 ಕ್ಕೆ ಏರಬಹುದು, ಜೆಎಂಎಂ ಅಧ್ಯಕ್ಷ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದಲ್ಲಿ 20 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಇದೇ ವೇಳೆ ಘೋಷಿಸಿದರು. ಅದರಲ್ಲಿ ಕಲ್ಪನಾ ಸೊರೆನ್, ಬಸಂತ್ ಸೊರೆನ್, ಸ್ಟೀಫನ್ ಮರಾಂಡಿ ಮತ್ತು ಸರ್ಫರಾಜ್ ಅಹ್ಮದ್ ಸೇರಿದ್ದಾರೆ.
ಇದನ್ನೂ ಓದಿ:ಡಿಸಿಸಿ ಬ್ಯಾಂಕ್ ಚುನಾವಣೆ; ಹೈವೋಲ್ಟೇಜ್ ಕಾದಾಟ!
ಜೆಎಂಎಂ ಪಕ್ಷ 12 ಸ್ಥಾನಗಳನ್ನು ಬಯಸಿತ್ತು ಆದರೆ ಅದಕ್ಕೆ ಅವರು ಅವಕಾಶ ನೀಡಲಿಲ್ಲ. ಜೆಎಂಎಂ ಬೇಡಿಕೆ ಇಟ್ಟಿರುವ ಸ್ಥಾನಗಳನ್ನು ಒದಗಿಸುವಂತೆ ನಾವು ಕಾಂಗ್ರೆಸ್, ಎಡ ಪಕ್ಷಗಳು ಮತ್ತು ಬಿಹಾರದ ಅತಿದೊಡ್ಡ ಪಕ್ಷಗಳಲ್ಲಿ ಒಂದಾದ ಆರ್‌ಜೆಡಿಯಂತಹ ಪಕ್ಷಗಳನ್ನು ಒತ್ತಾಯಿಸಿದ್ದೆವು. 2019 ರ ಜಾರ್ಖಂಡ್ ಚುನಾವಣೆಯಲ್ಲಿ, ನಾವು ಕಾಂಗ್ರೆಸ್ ಮತ್ತು ಆರ್‌ಜೆಡಿಗೆ ನಮ್ಮ ಬೆಂಬಲವನ್ನು ನೀಡಿದ್ದೇವೆ. ಪಕ್ಷವು ಆರ್‌ಜೆಡಿಗೆ ಏಳು ಸ್ಥಾನಗಳನ್ನು ನೀಡುವುದಲ್ಲದೆ, ಒಬ್ಬರಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ. 2024 ರ ಜಾರ್ಖಂಡ್ ಚುನಾವಣೆಯಲ್ಲಿಯೂ ಸಹ, ಜೆಎಂಎಂ ಆರ್‌ಜೆಡಿಗೆ ಆರು ಸ್ಥಾನಗಳನ್ನು ನೀಡಿತ್ತು ಮತ್ತು ಒಬ್ಬ ಶಾಸಕನನ್ನು ಸಚಿವರನ್ನಾಗಿ ಮಾಡಿತ್ತು ಎಂದು ಹೇಳಿದರು.
ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್)