

Palwasha Mohammad Zai Khan : ಪಹಲ್ಗಾಮ್ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡ ನಂತರ ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಭಾರತ ನಮ್ಮ ರಾಷ್ಟ್ರದ ಮೇಲೆ ಯಾವಾಗ ದಾಳಿ ಮಾಡುತ್ತೆ ಎಂದು ಭಯದಲ್ಲಿರುವ ಪಾಕಿಸ್ತಾನ, ಅಲ್ಲಿನ ಸಚಿವರು, ಸೇನಾಧಿಕಾರಿಗಳು ಭಾರತದ ವಿರುದ್ಧ ಬೆದರಿಕೆ ಹಾಕುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಅಂತದ್ದೆ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪಾಕಿಸ್ತಾನದ ಸೆನೆಟರ್ ಪಲ್ವಾಶಾ ಮೊಹಮ್ಮದ್ ಜೈ ಖಾನ್ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣದ ಒಂದು ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರು, "ಅಯೋಧ್ಯೆಯಲ್ಲಿ ಹೊಸ ಬಾಬರಿ ಮಸೀದಿಯ ಮೊದಲ ಇಟ್ಟಿಗೆಯನ್ನು ಪಾಕಿಸ್ತಾನಿ ಸೇನಾ ಸೈನಿಕರು ಹಾಕುತ್ತಾರೆ ಮತ್ತು ಮೊದಲ ಅಜಾನ್ ಅನ್ನು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಸ್ವತಃ ನೀಡುತ್ತಾರೆ" ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ.
ಈ ಕ್ಲಿಪ್ ಮಂಗಳವಾರ ಪಾಕಿಸ್ತಾನ ಸಂಸತ್ತಿನಲ್ಲಿ ಅವರು ಮಾಡಿದ ಭಾಷಣದದ್ದು ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ಸೆನೆಟರ್ ಅವರ ಪ್ರಚೋದನಕಾರಿ ಹೇಳಿಕೆಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಈಗಾಗಲೇ ಉದ್ವಿಗ್ನ ಪರಿಸ್ಥಿತಿಯನ್ನು ಹೆಚ್ಚಿಸುವ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ.
ಇನ್ನು ಈ ವಿಡಿಯೋ ಕ್ಲಿಪ್ ಅನ್ನು ಆದಿತ್ಯ ರಾಜ್ ಕೌಲ್ ಎಂಬುವರು ಹಂಚಿಕೊಂಡಿದ್ದು, ಪಾಕಿಸ್ತಾನವು ಭಯೋತ್ಪಾದನೆ, ದ್ವೇಷ, ಇಸ್ಲಾಮಿಕ್ ಉಗ್ರವಾದದ ಬಗ್ಗೆ. ಇದು ಪಾಕಿಸ್ತಾನಿ ಸೆನೆಟರ್ ಪಲ್ವಾಶಾ ಮೊಹಮ್ಮದ್ ಜೈ ಖಾನ್ ಎಂದು ಬರೆದಿಕೊಂಡಿದ್ದಾರೆ.
ಅಲ್ಲದೆ, ಈ ಹಿಂದೆ ''ಸಿಂಧೂ ನೀರು ನಿಲ್ಲಿಸಿದರೆ ನದಿಗಳಲ್ಲಿ ರಕ್ತಹರಿಯುತ್ತದೆ((ಭಾರತೀಯರ)) ಎಂದು ಪಾಕಿಸ್ತಾನ ಪಿಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಬೆದರಿಕೆ ಹಾಕಿದ್ದರು. ಇದೀಗ ಇಂತದ್ದೇ ಹೇಳಿಕೆ ಹೊರ ಬಿದ್ದಿದ್ದೆ.(ಏಜೆನ್ಸೀಸ್)