'ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನದ ಭಯೋತ್ಪಾದಕ ಗುಂಪು ನೇಪಾಳ ಮಾರ್ಗವನ್ನು ಬಳಸಬಹುದು'| nepal

terrorism-
Published on

ಕಠ್ಮಂಡು ; ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಭಾರತದ ಮೇಲೆ ದಾಳಿ ಮಾಡಲು, ನೇಪಾಳವನ್ನು ಸಾರಿಗೆ ಮಾರ್ಗವಾಗಿ ಬಳಸಬಹುದು ಎಂದು ನೇಪಾಳ ಅಧ್ಯಕ್ಷರ ಸಲಹೆಗಾರ ಸುನಿಲ್ ಬಹದ್ದೂರ್ ಥಾಪಾ ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ನಡೆಯುವ ಭಯೋತ್ಪಾದಕ ಘಟನೆಗಳು ಆಗಾಗ್ಗೆ ನೇಪಾಳದಲ್ಲಿಯೂ ಪ್ರತಿಧ್ವನಿಸುತ್ತವೆ. ಇದು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುತ್ತದೆ ಎಂದು ಥಾಪಾ ಹೇಳಿದ್ದಾರೆ. ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳಿಗೆ ನಿರಂತರ ಬೆಂಬಲ ನೀಡುವುದನ್ನು ಅವರು ಟೀಕಿಸಿದ್ದಾರೆ.

ಭಾರತದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿ ನೇಪಾಳದ ಮೇಲೆ ಪರಿಣಾಮ ಬೀರುತ್ತವೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡುತ್ತವೆ ಎಂಬ ಆತಂಕ ಹೊರಹಾಕಿದ್ದಾರೆ. ಕಠ್ಮಂಡುವಿನಲ್ಲಿ ನೇಪಾಳ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಕೋಆಪರೇಷನ್ ಅಂಡ್ ಎಂಗೇಜ್‌ಮೆಂಟ್ ಆಯೋಜಿಸಿದ್ದ ಉನ್ನತ ಮಟ್ಟದ ವಿಚಾರ ಸಂಕಿರಣದಲ್ಲಿ ಈ ಹೇಳಿಕೆ ನೀಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯ ತುರ್ತು ಸಮಸ್ಯೆಯ ಕುರಿತು ಚರ್ಚಿಸಲು ಈ ಸಮ್ಮೇಳನದಲ್ಲಿ ಪ್ರಮುಖ ಪ್ರಾದೇಶಿಕ ತಜ್ಞರು ಭಾಗವಹಿಸಿದ್ದರು.

ಭಾರತ ಮತ್ತು ನೇಪಾಳ 1,751 ಕಿ.ಮೀ ಉದ್ದದ ಮುಕ್ತ ಗಡಿಯನ್ನು ಹಂಚಿಕೊಂಡಿದ್ದು, ಕನಿಷ್ಠ ಭದ್ರತಾ ತಪಾಸಣೆಗಳೊಂದಿಗೆ ಕಾರ್ಯನಿರ್ವಹಿಸುತ್ತವೆ. ಇದು ಭಯೋತ್ಪಾದಕರು ಭಾರತಕ್ಕೆ ನುಸುಳಲು ಅನುವು ಮಾಡಿಕೊಡುತ್ತದೆ. ಆಗಾಗ್ಗೆ ತಮ್ಮ ಗುರುತನ್ನು ಮರೆಮಾಡಲು ನಕಲಿ ನೇಪಾಳದ ದಾಖಲೆಗಳನ್ನು ಬಳಸುತ್ತಾರೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಸಂಘಟನೆಗಳ ಹಲವಾರು ಭಯೋತ್ಪಾದಕರು ಈ ಹಿಂದೆ ನೇಪಾಳ ಮೂಲಕ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲ್ಪಟ್ಟಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net