ಆಧಾರ್​ ಕಾರ್ಡ್​ನೊಂದಿಗೆ ವಾಸಿಸುತ್ತಿದ್ದ ಪಾಕಿಸ್ತಾನಿ ಭಯೋತ್ಪಾದಕನ ಬಂಧನ

pak
Published on

ನವದೆಹಲಿ: ಭಾರತೀಯ ನಾಗರೀಕನೆಂಬಂತೆ ನಕಲಿ ದಾಖಲಾತಿಯೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದ ಪಾಕಿಸ್ತಾನಿ ಭಯೋತ್ಪಾದಕನೊಬ್ಬನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ನಗರದ ಲಕ್ಷ್ಮೀನಗರದ ರಮೇಶ್​ ಪಾರ್ಕ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೊಹಮ್ಮದ್ ಅಸ್ರಫ್​ ಬಂಧಿತ.

ಬಂಧಿತ ಭಯೋತ್ಪಾದಕನ ಬಳಿಯಿಂದ ಒಂದು ಎಕೆ-47 ಅಸಾಲ್ಟ್​ ರೈಫಲ್​, ಎಕ್ಸ್​ಟ್ರಾ ಮ್ಯಾಗಜಿನ್​, 60 ರೌಂಡ್ಸ್​ ಬುಲೆಟ್​ಗಳು, ಒಂದು ಹ್ಯಾಂಡ್ ಗ್ರೆನೇಡ್​, 2 ಅತ್ಯಾಧುನಿಕ ಪಿಸ್ತೋಲ್​ಗಳು ಮತ್ತು ಅದರ 50 ರೌಂಡ್ಸ್​ ಬುಲೆಟ್​ಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಮೊಹಮ್ಮದ್​ ಅಸ್ರಫ್​ನ ಮನೆ ಮಾಲೀಕನಾದ ಉಜೈಬ್​​, ಸುದ್ದಿ ಸಂಸ್ಥೆ ಎಎನ್​ಐನೊಂದಿಗೆ ಮಾತನಾಡಿದ್ದು, ಅಸ್ರಫ್​ ಅಲ್ಲಿ 6 ತಿಂಗಳು ವಾಸಿಸಿದ್ದ. ತಮ್ಮ ತಂದೆಯೇ ಬಾಡಿಗೆ ಒಪ್ಪಂದ ಮಾಡಿಸುವುದಕ್ಕಾಗಿ ಅವರ ಆಧಾರ್​ ಕಾರ್ಡ್​ ಮಾಡಿಸಿದ್ದರು. ಅವನು ಇಲ್ಲಿಂದ ತೆರಳಿದ ಮೇಲೆ ಸಂಪರ್ಕದಲ್ಲಿರಲಿಲ್ಲ. ಅಗತ್ಯವಿದ್ದರೆ, ಪೊಲೀಸರೊಂದಿಗೆ ನಾವು ಸಹಕರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net