ನರಿ ಬುದ್ಧಿ ಬಿಡದ ಪಾಕಿಸ್ತಾನ:ದಾಳಿಯಲ್ಲಿ ಗಾಯಗೊಂಡ ಉಗ್ರರ ಆರೋಗ್ಯ ವಿಚಾರಿಸಿದ ಪಾಕ್ ಸೇನಾಧಿಕಾರಿ |Pakistan Officer

Pakistan Officer
Published on

Pakistan Officer: ಪಾಕಿಸ್ತಾನ್​ ಉಗ್ರರನ್ನು ಮಟ್ಟಹಾಕಲು ಭಾರತೀಯ ಸೇನೆಯೂ ಆಪರೇಷನ್ ಸಿಂಧೂರ ನಡೆಸಿ ದಾಳಿ ಮಾಡಿದೆ. ಈ ಘಟನೆಯಲ್ಲಿ ಪಾಕ್​ನ 80ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಭಾರತ ಯಾವಾಗಲೂ ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯನ್ನು ನೀಡುತ್ತಿದ್ದರೂ ಅದು ಬುದ್ಧಿ ಕಲಿಯುತ್ತಿಲ್ಲ. ಜಗತ್ತಿನ ಅನೇಕ ನಾಯಕರುಗಳು ಈ ಕುರಿತು ಎಷ್ಟೇ ಬುದ್ಧಿಮಾತನ್ನು ಹೇಳಿದರು ಪಾಕ್​​ ಮಾತ್ರ ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ.

ಆದರೆ ಈಗ ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತ ಸೇಡು ತೀರಿಸಿಕೊಂಡಿದೆ. ಆದರೆ ಪಾಕ್​​ ಮಾತ್ರ ತನ್ನ ನರಿ ಬುದ್ಧಿಯನ್ನು ಬಿಟ್ಟಿಲ್ಲ. ಆಪರೇಷನ್ ಸಿಂಧೂರ್​​ ದಾಳಿಯ ಪರಿಣಾಮ ಪಾಕ್​ನ ಹಲವಾರು ಉಗ್ರರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆದರೆ ಪಾಕ್ ಸೇನಾಧಿಕಾರಿ ಆ ಉಗ್ರರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಪಾಕ್ ಸೇನಾಧಿಕಾರಿ ಜೈಷ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಉಗ್ರರ ಕೈಕುಲುಕಿ ವಿಚಾರಿಸಿದ್ದಾರೆ.

ಇಲ್ಲಿದೆ ವಿಡಿಯೋ

ಅಷ್ಟೇ ಅಲ್ಲದೆ ಜಮ್ಮು-ಕಾಶ್ಮೀರದ ಪೂಂಚ್​​ನಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿದ್ದು, ಭಾರತದ 8 ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಆದರೆ ಭಾರತ ಮಾಡಿದ ಆಪರೇಷನ್ ಸಿಂಧೂರ್​​​ನಲ್ಲಿ ಪಾಕ್ ಮಿಲಿಟರಿ ಕ್ಯಾಂಪ್​​ ಮತ್ತು ಜನಸಾಮಾನ್ಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net