ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೂ ಈಗ ಕರೊನಾ ಭೀತಿ; ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಹೋಗಿದ್ದ ಅವರಿಗೀಗ ಟೆಸ್ಟ್​ ಮಾಡಿಸಿಕೊಳ್ಳುವುದು ಅನಿವಾರ್ಯ...

Imran Khan
Published on

ಇಸ್ಲಾಮಾಬಾದ್: ವಾರದ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರನ್ನು ಭೇಟಿಯಾಗಿದ್ದ ವ್ಯಕ್ತಿಯಲ್ಲಿ ಕರೊನಾ ವೈರಸ್ ಇರುವುದು ದೃಢಪಟ್ಟಿದೆ.

ಎಡಿ ಫೌಂಡೇಷನ್‌ನ ಅಧ್ಯಕ್ಷ ಫೈಸಲ್ ಏಪ್ರಿಲ್ 15ರಂದು ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದರು. ಕಳೆದ ನಾಲ್ಕೈದು ದಿನಗಳಿಂದ ಫೈಸಲ್ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿದೆ ಎಂದು ಫೈಸಲ್ ಅವರ ಮಗ ಸಾದ್ ತಿಳಿಸಿದ್ದಾರೆ.

ಫೈಸಲ್ ತಮ್ಮ ಸಂಸ್ಥೆಯ ವತಿಯಿಂದ ಒಂದು ಕೋಟಿ ರೂ. ಚೆಕ್‌ನ್ನು ಪಾಕ್ ಪ್ರಧಾನಿಯ ಕರೊನಾ ನಿಯಂತ್ರಣ ನಿಧಿಗೆ ನೀಡಿದ್ದರು. ಈ ಚೆಕ್‌ನ್ನು ಸ್ವತಃ ಇಮ್ರಾನ್ ಖಾನ್ ಸ್ವೀಕರಿಸಿದ್ದರು ಎನ್ನಲಾಗಿದೆ.

ಸದ್ಯ ಫೈಸಲ್ ಆಸ್ಪತ್ರೆಗೆ ದಾಖಲಾಗದೆ ಇಸ್ಲಾಮಾಬಾದ್‌ನಲ್ಲಿರುವ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಕರೊನಾ ಸೋಂಕಿತ ಫೈಸಲ್‌ನ ಪ್ರಾಥಮಿಕ ಸಂಪರ್ಕ ಬೆಳೆಸಿದ ಇಮ್ರಾನ್ ಖಾನ್ ಕರೊನಾ ಪರೀಕ್ಷೆ ನಡೆಸಿಕೊಳ್ಳುತ್ತಾರೆಯೇ ಎನ್ನುವುದರ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net