More

    ಮಕ್ಕಳಿಗೂ ಬಂತು ಕರೊನಾ ಲಸಿಕೆ: 2 ರಿಂದ 18 ವರ್ಷದವರಿಗೆ ಕೋವಾಕ್ಸಿನ್​ ತುರ್ತು ಬಳಕೆಗೆ ತಜ್ಞರ ಅನುಮೋದನೆ

    ನವದೆಹಲಿ​: ದೇಶದ ಮೊದಲ ಕೋವಿಡ್​ 19 ಔಷಧ ಕೋವಾಕ್ಸಿನ್​​ ಅನ್ನು 2 ವರ್ಷದ ಮಕ್ಕಳಿಂದ 18 ವರ್ಷದ ವಯೋಮಾನದವರಿಗೆ ತುರ್ತುಬಳಕೆಗೆ ತಜ್ಞರ ಸಮಿತಿ ಮಂಗಳವಾರ ಅನುಮೋದನೆ ನೀಡಿದೆ.

    ಹೈದರಾಬಾದ್ ಮೂಲದ ಭಾರತ್ ಬಯೋಟೆಕ್​ ಎಂಬ ಲಸಿಕೆ ಉತ್ಪಾದಕ ಕಂಪನಿ ಕೋವಾಕ್ಸಿನ್​ ಅನ್ನು ಅಭಿವೃದ್ಧಿಪಡಿಸಿದೆ. ಸೆಪ್ಟೆಂಬರ್‌ನಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ 2 ಮತ್ತು 3ನೇ ಹಂತದ ಪ್ರಯೋಗಗಳನ್ನು ಭಾರತ್​ ಬಯೋಟೆಕ್​ ಪೂರ್ಣಗೊಳಿಸಿತು. ಈ ತಿಂಗಳ ಆರಂಭದಲ್ಲಿ ಪ್ರಯೋಗದ ವರದಿಯನ್ನು ಡ್ರಗ್ಸ್ ಮತ್ತು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಸಲ್ಲಿಸಲಾಗಿತ್ತು

    ಪ್ರಯೋಗದ ವರದಿಯ ಮೇಲೆ ನಡೆದ ವಿವರವಾದ ಚರ್ಚೆಯ ಬಳಿಕ 2 ರಿಂದ 18 ವರ್ಷದ ವಯೋಮಾನದವರಿಗೆ ತುರ್ತು ಬಳಕೆಗೆ ಕೋವಾಕ್ಸಿನ್​ ಲಸಿಕೆಗೆ ತಜ್ಞರ ಸಮಿತಿ ಅನುಮೋದನೆ ನೀಡಿದೆ. ಮೊದಲು ಮತ್ತು ಎರಡನೇ ಡೋಸ್​ಗಳ ನಡುವಿನ ಅಂತರ 20 ದಿನಗಳಿರಬೇಕೆಂದು ಸಮಿತಿ ಸಲಹೆ ನೀಡಿದೆ.

    ಆದರೆ, ಡಬ್ಲ್ಯುಎಚ್‌ಒ ಕೋವಾಕ್ಸಿನ್‌ಗೆ ತುರ್ತು ಬಳಕೆಯ ಅಧಿಕಾರವನ್ನು ಇನ್ನೂ ನೀಡಿಲ್ಲ. ಭಾರತ್ ಬಯೋಟೆಕ್ ಜುಲೈ 9 ರೊಳಗೆ ಡಬ್ಲ್ಯುಎಚ್‌ಒಗೆ ಪಟ್ಟಿ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ ಎಂದು ವರದಿಯಾಗಿದೆ. ಆದರೆ. ಈವರೆಗೂ ಅನುಮತಿ ನೀಡಿಲ್ಲ. ಅಂದಾಜು ಆರು ವಾರಗಳು ತೆಗೆದುಕೊಳ್ಳುವ ಡಬ್ಲ್ಯುಎಚ್‌ಒ ಪರಿಶೀಲನಾ ಪ್ರಕ್ರಿಯೆಯು ಜುಲೈ ಅಂತ್ಯದ ವೇಳೆಗೆ ಆರಂಭವಾಗಿದೆ. (ಏಜೆನ್ಸೀಸ್​)

    ಜನರ- ಜನಪ್ರತಿನಿಧಿಗಳ ದೂರವಾಣಿ ಕರೆ ಸ್ವೀಕರಿಸದ ಸರ್ಕಾರಿ ಅಧಿಕಾರಿಗಳಿಗೆ ಕಾದಿದೆ ಆಪತ್ತು

    ಟಿ20 ವಿಶ್ವಕಪ್​ಗೆ ಕೆಲವೇ ದಿನಗಳಿರುವಾಗಲೇ ಭಾರತದ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಪ್ರಧಾನಿ

    ಸೋಲದೇವನಹಳ್ಳಿಯ ನಾಲ್ವರು ಮಕ್ಕಳು ಪತ್ತೆ: ಪೊಲೀಸರ ಬಳಿ ಮನದ ನೋವನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಮಕ್ಕಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts